ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನಕ್ಕೆ ಗಂಜಿಮಠ ಒಡ್ಡೂರು ಫಾರ್ಮ್ಸ್ ನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಶನಿವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಪಕ್ಷದ ಸಿದ್ದಾಂತ,ಕಾರ್ಯಕ್ರಮಗಳು ಏನೆಂಬುದು ಕಾರ್ಯಕರ್ತರಿಗೆ ಸ್ಪಷ್ಟವಾಗಿ ತಿಳಿದಾಗ ಅವರು ಮತದಾರರನ್ನು ಮನವೊಲಿಸಲು ಸುಲಭ ಸಾಧ್ಯವಾಗಲಿದೆ.ಮುಂದಿನ ಚುನಾವಣೆಯನ್ನು ಹೇಗೆ ಎದುರಿಸಬೇಕು, ಪಕ್ಷ ಸಂಘಟನೆಯನ್ನು ಯಾವರೀತಿ ಮಾಡಬೇಕು,ನಮ್ಮೊಳಗಿನ ಗೊಂದಲ ಸರಿಪಡಿಸಲು ಪ್ರಶಿಕ್ಷಣದಿಂದ ಸಾಧ್ಯವಿದೆ ಎಂದರು.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಆ ಕಾಲದಲ್ಲಿ ,೧೭ ವರ್ಷಗಳ ಕಾಲ ಜನಸಂಘದ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆ ಮಾಡಿರುವುದು ನಮಗೆಲ್ಲರಿಗೂ ಪ್ರೇರಣೆಯಾಗಿದೆ.ಈ ನಿಟ್ಟಿನಲ್ಲಿ ಮಹಾಭಿಯಾನದ ಮೂಲಕ ತಳಮಟ್ಟದಲ್ಲಿ ಪಕ್ಷ ಸಂಘಟನೆಯಾಗಲಿ ಎಂದು ಆಶಿಸಿದರು.
ಕೇಂದ್ರ ಸರ್ಕಾರದ ನಾರೀ ಶಕ್ತಿ ವಂದನಾ ಮಸೂದೆ ಜಾರಿಗೆ ಅಡ್ಡಿಪಡಿಸಿ ಸೋಲುಂಟುಮಾಡಿದ ವಿಪಕ್ಷಗಳಿಗೆ ಮಹಿಳೆಯರ ಬಗ್ಗೆ ಎಷ್ಟು ಗೌರವ, ಸ್ಥಾನಮಾನ ನೀಡುತ್ತದೆ ಎಂಬುದೀಗ ದೇಶಕ್ಕೆ ಗೊತ್ತಾಗಿದೆ ಎಂದ ಅವರು ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ದಿನಗಳಲ್ಲಿ ಯಾವುದೇ ರೀತಿಯಲ್ಲದರೂ ಈ ಮಸೂದೆಯನ್ನು ಜಾರಿಗೊಳಿಸುವುದು ಶತ ಸಿದ್ದ ಎಂದು ಶಾಸಕ ರಾಜೇಶ್ ನಾಯ್ಕ್ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ,ಬಂಟ್ವಾಳ ಮಂಡಲದ ಪ್ರಭಾರಿ ರಾಕೇಶ್ ರೈ ಕಡೆಂಜಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮಹಾಭಿಯಾನದ ರಾಜ್ಯ ಸಹ ಸಂಚಾಲಕರಾದ ವಿಕಾಸ್ ಪುತ್ತೂರು,ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿಯವರು ಎರಡು ಪ್ರತ್ಯೇಕ ಗೋಷ್ಠಿಯಲ್ಲಿ ವಿವಿಧ ವಿಚಾರ ಮಂಡಿಸಿದರು.
ಮಂಡಲದ ಸಹಸಂಚಾಲಕ ಲಖಿತ ಆರ್ ಶೆಟ್ಟಿ,ಬಿಜೆಪಿ ಬಂಟ್ವಾಳ ಮಂಡಲದ ಪ್ರ.ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಗಳಾದ ದೇವಪ್ಪಪೂಜಾರಿ ದಿನೇಶ್ ಅಮ್ಟೂರು,ವಿವಿಧ ಮಹಾಶಕ್ತಿಕೇಂದ್ರ ವ್ಯಾಪ್ತಿಯ ಸಂಚಾಲಕರಾದ ವಸಂತಕುಮಾರ ಅಣ್ಣಳಿಕೆ, ಪುರುಷೋತ್ತಮ ಸಾಲಿಯಾನ್ ರವೀಶ್ ಶೆಟ್ಟಿ ಕರ್ಕಳ ವೇದಿಕೆಯಲ್ಲಿದ್ದರು.ಬಿಜೆಪಿ ಬಂಟ್ವಾಳ ಮಂಡಲದ ಪ್ರ.ಕಾರ್ಯದರ್ಶಿಸುದರ್ಶನ್ ಬಜ ಸ್ವಾಗತಿಸಿದರು.
ಹರೀಶ್ ಶೆಟ್ಟಿ ಪಡು ಕಾರ್ಯಕ್ರಮ ನಿರೂಪಿಸಿದರು.
ಮಹಿಳಾ ಮೋರ್ಛಾದ ಕಾರ್ಯದರ್ಶಿ ಜಯಶ್ರೀ ಗೋಳ್ತಮಜಲು ವಂದೆ ಮಾತರಂ ಗೀತೆ , ಪ್ರಣಾಮ್ ಅಜ್ಜಿಬೆಟ್ಟು ವಯಕ್ತಿಕ ಗೀತೆ ಹಾಡಿದರು.ಭಾನುವಾರ ಸಂಜೆಯವರೆಗೆ ಮಹಾಭಿಯಾನ ನಡೆಯಲಿದ್ದು,ಒಟ್ಟು 7 ಗೋಷ್ಠಿಗಳು ನಡೆಯುವುದು ಸಂಜೆ ಸಮಾರೋಪ ಸಮಾರಂಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.ಬಳಿಕ ಬಿಜೆಪಿ ಮಂಗಳೂರು ಉತ್ತರ ಮಂಡಲದ ಮಹಾಭಿಯಾನ ಆರಂಭಚಾಗಲಿದೆ
