ಜೋಗೇಶ್ವರಿ ಮಜಾಸ್ವಾಡಿಯಲ್ಲಿನ ಶ್ರದ್ಧಾ ಕನ್ಸ್ಟ್ರ್ರಕ್ಷನ್ ನರ್ಲಕ್ಷ್ಯಕ್ಕೆ ಬಲಿಯಾದ ಸಂಸ್ಕೃತಿ ಅಮೀನ್
ಅಮಾಯಕ ಯುವತಿ ಸಾವಿನ ನ್ಯಾಯಕ್ಕೆ ಹೋರಾಟ ‘ಜಸ್ಟೀಸ್ ಫಾರ್ ಸಂಸ್ಕೃತಿ’ಸಿದ್ಧತೆ ಮುಂಬಯಿ: ಕಳೆದ ಬುಧವಾರ ಉಪನಗರ ಜೋಗೇಶ್ವರಿ ಪೂರ್ವದ ಮಜಾಸ್ವಾಡಿಯ ಠಾಕೂರ್ ರಸ್ತೆಯಲ್ಲಿನ ಮಹಾರಾಜ ಭವನ ಪ್ರದೇಶದಲ್ಲಿ ಶಿವಕುಂಜ್ ಬಿಲ್ಡಿಂಗ್ನಿಂದ ಸಿಮೆಂಟ್ ಬ್ಲಾಕ್ ಬಿದ್ದು ತುಳು ಕನ್ನಡತಿ 22 ಹರೆಯದ ಯುವತಿ ಕು| ಸಂಸ್ಕೃತಿ ಅಮೀನ್ ಸ್ಥಳದಲ್ಲೇ ವಿಧಿವಶರಾಗಿದ್ದಾರೆ. ಮಂಗಳೂರು ತಾಲೂಕು ಕಿನ್ನಿಗೋಳಿ ಹಳೆಯಂಗಡಿ ರಸ್ತೆಯಲ್ಲಿನ ಪಕ್ಷಿಕೆರೆ ಅಲ್ಲಿನ ಪದ್ಮಾವತಿ ಲಾನ್ ಎಂಡ್ ಮಲ್ಟಿಪರ್ಪಸ್ ಹಾಲ್ ಮತ್ತು ಮುಂಬಯಿಯಲ್ಲಿನ ಕೋಟ್ಯಾನ್ ಕ್ಯಾಟರರ್ಸ್ನ ಮಾಲೀಕ ಅನಿಲ್ ಅಮೀನ್ ಮತ್ತು ಪದ್ಮಾವತಿ ಅಮೀನ್ ದಂಪತಿಯ ಏಕೈಕ ಸುಪುತ್ರಿಯಾಗಿದ್ದ ಕು| More...
ಜೋಗೇಶ್ವರಿ ಮಜಾಸ್ವಾಡಿಯಲ್ಲಿನ ಶಿವಕುಂಜ್ ಬಿಲ್ಡಿಂಗ್ನಿಂದ ಸಿಮೆಂಟ್ ಬ್ಲಾಕ್ ಬಿದ್ದು ಕಿನ್ನಿಗೋಳಿ-ಪಕ್ಷಿಕೆರೆ ಮೂಲತಃ ಯುವತಿ ಸಂಸ್ಕೃತಿ ಅಮಿನ್ ವಿಧಿವಶ
ಮುಂಬಯಿ: ಉಪನಗರ ಜೋಗೇಶ್ವರಿ ಪರ್ವದ ಮಜಾಸ್ವಾಡಿಯ ಠಾಕೂರ್ ರಸ್ತೆಯಲ್ಲಿನ ಮಹಾರಾಜ ಭವನ ಪ್ರದೇಶದಲ್ಲಿ More...
ಸೆ.20: ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರುನ ತಿಂಗಳ ನಾಟಕ ಸಂಭ್ರಮದಡಿಯಲ್ಲಿ ಕನ್ನಡ ಕಲಾ ಕೇಂದ್ರ ಮುಂಬಯಿ ‘ಚೌಕಟ್ಟಿನಾಚೆಯ ಚಿತ್ರ’ ನಾಟಕ ಪ್ರದರ್ಶನ
ಮುಂಬಯಿ: ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ತಿಂಗಳ ನಾಟಕ ಸಂಭ್ರಮದಡಿಯಲ್ಲಿ ಬೆಂಗಳೂರುನ ಮಲ್ಲತ್ತಹಳ್ಳಿಯಲ್ಲಿ ಅಲ್ಲಿನ ಕಲಾಗ್ರಾಮ ಸಮುಚ್ಛಯ ಭವನದಲ್ಲಿ ಇದೇ ಬರುವ ಶನಿವಾರ (ಸೆ.20) ಸಂಜೆ 6:00 ಗಂಟೆಗೆ ‘ಚೌಕಟ್ಟಿನಾಚೆಯ ಚಿತ್ರ’ ನಾಟಕವನ್ನು ಪ್ರಸ್ತುತ ಪಡಿಸಲಿದ್ದಾರೆ. ತೃತೀಯ ಲಿಂಗಿಗಳ ಬದುಕಿನ ಕಥೆವ್ಯಥೆಯುಳ್ಳ ನಾಟಕವನ್ನು ಮುಂಬಯಿಯಲ್ಲಿನ ಹೆಸರಾಂತ ರಂಗಕರ್ಮಿ ಸಾ.ದಯಾ (ದಯಾನಂದ್) ರಚನೆ ಮತ್ತು ನಿರ್ದೇಶನದಲ್ಲಿ ಪ್ರದರ್ಶನ ಕಾಣಲಿದೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾಕೆ.ವಿ ನಾಗರಾಜಮೂರ್ತಿ ಅಧ್ಯಕ್ಷತೆಯಲ್ಲಿ ಅಂದು ಜರಗುವ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ರಂಗ ಸಂಘಟಕ ವಿ.ಎಂ ನಾಗೇಶ್ (ಚಡ್ಡಿ ನಾಗೇಶ್) ಆಗಮಿಸಲಿರುವರು. ಕನ್ನಡ ಕಲಾ ಕೇಂದ್ರ ಮುಂಬಯಿ ಇದರ ಅಧ್ಯಕ್ಷ ಮಧುಸೂದನ ಟಿ.ಆರ್ ಈ ನಾಟಕವನ್ನು ನಿರ್ವಹಿಸಲಿದ್ದು ಸಾ.ದಯಾ ಅವರದ್ದೇ ಬೆಳಕು ಸಂಯೋಜನೆ, ನಯನಾ ಸಾಲ್ಯಾನ್ ಮತ್ತು ಗೀತಾ ದೇವಾಡಿಗ ವಸ್ತ್ರ ವಿನ್ಯಾಸ, ಗಣೇಶ್ ಕುಮಾರ್ ಅವರ ಕಲೆ ಮತ್ತು ರಂಗ ಪರಿಕರದೊಂದಿಗೆ ದಿವಾಕರ್ ಕಟೀಲ್ ಅವರ ಸಂಗೀತ, ವಿದ್ದು ಉಚ್ಚಿಲ್ ಅವರ ರಂಗ ವಿನ್ಯಾಸ, ಮನೋಹರ್ ಶೆಟ್ಟಿ ನಂದಳಿಕೆ ಮತ್ತು ಪೂರ್ಣಿಮಾ ಮಧುಸೂದನ ಟಿ. ಆರ್ ಅವರ ರಂಗ ನಿರ್ವಹಣೆ, ರಾಮಾನುಗ್ರಹ ಕ್ಯಾಟರರ್ಸ್ನ ಸಹಕಾರ, ಶಶಿ ಕಿರಣ್, ಸುಷ್ಮಾ ಆಚಾರ್ಯ ಅವರ ಸಾಂಗತ್ಯದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಮಂಜುನಾಥ್ ಶೆಟ್ಟಿಗಾರ್ ಪ್ರಸಾಧನಗೈಯಲಿದ್ದಾರೆ. ಮಧುಸೂದನ ಟಿ.ಆರ್ ಸೇರಿ ಒಟ್ಟು 20 ಹಿರಿಕಿರಿಯ ಕಲಾವಿದರು, 32 ಭಿನ್ನಭಿನ್ನ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ವೇದಿಕೆ ಮೇಲೆ ಮತ್ತು ವೇದಿಕೆ ಹಿಂದುಗಡೆ ಒಟ್ಟು 27 ಮಂದಿ ಕಲಾವಿದರು ತೊಡಗಿಸಿ ಕೊಂಡಿರುವರು. ರಂಗಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಂಡವನ್ನು ಪ್ರೋತ್ಸಾಹಿಸಬೇಕೆಂದು ಕನ್ನಡ ಕಲಾ ಕೇಂದ್ರ ಮುಂಬಯಿ ವಿನಂತಿದೆ. ಈ ಹೊತ್ತಿಗೆ ಬೆಂಗಳೂರು ಸಂಚಾಲಕರಾದ ಜಯಲಕ್ಷ್ಮಿ ಪಾಟೀಲ್, ಕರ್ನಾಟಕ ನಾಟಕ ಅಕಾಡೆಮಿ ಇದರ ಕಾರ್ಯಕ್ರಮ ಸಂಚಾಲಕರಾದ ಜಿಪಿಓ ಚಂದ್ರು, ಜಗದೀಶ್ ಜಾಲ, ಅಕಾಡೆಮಿ ರಿಜಿಸ್ಟ್ರಾರ್ (ಪ್ರ) ಎನ್.ನಮ್ರತ ಮತ್ತು ಸರ್ವ ಸದಸ್ಯರು ನಾಟಕ ಕಲಾವಿದರಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ. ಮುಂಬಯಿ ಮಹಾನಗರದಲ್ಲಿ ಕನ್ನಡ ಕಲಾ ಕೇಂದ್ರವು ಎಪ್ಪತ್ತು ವರುಷಗಳಿಂದ ನಾಟಕೋತ್ಸವ, ರಂಗಶಿಬಿರ, ಪ್ರಶಸ್ತಿ ಗೌರವ, ವಿವಿಧ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಂತಹ ಪ್ರತಿಷ್ಠಿತ ಸಂಸ್ಥೆ. ಈಗಾಗಲೇ 550ಕ್ಕೂ ಹೆಚ್ಚು ನಾಟಕ ರಂಗ ಪ್ರಯೋಗ , 75ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ, ಹಲವು ನೃತ್ಯ, ಸಂಗೀತ, 10ಕ್ಕೂ ಹೆಚ್ಚು ನಾಟಕ ತರಬೇತಿ ಶಿಬಿರ ಏರ್ಪಡಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಫೆಬ್ರುವರಿ ತಿಂಗಳಲ್ಲಿ ಕಲಾ ಕೇಂದ್ರದ ಮೂಲಕ ಸಾಗರದ ನಾಟಕೋತ್ಸವದಲ್ಲಿ ‘ಬಿಸಿಲು ಬೆಳದಿಂಗಳು’ ನಾಟಕ ಪ್ರದರ್ಶನದ ಅದ್ಧೂರಿ ಯಶಸ್ಸಿನ ಬೆನ್ನಲ್ಲಿ ಈಗ ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಗರಿ. ಅದೇ ದಿನ ಸಂಜೆ ‘ಚೌಕಟ್ಟಿನಾಚೆಯ ಚಿತ್ರ ನಾಟಕದ ಕಲಾವಿದರೊಂದಿಗೆ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಹಾಗೂ ಒಂದೆಡೆ ಸಂಸ್ಥೆಯ ಸಂಸ್ಥಾಪಕಿಅಕ್ಕೆ ಪದ್ಮಶಾಲಿ ಸಂವಾದ ನಡೆಸಲಿದ್ದಾರೆ ಎಂದು ತಂಡದ ಮುಖ್ಯಸ್ಥರು ತಿಳಿಸಿದ್ದಾರೆ. More...
ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿಚಂದ್ರಶೇಖರ ಆರ್.ಬೆಳ್ಚಡ ಕಟೀಲು ಆಯ್ಕೆ
ಮುಂಬಯಿ: ಕರ್ನಾಟಕ ಕರಾವಳಿಯ ಮುಲ್ಕಿ ಸನಿಹದ ಹಳೆಯಂಗಡಿ ಸಮೀಪದ ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ನೂತನ ಆಡಳಿತ ಮುಕ್ತೇಸರರಾಗಿ ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷರೂ ಹಾಗೂ ಬೃಹನ್ಮುಂಬಯಿಯಲ್ಲಿನ ಪ್ರಸಿದ್ಧ ಉದ್ಯಮಿ ಕಟೀಲು ಗಂಪ ಮನೆ ನಿವಾಸಿ ಚಂದ್ರಶೇಖರ ಆರ್.ಬೆಳ್ಚಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಈ ವರ್ಷ ಬ್ರಹ್ಮಕಲಶೋತ್ಸವವು ನಡೆಯಲಿರುವ ಕ್ಷೇತ್ರದ ಆಡಳಿತ ಸಮಿತಿಯ ನೂತನ ಉಪಾಧ್ಯಕ್ಷರಾಗಿ ಉಡುಪಿ ಜಿಲ್ಲೆಯ ಪಂದಿಬೆಟ್ಟು ಮೂಲದ ಉದ್ಯಮಿ ಹಾಗೂ ಸಮಾಜ ಸೇವಕ ವಿಶ್ವನಾಥ ಬೆಳ್ಚಡ ಮುಂದಿಬೆಟ್ಟು (ಉಡುಪಿ) ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ವಾಮನ್ ಇಡ್ಯಾ ಹಾಗೂ ಕ್ಷೇತ್ರದ ಪ್ರಧಾನ ಅರ್ಚಕರು ಮತ್ತು ಅನುವಂಶಿಕ ಮೊಕ್ತೇಸರ ಶ್ರೀನಿವಾಸ (ಅಪ್ಪು ಪೂಜಾರಿ) ಅವರು ಅಧಿಕೃತವಾಗಿ ಇಂದಿಲ್ಲಿ ಪ್ರಕಟಿಸಿದ್ದಾರೆ. ಇದೇ 2025ರ ಮಾರ್ಚ್ 4 ರಿಂದ 8ರ ತನಕ ಬ್ರಹ್ಮಕಲಶ, ಏಪ್ರಿಲ್ ೧೦ ರಂದು ನಡಾವಳಿ ಮಹೋತ್ಸವ ಮತ್ತು ಏಪ್ರಿಲ್ ೧೧ ರಿಂದ ಒಂದು ವಾರಗಳ ಕಾಲ ಭರಣಿ ಮಹೋತ್ಸವವು ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದಲ್ಲಿ ನಡೆಯಲಿದೆ. ನೂತನ ಆಡಳಿತ ಮೊಕ್ತೇಸರ ಹಾಗೂ ಉಪಾಧ್ಯಕ್ಷರ ಸಮರ್ಥ ಮುಂದಾಳತ್ವದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿವೆ ಎಂದು ಎಳುಊರ ಗುರಿಕಾರರು ಹಾಗೂ ದೇವಸ್ಥಾನದ ಟ್ರಸ್ಟಿಗಳು ಆಶಯ ವ್ಯಕ್ತಪಡಿಸಿದ್ದಾರೆ. ಶ್ರೀ ಚಂದ್ರಶೇಖರ್ ಆರ್.ಬೆಳ್ಚಡ: ಮಂಗಳೂರು ತಾಲೂಕಿನ ವಿಶ್ವಪ್ರಸಿದ್ಧ ಕಟೀಲು ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಣೀಯ, ಪುಣ್ಯಸ್ಥಳಗಳಲ್ಲಿ ಒಂದು. ನಂದಿನಿ ನದಿಯ ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಶ್ರೀ ಭ್ರಮರಾಂಭಿಕೆ ನೆಲೆಯಾದ ಅಲ್ಲಿನ ನಂದಿನಿ ನದಿಯ ಮೇಲ್ದಂಡೆಯ ನಿವಾಸಿಗಳೇ ರಾಮ ತಿಮ್ಮಪ್ಪ ಮತ್ತು ಸೀತು ರಾಮ ದಂಪತಿ. ಅವರ ಸುಪುತ್ರರೇ ಚಂದ್ರಶೇಖರ್ ಆರ್.ಬೆಳ್ಚಡ. ಕಟೀಲುನಲ್ಲಿ ಪ್ರೌಢ ವಿದ್ಯಾಭ್ಯಾಸ ಮಾಡಿ ಮುಂಬಯಿಗೆ ಬಂದು ವಾಣಿಜ್ಯ ಪದವಿಯನ್ನು ಓದುತ್ತಿರುವಾಗಲೇ ಒಂದು ವಿಶೇಷವಾದ ಕ್ಷೇತ್ರ ಎಂದೆಣಿಸಿದ ಅಗಡಾದ ಅವಶ್ಯಕ (ರಿಫ್ರಾ ಕ್ಚರ್ ಮಟೀರಿಯಲ್) ಕಂಪೆನಿಯಲ್ಲಿ ಕೆಲಸ ಆರಂಭಿಸಿದ್ದರು. ನಂತರ ಉನ್ನತ ಶಿಕ್ಷಣ ಪೂರೈಸಿ, ಆಸಕ್ತ ವಿಚಾರದ ಸಾಕಷ್ಟು ಮಾಹಿತಿ ದೊರಕಿಸಿದರು. ಕ್ರಮೇಣ ಉಪನಗರ ಥಾಣೆಯಲ್ಲಿ ತನ್ನದೇ ಆದ ಸ್ವಂತದ ಪಿ.ಪಿ ರೆಫ್ರಕ್ಟೊರೀಸ್ ಕಾರ್ಪೋರೇಶನ್ ಸಂಸ್ಥೆಯನ್ನು ರೂಪಿಸಿ ಕೊಂಡರು. ಆ ಮೂಲಕ ತನ್ನ ಸ್ವಂತಿಕೆಯ ವ್ಯವಹಾರಿಸಿ ಕರೋಝನ್ ಆಂಡ್ ಕಂಟ್ರೋಲ್ ಕಂಪೆನಿಯು ದೇಶದ ಅನೇಕ ಭಾಗಗಳಲ್ಲಿ ಹಾಗೂ ಲಾಗೊಸ್, ಸಿಂಗಾಪುರ, ಥೈಲ್ಯಾಂಡ್ ಮತ್ತು ದುಬಾಯಿ (ಯುಎಇ) ದೇಶಗಳಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಿದ ನಿಸ್ಸೀಮಾ ಯುವ ಉದಯೋನ್ಮುಖ ಉದ್ಯಮಿ ಆಗಿ ಗುರುತಿಸಿ ಕೊಂಡರು. ಗ್ಲೋಬಲ್ ಫೌಂಡೇಶನ್ ಅಚೀವರ್ (ಜಿಎಫ್ಎ) ಸಂಸ್ಥೆಯು ರಷ್ಯಾ ರಾಷ್ಟ್ರದ ಟಶ್ಖೆಂಟ್ (ಉಝ್ಬೆಕೀಸ್ತಾನ್)ನ ಅಲ್ಲಿನ ಕುಶ್ಬೆಗಿ ಸ್ಟ್ರೀಟ್ನ ಅಮರ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಾಗತಿಕ ಅರ್ಥಶಾಸ್ತ್ರದ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿ (ಗ್ಲೋಬಲಾಯಿಝೇಶನ್ ಆಫ್ ಇಕಾನಾಮಿಕ್ ಗ್ರೋಥ್ ಎಂಡ್ ಸೋಶಿಯಲ್ ಡೆವಲಪ್ಮೆಂಟ್) ವಿಚಾರಿತ ಮಹಾಸಮ್ಮೇಳನದಲ್ಲಿ ಚಂದ್ರಶೇಖರ್ ಬೆಳ್ಚಡ ಇವರ ಸಾಧನೀಯ ಸೇವೆ ಪರಿಗಣಿಸಿ (೦೭,ಜುಲೈ.೨೦೧೯) More...
ಅಮೆರಿಕದ ಇಮೇಜ್ ಕಾಲಿಗ್ ಸೊಸೈಟಿ ಇಂಟರ್ನ್ಯಾಷನಲ್ನಿಂದ ಖ್ಯಾತ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ಗೆ ಗೌರವ ಫೆಲೋಶಿಪ್
ಮುಂಬಯಿ: ವಿಶ್ವ ಛಾಯಾಗ್ರಹಣ ದಿನದಂದು, ಖ್ಯಾತ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರಿಗೆ More...
ರಾಷ್ಟ್ರೀಯ ಹಬ್ಬವನ್ನಾಗಿಸಿ ತುಳು ಸಂಘ ಬರೋಡಾ ಆಚರಿಸಿದ ೭೯ನೇ ಸ್ವಾತಂತ್ರ್ಯೋತ್ಸವ ಸ್ವಾತಂತ್ರ್ಯ ಹೋರಾಟಗಾರರಾಧಾರಿತ ವೇಷಭೂಷಣ-ವಿವಿಧ ಸ್ಪರ್ಧೆ
ಮುಂಬಯಿ: ತುಳು ಸಂಸ್ಕೃತಿ, ಭಾಷೆ, ದೇಶಭಕ್ತಿ ಮತ್ತು ಪ್ರೀತಿಯನ್ನು ಉಜ್ಜೀವನ ಗೊಳಿಸುವ ಉದ್ದೇಶದಿಂದ More...
ನಾಸಿಕ್ ಗೋದಾವರಿ ತಟದ ತಪೋವನದ ಪೇಜಾವರ ಮಠದ ಶಾಖೆಯಲ್ಲಿಶ್ರೀರಾಘವೇಂದ್ರ ಗುರುಗಳ ಆರಾಧನಾ ಮಹೋತ್ಸವ ಆಚರಣೆ
ಮುಂಬಯಿ: ಮಹಾರಾಷ್ಟ್ರ ರಾಜ್ಯದ ಪ್ರಸಿದ್ಧ ಯಾತ್ರಾ ಹಾಗೂ ತೀರ್ಥ ಕ್ಷೇತ್ರಗಳಲ್ಲಿ ಒಂದಾದ ನಾಸಿಕ್ನ ಗೋದಾವರಿ ನದಿ ತೀರದ ಪಂಚವಟಿಯಲ್ಲಿ ಉಡುಪಿ ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ ಶ್ರೀ ಪೇಜಾವರ ಅಧೋಕ್ಷಜ ಮಠದ ಶಾಖೆಯಲ್ಲಿ ಇಂದಿಲ್ಲಿ ಸೋಮವಾರ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಆದೇಶ ಮತ್ತು ಆಶೀರ್ವಾದಗಳೊಂದಿಗೆ ಶ್ರೀರಾಘವೇಂದ್ರ ಗುರುಗಳ 354ನೇ ಆರಾಧನಾ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕೃಷ್ಣೈಕ್ಯ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರನ್ನು ಸ್ಮರಣೆಯೊಂದಿಗೆ ಶ್ರೀರಾಘವೇಂದ್ರ ಗುರು ಸಾರ್ವಭೌಮರ ಆರಾಧನಾ ಮಹೋತ್ಸವ ನಡೆಸಲಾಗಿದ್ದು ಪುರೋಹಿತ ವಿಷ್ಣುತೀರ್ಥ ಸಾಲಿ ಅವರು ವಿಶೇಷವಾಗಿ ಸಿಂಗರಿಸಿದ ಮಂಟಪದಲ್ಲಿ ಶ್ರೀರಾಘವೇಂದ್ರ ಗುರುವರ್ಯರನ್ನು ಅಲಂಕರಿಸಿದ್ದು ಅದಿತಿ ದೇಶಪಾಂಡೆ ಜೊತೆಗೂಡಿ ಪೂಜಾಧಿಗಳನ್ನು ನೆರವೇರಿಸಿ ಉಪಸ್ಥಿತ ಸದ್ಭಕ್ತರಿಗೆ ಹರಸಿದರು. ಈ ಸಂದರ್ಭದಲ್ಲಿ ನಾಸಿಕ್ ಪೇಜಾವರ ಮಠದ ವ್ಯವಸ್ಥಾಪಕ ಶ್ರೀನಿವಾಸ್ ದೇಶಪಾಂಡೆ ಮತ್ತು ಅನಿಲ್ ಆಚಾರ್ ಹಾಗೂ ಮಠದ ಬಲರಾಮ ಪಾಂಡೆ, ಸಹಾಯಕ ಲಕ್ಷ ಣ ದುಬೆ ಸೇರಿದಂತೆ ಗುರು ಭಕ್ತರು ಹಾಜರಿದ್ದರು. 2010ನೇ ಜುಲೈ, 04ರಂದು ನಾಸಿಕ್ನ ಗೋದಾವರಿ ತಟದಲ್ಲಿ ತಪೋವನದಲ್ಲಿ ಪೇಜಾವರ ಮಠದ ಶಾಖೆಯಾಗಿಸಿ ಪಂಚವಟಿ ಸೀತರಾಮ ಪ್ರತಿಷ್ಠಾನದ ವೈಕುಂಠ್ ಧಾಮ್ ಮತ್ತು ಸಾಮಾಜಿಕ ಸಂಸ್ಕೃತಿ ಸಂಕೀರ್ಣವನ್ನು ಶ್ರೀ 108 ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಲೋಕಾರ್ಪಣೆ ಗೊಳಿಸಿದ್ದ್ದರು. ಇಲ್ಲಿ ನಿರ್ಮಾಣಗೊಂಡ ಈ ಕ್ಷೇತ್ರದಲ್ಲಿ ದಕ್ಷಿಣ ಭಾರತೀಯರ ಮತ್ತು ವಿಶೇಷವಾಗಿ ತುಳು-ಕನ್ನಡಿಗ ಭಕ್ತಾಧಿಗಳ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ಹಿಂದೂ ಪದ್ಧತಿಯಲ್ಲಿ ಧಾರ್ಮಿಕ ವೈದಿಕ ಕೈಂಕರ್ಯ, ಕ್ರಿಯಾಧಿಗಳನ್ನು ಸಾಂಪ್ರಾದಾಯಿಕವಾಗಿ ನೆರವೇರಿಸಲು ಅನುಕೂಲಕರವಾದ ಮೂಲಭೂತ ಸೌಲಭ್ಯಗಳ More...
ಕರ್ನಾಟಕದ ಜಾತಿವಾರು ಜನಸಂಖ್ಯಾಗಣತಿ ನಮೂನೆಯಲ್ಲಿ ದೇವಾಡಿಗರು ಜಾತಿ ಕಲಂನಲ್ಲಿ “ದೇವಾಡಿಗ” ಎಂದೇ ನಮೂದಿಸಲು ವಿಶ್ವ ದೇವಾಡಿಗ ಮಹಾ ಮಂಡಳ ಕರೆ
ಮುಂಬಯಿ: ಕರ್ನಾಟಕದ ಜಾತಿವಾರು ಜನಸಂಖ್ಯಾಗಣತಿ ನಮೂನೆಯಲ್ಲಿ ದೇವಾಡಿಗರು ಜಾತಿ ಕಲಂನಲ್ಲಿ More...
ದಿ| ಆನಂದ್ ಪೂಜಾರಿ ಮೃತದೇಹ ಸಂಬಧಿಕರಿಗೆ ಹಸ್ತಾಂತರ- ಅಡ್ಯಾರ್ ಗೆ ರವಾನೆ
ಮುಂಬಯಿ: ಮಾಟುಂಗಾ ಧಾರಾವಿ ಇಲ್ಲಿನ ಟ್ರಾನ್ಸಿಟ್ ಕ್ಯಾಂಪ್ನ ಕೊಠಡಿಯೊಂದರಲ್ಲಿ ವಾಸವಾಗಿದ್ದ ಎನ್ನಲಾದ ಸುಮಾರು ಆನಂದ್ ಮೋನಪ್ಪ ಪೂಜಾರಿ (51.) ಅನಾರೋಗ್ಯದಿಂದ ಸಯಾನ್ ಆಸ್ಪತ್ರೆಯಲ್ಲಿ ದಾಖಲಾಗಿ ಕಳೆದ ಭಾನುವಾರ (ಆ.03) ಅಸುನೀಗಿದ್ದರು. ಈ ಬಗ್ಗೆ ಮುಂಬಯಿ ಮಾಟುಂಗಾ ಶಾಹು ನಗರ ಪೊಲೀಸ್ ಠಾಣೆಯ ಅಧಿಕಾರಿ ಪರಿಚಯಿಸ್ಥ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಉಪಾಧ್ಯಕ್ಷ ಡಾಶಿವ ಮೂಡಿಗೆರೆ ಅವರನ್ನು ಸಂಪರ್ಕಿಸಿ ಮೃತರರ ಸಂಬಂಧಿಕರು, ಪರಿಚಯಿಸ್ಥರ ಗುರುತು ಕಂಡುಕೊಳ್ಳಲು ಮನವಿ ಮಾಡಿದ್ದು ಡಾ.ಶಿವ ಅವರು ವಿಷಯವನ್ನು ಪತ್ರಕರ್ತ ರೋನ್ಸ್ ಬಂಟ್ವಾಳ್ ಇವರಿಗೆ ರವಾನಿಸಿದ್ದು ಕ್ಷಣಾರ್ಧದಲ್ಲೇ ಅವಿಭಜಿತ ಕರಾವಳಿ ಜಿಲ್ಲೆಗಳು, ಕರ್ನಾಟಕ ರಾಜ್ಯ, ದೇಶ ವಿದೇಶದಾದ್ಯಂತದ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟಿಸುವ ಜೊತೆಗೆ ಬಿಲ್ಲವ ಧುರೀಣರ ವಾಟ್ಸಾಪ್ಗಳಿಗೂ ಕಳುಹಿಸಿದ್ದರು. ಪ್ರಕಟವಾದ ವರದಿಯನ್ನು ಗಮನಿಸಿದ ಸಂಬಂಧಿಕರಿಂದ ಮೃತರು ಕರ್ನಾಟಕ ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅಡ್ಯಾರ್ ಪದವು ಇಲ್ಲಿಯವರು ಎನ್ನಲಾಗಿದ್ದು, ನಿತ್ಯಾನಂದ ಡಿ.ಕೋಟ್ಯಾನ್ ಮೂಲಕ ಡಾ.ಶಿವ ಮೂಡಿಗೆರೆ ಅವರು ಅಶೋಕ್ ಕುಕ್ಯಾನ್ ಸಸಿಹಿತ್ಲು ಸಂಪರ್ಕಿಸಿದ್ದರು. ಅಶೋಕ್ ಕುಕ್ಯಾನ್ ಮೃತರರ ಸಂಬಂಧಿಕರನ್ನು ಸಂಪರ್ಕಿಸಿ ಪೋಲಿಸರು ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಬೇಕಾಗುವ ದಾಖಲೆಪತ್ರಗಳನ್ನು ಒದಗಿಸಿಕೊಟ್ಟು ಹೆಲ್ಪ್ಲೈನ್ ರಚಿಸಿ ಜಯ ಸುವರ್ಣ ಅಭಿಮಾನಿ ಬಳಗದ ಸಹಯೋಗದಲ್ಲಿ ಆಂಬುಲನ್ಸ್ ವ್ಯವಸ್ಥೆ ಮಾಡಿಸಿದ್ದು, ಸಂಬಂಧಿಕರಿಗೆ ಗಂಗಾಧರ್ ಜೆ.ಪೂಜಾರಿ ವಾಸ್ತವ್ಯ ವ್ಯವಸ್ಥೆ ಮಾಡಿದ್ದರು. ಅಂತೆಯೇ ಕಳೆದ ಬುಧವಾರ ರಾತ್ರಿ ಮೃತರರ ಸಂಬಂಧಿಕರಾದ ಗಣೇಶ್ ಪೂಜಾರಿ, ಕಿಶೋರ್ ಪೂಜಾರಿ, ನಿತಿನ್ ಪೂಜಾರಿ ಅವರು ಶಾಹು ನಗರ ಠಾಣೆಗೆ ಆಗಮಿಸಿದ್ದು ಡಾ.ಶಿವ ಮೂಡಿಗೆರೆ ಸಹಯೋಗದಲ್ಲಿ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಸಾಯಿ ಚಂದ್ರಭಾನ್ ಪಾಟೀಲ್ ಸಹಕಾರದಲ್ಲಿ ದಾಖಲೆಪತ್ರ, ಕಾರ್ಯವಿಧಾ ನಗಳನ್ನು ಪೂರೈಸಿ ಸಯಾನ್ ಆಸ್ಪತ್ರೆಯ ಪ್ರಕ್ರಿಯೆಗಳನ್ನು ನಡೆಸಿಕೊಟ್ಟಿದ್ದು ಸಂಬಂಧಿಕರು ಮೃತದೇಹವನ್ನು ಅಧಿಕೃತವಾಗಿ ಸ್ವಾಧೀನಕ್ಕೆ ಪಡೆದು ಮಧ್ಯಾಹ್ನ ಆಂಬುಲೆನ್ಸ್ನಲ್ಲಿ ಊರಿಗೆ ಸಾಗಿಸಿದರು. ಇಂದಿಲ್ಲಿ ಗುರುವಾರ (ಆ.07) ಭಾರತ್ ಬ್ಯಾಂಕ್ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜಯ ಸಿ.ಸುವರ್ಣ, ಅಶೋಕ್ ಕುಕ್ಯಾನ್, ಡಾ.ಶಿವ ಮೂಡಿಗೆರೆ ಉಪಸ್ಥಿತರಿದ್ದು ಅಂತಿಮ ನಮನಗಳನ್ನು ಸಲ್ಲಿಸಿ ಶ್ರದ್ಧಾಂಜಲಿ ಕೋರಿದರು. ಬಳಿಕ ಆನಂದ್ ಪೂಜಾರಿ ಮೃತದೇಹ ಬೀಳ್ಕೊಟ್ಟು ಸಾಬೀತಾಗಿ ಊರಿಗೆ ತಲುಪುವಂತೆ ಕೋರುತ್ತಾ ವಿಧಿವತ್ತಾಗಿ ಅಂತ್ಯಕ್ರಿಯೆ ನೆರವೇರಿಸುವಂತೆ ಸಹಕರಿಸಿದರು. ಡಾ| ಶಿವ ಮೂಡಿಗೆರೆ ಶ್ರಮ-ರೋನ್ಸ್ ಬಂಟ್ವಾಳ್ ವರದಿ-ಅಶೋಕ್ ಕುಕ್ಯಾನ್ ವ್ಯವಸ್ಥೆ ಫಲಶ್ರುತಿ More...
ಪ್ರಧಾನ ಸಂಚಾಲಕರಾಗಿ ಪಿ.ಬಿ.ಹರೀಶ್ ರೈ
ಮುಂಬಯಿ: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ 50ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದು, More...




