‘ಪೂವರಿ’ ರಾಷ್ಟ್ರೀಯ ತುಳು ಸಾಹಿತ್ಯ ಸ್ಪರ್ಧೆ-೨೦೨೨ ಸಣ್ಣ ಕಥೆ, ಸಣ್ಣ ಕವಿತೆ ಹಾಗೂ ಚುಟುಕಗಳಿಗೆ ಆಹ್ವಾನ
ಮುಂಬಯಿ : ಕರಾವಳಿ ಕರ್ನಾಟಕದ ಪುತ್ತೂರು ಇಲ್ಲಿಂದ ಪ್ರಕಾಶಿತ ಪೂವರಿ ಪತ್ರಿಕಾ ಬಳಗ ಇದರ ವತಿಯಿಂದ ತುಳು ಸಾಹಿತ್ಯದ ಉಳಿವು, ಬೆಳವಣಿಗೆಗಾಗಿ ವಿಶಿಷ್ಟ ರೀತಿಯ ತುಳು ಸಾಹಿತ್ಯ ಬರಹದ ಸ್ಫರ್ಧೆಯನ್ನು ‘ಪೂವರಿ’ ರಾಷ್ಟ್ರೀಯ ತುಳು ಸಾಹಿತ್ಯ ಸ್ಪರ್ಧೆ-೨೦೨೨ ಎಂಬ ಶೀರ್ಷಿಕೆಯಡಿ ಏರ್ಪಡಿಸಲಾಗಿದೆ.
ತುಳು ಭಾಷೆ, ಸಂಸ್ಕೃತಿ ಹಾಗೂ ತುಳು ನೆಲದ ಮಹತ್ವಕ್ಕೆ ಸಂಬಂಧಿಸಿದ ಬರಹಗಳ ಸ್ಪರ್ಧೆ ಇದಾಗಿದ್ದು ತುಳು ಸಣ್ಣ ಕಥೆ, ಸಣ್ಣ ಕವಿತೆ ಹಾಗೂ ಚುಟುಕಗಳ ಪ್ರಕಾರಗಳಲ್ಲಿ ನಡೆಯಲಿದೆ. ಮತ್ತು ಅಂಚೆ ಕಾರ್ಡಿನಲ್ಲಿ ಬರೆಯುವ ಸ್ಪರ್ಧೆಯಾಗಿದೆ. ಭಾಷೆಯ ಸೊಗಡು ಹಾಗೂ ತುಳು ಸಂಸ್ಕೃತಿಯ ಸೊಗಡು ಹಾಗೂ ತುಳು ನೆಲದ ಸೊಗಡಿನ ಬರೆಹಗಳಿಗೆ ಆದ್ಯತೆ ನೀಡಲಾಗುವುದು. ಸ್ಪರ್ಧೆಯು ಎಲ್ಲರಿಗೂ ಏಕರೂಪದಾಗಿದ್ದು ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ ಸಹಿತ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಅಲ್ಲದೆ ದೇಶದ ಯಾವುದೇ ಭಾಗದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೂ ಪಾಲ್ಗೊಳ್ಳಬಹುದು. ಬಹುಮಾನಗಳ ಆಯ್ಕೆಯ ಸಂದರ್ಭದಲ್ಲಿ ವಿಭಾಗಗಳನ್ನು ಮಾಡಲಾಗುವುದು.
ಆಸಕ್ತ ತುಳು ವಿದ್ಯಾರ್ಥಿ ಕವಿಗಳು ತಮ್ಮ ಬರಹಗಳನ್ನು ದಿನಾಂಕ : ೧೫-೦೪-೨೦೨೨ರೊಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಕೊಡಲು ಕೋರಿದೆ. ತಾವು ತಮ್ಮ ಬರಹದ ಜೊತೆ ಸಂಪೂರ್ಣ ಸ್ವವಿವರದ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಬಹುಮಾನಕ್ಕೆ ಆಯ್ಕೆಯಾದ ಬರಹಗಳು ಹಾಗೂ ಉತ್ತಮ ಬರಹಗಳನ್ನು ಪೂವರಿ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಬರಹವನ್ನು ಪೂವರಿ ರಾಷ್ಟ್ರೀಯ ತುಳು ಬರವುದ ಪಂತ-೨೦೨೨, ಅಂಚೆ ಪೆಟ್ಟಿಗೆ ಸಂಖ್ಯೆ :೨೮, ಹೆಬ್ಬಾರಬೈಲು, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾmಕ-೫೭೪೨೦೧, (ದೂರವಾಣಿ :೯೪೮೧೭೭೪೦೦೦) ಈ ವಿಳಾಸಕ್ಕೆ ಕಳುಹಿಸುವರೇ ಪೂವರಿ ಪತ್ರಿಕಾ ಬಳಗದ ಸಂಚಾಲಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲ್ ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Only for students?