Published On: Sat, Oct 16th, 2021

ಎಂ ಎ ಮುಹಮ್ಮದ್ ಕುಂಞಿ ಮಾಸ್ಟರ್ ಶ್ರೀ ಗುರುಕುಲ ತಿಲಕ ಪ್ರಶಸ್ತಿ ಗೆ ಆಯ್ಕೆ

ಕೈಕಂಬ :ಶೈಕ್ಷಣಿಕ ಕ್ಷೇತ್ರದಲ್ಲಿ ಅನವರತವಾಗಿ ಶ್ರಮಿಸುತ್ತಿರುವ ತಮ್ಮ ಸೇವೆ ಗಣನೀಯವಾಗಿದ್ದು ಕನಿಷ್ಟ SSLC ವಿಧ್ಯಾಅರ್ಹತೆ ಹೊಂದದ ಶಾಲೆಯಿಂದ ಹೊರಗುಳಿದ ಶಿಕ್ಷಣ ವಂಚಿತರಾದ ವಿಧ್ಯಾರ್ಥಿಗಳಿಗೆ SSLC ಶಿಕ್ಷಣ ಪೂರೈಸುವಂತೆ ಮಾಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಕಸ್ತೂರಿ ಸಿರಿಗನ್ನಡ ವೇದಿಕೆ ಬೆಳಗಾವಿ ಆಯ್ಕೆಮಾಡಿರುತ್ತದೆ ಮೂಲತಹ ದಕ್ಶಿಣ ಕನ್ನಡ ಜಿಲ್ಲೆಯ,ಮಂಗಳೂರು ತಾಲೂಕಿನ ಅಡ್ಡೂರು ಗ್ರಾಮದ ಕಾಂಜಿಳಕೋಡಿಯವರು ಸೈಂಟ್ ರೈಮಂಡ್ಸ್ ಒಪನ್ ಸ್ಕೂಲ್ ಮತ್ತು ಕಾಲೇಜು ಯಿಂದ ವೃತ್ತಿ ಜೀವನ ಆರಂಭಗೂಂಡು. ಚಿಕ್ಮಂಗಳೂರು, ಮೂಡುಗೆರೆ, ಬೆಂಗಳೂರು, ಮಂಗಳೂರು ಅನೇಕ ಜಿಲ್ಲೆಗಳಲ್ಲಿ ಸೇವೆಯನ್ನ ಸಲ್ಲಿಸಿದ್ದಾರೆ.WhatsApp Image 2021-10-16 at 9.18.07 AMಸುಮಾರು 200 ಗಿಂತಲೂ ಹೆಚ್ಚಿನ ಮಕ್ಕಳು ಊರಿನ ನಾಗರಿಕರ , ಜನಪ್ರತಿನಿಧಿಗಳ ಸಹಕಾರದಿಂದ SSLC ಶಿಕ್ಷಣ ಪೂರೈಸುವಂತೆ ಮಾಡಿಸುವಲ್ಲಿ  ಯಶಸ್ವಿಯಾಗಿದ್ದಾರೆ. ಇಲ್ಲಿಯವರೆಗೆ ಸುಮಾರು 320 ಗಿಂತಲೂ ಹೆಚ್ಚು ಶಾಲೆಯಿಂದ ಹೊರಗುಳಿದ, ಬಾಲಕಾರ್ಮಿಕರಾಗಿ ದುಡಿಯು ತ್ತಿದ್ದ ಮಕ್ಕಳನ್ನು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ದಾಖಲು ಮಾಡಿಸಿದ್ದಾರೆ.

ಶಾಲಾ ಮಕ್ಕಳಿಂದ ಸಾಮಾಜಿಕ ಸಂದೇಶ ಹಾಗೂ  ವಿದ್ಯಾರ್ಥಿಗಳಲ್ಲೇ ಹೆಚ್ಚು ಮಾದಕ  ವ್ಯಸನದ ದುಷ್ಪರಿನಾಮಗಳು ಎಂಬ ಅರಿವನ್ನು ಮೂಡಿಸುವ ಬೀದಿನಾಟಕ ತಂಡವನ್ನು ರಚಿಸಿ ಸುಮಾರು 68 ಕ್ಕಿಂತಲೂ ಹೆಚ್ಚು ಮಕ್ಕಳೊಂದಿಗೆ ಇವರು ಸೇರಿಕೊಂಡು ಸ್ಲಮ್ ಬಡಾವಣೆಗಳಲ್ಲಿ, ಬಸ್ ನಿಲ್ದಾಣಗಳಲ್ಲಿ , ಮಾರುಕಟ್ಟೆಗಳಲ್ಲಿ , ಶಾಪಿಂಗ್ ಮಾಲ್ ಗಳಲ್ಲಿ , ಬೆಂಗಳೂರು ನಗರ ರಸ್ತೆಗಳ ಸರ್ಕಲ್ ಗಳಲ್ಲಿ , ಪಾರ್ಕ್ ಗಳಲ್ಲಿ, ಶಾಲಾ ಮೈದಾನಗಳಲ್ಲಿ, ಸಾಮಾಜಿಕ ಬೀದಿನಾಟಕಗಳನ್ನು ವಿದ್ಯಾರ್ಥಿಗಳಿಂದ ಇವರು ತೊಡಗಿಕೊಂಡು ಮಾಡಿದ್ದಾರೆ.

ಶಿಕ್ಷಣ ಸೇವೆಯೊಂದಿಗೆ ಬಿಡುವಿನ ವೇಳೆಯಲ್ಲಿ ಸಾಹಿತ್ಯಕ್ಷೇತ್ರ ತೊಡಗಿಕೊಂಡು. ರಾಜ್ಯಮಟ್ಟದ ಸುಮಾರು 48 ಕವಿಗೋಷ್ಠಿಗಳಲ್ಲಿ ಭಾಗವಹಿಸಿದದ್ದಾರೆ. ಮಕ್ಕಳ ಕಥೆ, ಬೀದಿ ನಾಟಕ ರಚನೆ, ನಿರ್ದೇಶನ, ಮುಖವರ್ಣಿಕೆ, ಅಭಿನಯ, ಶಿಶು ಗೀತೆ ರಚನೆ, ಪರಿಸರ ಗೀತೆ ರಚನೆ, ದೇಶಭಕ್ತಿ ಗೀತೆ ರಚನೆ, ಮುಂತಾದ ಹವ್ಯಾಸಗಳಿವೆ.

ಪರಿಕ್ಷ ಪೂರ್ವ ಸಿದ್ದತೆ ಎಂಬ ಆತ್ಮಸ್ಥೈರ್ಯ ತುಂಬುವ ತರಗತಿ ನಡೆಸಲು ಸಂಪನ್ಮೂಲ ವ್ಯಕ್ತಿಯಾಗಿ ಆನೆಕ ಶಿಕ್ಷಣ ಸಂಸ್ಥೆಗಳಿಗೆ ಮತ್ತು  ಶಾಲೆಗಳಿಗೆ ಬೇಟಿ ನೀಡಿ ವಿಧ್ಯಾಥಿಗಳ ಗೊಂದಲ ನಿವರಣೆಮಾಡುವ ಪಾಠಗಳನ್ನು ಮಾಡಿರುತ್ತಾರೆ. ಶಿಕ್ಷಣ ಕ್ಷೇತ್ರದ ಸೇವೆಯನ್ನು ಗುರುತಿಸಿ. ಅನೇಕ ಪ್ರಶಂಸನಾ ಪ್ರಮಾಣಪತ್ರಗಳು. ಸೇವೆಗೆ ಸಂದಿವೆ.

Displaying 3 Comments
Have Your Say
  1. ಸರ್ ನಾವು ಕಳುಹಿಸಿ ಕೊಡುವ ಸುದ್ದಿಯನ್ನು ಪ್ರಕಟಿಸುತ್ತೀರಾ ಸರ್

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter