Published On: Sun, Oct 26th, 2025

ಪ್ರತಿ ಗ್ರಾಮಮಟ್ಟದಲ್ಲಿ ಧಾರ್ಮಿಕ ಚಟುವಟಿಕೆ ನಡೆಯಲಿ: ಪಿ.ಎಸ್.ಪ್ರಕಾಶ್

ಬಂಟ್ವಾಳ: ಪ್ರತಿ ಗ್ರಾಮಮಟ್ಟದಲ್ಲಿ ನಿರಂತರವಾಗಿ ಪೂಜೆ,ಯಾಗದಂತ ಧಾರ್ಮಿಕ ಚಟುವಟಿಕೆಯ ಮೂಲಕ ಹಿಂದೂ ಸಮಾಜವನ್ನು ಎಚ್ಚರಿಸುವ ಕೆಲಸಗಳಾದಾಗ ರಾಷ್ಟ್ರ,ಧರ್ಮದ ಉಳಿವು ಸಾಧ್ಯ ಎಂದು ರಾ.ಸ್ವ.ಸೇ.ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ಮಂಚಿಗ್ರಾಮದ ಶ್ರೀ ಮೋಂತಿಮಾರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಸಾನಿಧ್ಯದಲ್ಲಿ  ಭಾನುವಾರ ನಡೆದಶ್ರೀ ಮಹಾಪವಮಾನ ಯಾಗ,ಶ್ರೀ ರಾಮತಾರಕ ಯಜ್ಞ,ಸಾಮೂಹಿಕಗೋಪೂಜೆಯ ಧರ್ಮಜಾಗೃತಿ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸಗೈದರು.

ದೇವರನ್ನು ಒಲಿಸಿಕೊಳ್ಳಲು ಭಜನೆ ಸೇರಿದಂತೆ ಅನೇಕ ರೀತಿಯಾದ ವಿಧಗಳಿವೆಯಾದರೂ,ಶೃದ್ದಾಭಕ್ತಿ,ನಂಬಿಕೆಯಿಂದ ನಡೆದುಕೊಂಡಾಗ ಮಾತ್ರ ದೇವರನ್ನು ಒಲಿಸಬಹುದಾಗಿದೆ ಎಂದ ಅವರು ರಾಷ್ಟ್ರ ಮತ್ತು ಧರ್ಮ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು,ಇಡೀ ಜಗತ್ತಿಗೆ ಒಳಿತನ್ನು ಬಯಸುವ ದೇಶವಿದ್ದರೆ ಅದು ಭಾರತ ಎಂಬುದಕ್ಕೆ ನಾವು ಹೆಮ್ಮೆ ಪಡಬೇಕಾಗಿದೆ ಎಂದರು.

ಪ್ರಸ್ತುತ ಕಾಲಘಟ್ಟದಲ್ಲಿ ಹಿಂದೂಗಳ ಜನಸಂಖ್ಯೆಯಲ್ಲಿ ಕುಸಿತವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಕಾಶ್ ಪಿ.ಎಸ್ ಅವರು ಪ್ರತಿ ಮನೆಯಲ್ಲು ಸಂಸ್ಕಾರ,ಧಾರ್ಮಿಕ ಪದ್ದತಿಯನ್ನು ಅನುಸರಿಸಬೇಕು,

ಗುಣ,ಸಂಖ್ಯೆಯಿಂದ ಸಧೃಢಗೊಳ್ಳಬೇಕು ,ಅಸ್ಪೃಶ್ಯತೆ,ಜಾತೀಯತೆ ತೊಲಗಬೇಕು,ಪರಿಸರ,ಪ್ರಕೃತಿಯ ಸಂರಕ್ಷಣೆಯಾಗಬೇಕು,ಪ್ರತಿಯೋರ್ವರು ಸ್ವದೇಶಿ ಜೀವನಶೈಲಿಗೆ ಒಗ್ಗಿಕೊಂಡು ನಾಗರಿಕ ಶಿಷ್ಠಾಚಾರವನ್ನು ಅಳವಡಿಸಿಕೊಂಡಾಗ ಹಿಂದೂ ಸಮಾಜ ಬಲಿಷ್ಠವಾಗಲಿದೆ ಎಂದರು.

ಧರ್ಮಸಭೆಯಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆರ್ಶೀವಚನಗೈದು,

ಸಮಷ್ಠಿಯ ಹಿತ ಬಯಸುವುದರ ಜೊತೆಗೆ ಜೀವನದಲ್ಲಿ ಗೊತ್ತಿದ್ದೋ,ಗೊತ್ತಿಲ್ಲದೆ ಮಾಡುವ  ಪಾಪ,ಕರ್ಮಗಳು ಇಂತಹ  ಮುಕ್ತಿ ಯಾಗಗಳಿಂದ ಮುಕ್ತಿ ದೊರಕುತ್ತದೆ ಎಂದರು.

ಭಗವಂತ  ಒಂದು ಶಕ್ತಿಯಾಗಿದ್ದು, ಭಗವಂತನ ಸ್ಮರಣೆಗೂ ಜೀವನದಲ್ಲಿ ಒಂದಷ್ಟು ಸಮಯವನ್ನು ಮೀಸಲಿಡಬೇಕು   ಉದಾತ್ತವಾದ ಸತ್ಯ, ಸಂಬಂಧವನ್ನು  ಬೆಳೆಸಿಕೊಂಡು ಭಗವಂತನಲ್ಲಿ ಶರಣಾದಾಗ ಜೀವನದಲ್ಲು ತುತ್ತತುದಿಗೆ ತಲುಪಲು ಸಾಧ್ಯವಾಗುತ್ತದೆ ಎಂದು‌ನುಡಿದರು.

 ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯ ಕಶೆಕೋಡಿ ಸೂರ್ಯ ನಾರಾಯಣ ಭಟ್ ಅವರು ಯಾಗಫಲದ ಸಂದೇಶ ವನ್ನಿತ್ತರು.

ಬಿಜೆಪಿ ಯುವ ಮುಖಂಡ,ಪವಮಾನ ಯಾಗ ಸಮಿತಿ ಅಧ್ಯಕ್ಷ ವಿಕಾಸ್ ಕುಮಾರ್ ಪಿ.ಅವರು  ಅಧ್ಯಕ್ಷತೆ ವಹಿಸಿದ್ದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ,ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ,ಡಾ.ವೈ.ಭರತ್ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವಿ.ಹಿಂ.ಪ.ನ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್,

ಕೈರಂಗಳ ಅಮೃತಧಾರ ಗೋಶಾಲೆಯ ಅಧ್ಯಕ್ಷ ಟಿ.ಜಿ.ರಾಜಾರಾಮ್ ಭಟ್,ವಿ.ಹಿ.ಪ.ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ,ಹಿಂದೂ ಮುಖಂಡ ಮಿಥುನ್ ಪೂಜಾರಿ ಕಲ್ಲಡ್ಕ,

ಬಜರಂಗದಳ ಕಲ್ಲಡ್ಕ ಪ್ರಖಂಡದ ಸಂಚಾಲಕ ಅಮಿತ್ ಕಲ್ಲಡ್ಕ,

ವಿ.ಹಿ.ಪ.ಕಲ್ಲಡ್ಕ ಪ್ರಖಂಡದ ಅಧ್ಯಕ್ಷ ಸಚಿನ್ ಮೆಲ್ಕಾರ್  ಅವರು ಅತಿಥಿಗಳಾಗಿ ಭಾಗವಹಿಸಿದ್ದರು.

ಮಂಚಿ ಮೋಂತಿಮಾರು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎಸ್‌.ಅರ್.ಸತೀಶ್ಚಂದ್ರ,ಸುಳ್ಯ ಮಂಚಿ ಶ್ರೀ ಮಹದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಗಣೇಶರ ಐತಾಳ್ ಚೌಕದಪಾಲು,ಕೋಡಿಬೈಲು ಸ್ವಾಮಿ ಕೊರಗಜ್ಹ ಸೇವಾ ಸ್ವಾಮಿ ಗೌರವಾಧ್ಯಕ್ಷ ಮಮತಾ ಕೃಷ್ಣಪ್ಪ ಪೂಜಾರಿ,ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಸ್ಥಾಪಕಾಧ್ಯಕ್ಷರಾದ ಪದ್ಮನಾಭ ಸಾಲಿಯಾನ್ ,ಸಮಿತಿಯ ಪ್ರ.ಕಾರ್ಯದರ್ಶಿಗಳಾದ ಮಾಧವ ಅಂಚನ್,ಸಂತೋಷ್ ಗುಂಡಿಮಜಲು ,ಕೋಶಾಧಿಕಾರಿ ದೀಕ್ಷಿತ್ ಶೆಟ್ಟಿ ನಾಡಾಜೆ ಮತ್ತಿತರರು

ವಿ.ಹಿ.ಪ. ಮಂಚಿ ಘಟಕದ ಅಧ್ಯಕ್ಷ ರಮೇಶ್ ರಾವ್ ಪತ್ತುಮುಡಿ ಅವರು ಪ್ರಸ್ತಾವಿಸಿ, ಸ್ವಾಗತಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter