ಮುಂಬಯಿ: ವಿಶ್ವ ಛಾಯಾಗ್ರಹಣ ದಿನದಂದು, ಖ್ಯಾತ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರಿಗೆ ಅಮೆರಿಕದ ಇಮೇಜ್ ಕಾಲಿಗ್ ಸೊಸೈಟಿ ಇಂಟರ್‌ನ್ಯಾಷನಲ್ (ಐಸಿಎಸ್) ವತಿಯಿಂದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಹಾನರರಿ ಫೆಲೋಶಿಪ್ (ಗೌ| ಎಫ್‌ಐಸಿಎಸ್) ಅನ್ನು ಪ್ರದಾನ ಮಾಡಲಾಗಿದೆ.

ಟೋನಿ ಲೀ ಕಿಮ್ ಥುವಾನ್ ಎಪಿಎಸ್‌ಎ, ಗೌ| ಇಎಫ್‌ಐಎಪಿ, ಕು| ಸಾರಾ ತೈ ಮೇ ಲಿನ್ ಎಆರ್‌ಪಿಎಸ್ ಹಾಗೂ ಕಾಲಿಗ್ ಸೊಸೈಟಿ ಇಂಟರ್‌ನ್ಯಾಷನಲ್ ಗೌರವ ಸಮಿತಿ ಅವರ ನೇತೃತ್ವದಲ್ಲಿ ನೀಡಲಾದ ಈ ಪ್ರಶಸ್ತಿ, ಛಾಯಾಗ್ರಹಣ ಕಲೆ ಹಾಗೂ ಸಂಸ್ಕ್ರತಿಯ ಅಭಿವೃದ್ದಿಗೆ, ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಆಸ್ಟ್ರೋ ಮೋಹನ್ ನೀಡಿದ ಅಮೂಲ್ಯ ಕೊಡುಗೆಗಳನ್ನು ಗೌರವಿಸುತ್ತಿದೆ
