ವಿದ್ಯಾರ್ಥಿನಿಗೆ ಎಜುಕಾರುಣ್ಯ ಟ್ರಸ್ಟ್ನಿಂದ ಆರ್ಥಿಕ ನೆರವು
ಗುರುಪುರ : ಮಂಗಳೂರು-ಮರಕಡದ ಎಜುಕಾರುಣ್ಯ ಚಾರಿಟೇಬಲ್ ಟ್ರಸ್ಟ್(ರಿ) ಇದರ `ವಿದ್ಯಾನಿಧಿ’ ಯೋಜನೆಯಡಿ ವಾಮಂಜೂರಿನ ಸೈಂಟ್ ರೇಮಂಡ್ಸ್ ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ತರಗತಿ ವಿದ್ಯಾರ್ಥಿ, ಕುಪ್ಪೆಪದವು ಅಟ್ಟೆಪದವಿನ ಬಡ ಕುಟುಂಬದ ನಿವಾಸಿ ಶಿವಾನಿ ಅವರಿಗೆ ಅ. ೧೦ರಂದು ಕುಪ್ಪೆಪದವು ಗ್ರಾಮ ಪಂಚಾಯತ್ ಆವರಣದಲ್ಲಿ ನೆರವಿನ ಚೆಕ್ ನೀಡಲಾಯಿತು.

ಕುಪ್ಪೆಪದವು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಡಿ. ಪಿ. ಹಮ್ಮಬ್ಬ ಅವರು ವಿದ್ಯಾರ್ಥಿಯ ತಾಯಿ ಅಟ್ಟೆಪದವಿನ ವಿಮಲಾ ಅವರಿಗೆ ಚೆಕ್ ನೀಡಿದರು. ಕುಪ್ಪೆಪದವು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶರೀಫ್ ಕಜೆ, ಉದ್ಯಮಿ ಜಗದೀಶ ಕುಲಾಲ್ ಪಾಕಜೆ, ರಾಜ್ಯ ರೈತ ಸಂಘದ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬ್ಳಗುತ್ತು, ಟ್ರಸ್ಟ್ನ ಅಧ್ಯಕ್ಷ ಮೋಹನದಾಸ್ ಮರಕಡ, ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿ, ಸ್ಥಳೀಯ ನಿವಾಸಿ ಭಾರತಿ ಮತ್ತು ಪತ್ರಕರ್ತ ಧನಂಜಯ ಗುರುಪುರ ಇದ್ದರು



