ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕದ ವತಿಯಿಂದ ದಿವಂಗತ ದಿನೇಶ್ ಅಮ್ಮಣ್ಣಾಯ ಅವರಿಗೆ ನುಡಿ ನಮನ
ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕದ ವತಿಯಿಂದ ಖ್ಯಾತ ಭಾಗವತ ದಿವಂಗತ ದಿನೇಶ್ ಅಮ್ಮಣ್ಣಾಯ ಅವರಿಗೆ ನುಡಿ ನಮನ ಕಾರ್ಯಕ್ರಮವುಬಿ. ಸಿ. ರೋಡಿನ ಶ್ರೀ ಚಂಡಿಕೇಶ್ವರಿ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕದ ಅಧ್ಯಕ್ಷರಾದ ದಿವಾಕರ ಶೆಟ್ಟಿ ಪರಾರಿ ಗುತ್ತು ಅವರು ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಹಾಗೂ ಯಕ್ಷಗಾನ ಹಿರಿಯ ಕಲಾವಿದ ಸರಪ್ಪಾಡಿ ಅಶೋಕ್ ಶೆಟ್ಟಿಯವರು ನುಡಿನಮನ ಸಲ್ಲಿಸಿ ದಿವಂಗತ ದಿನೇಶ್ ಅಮ್ಮಣ್ಣಾಯ ಅವರೊಂದಿಗಿನ ಒಡನಾಟ ಸ್ಮರಿಸಿದರಲ್ಲದೆ ಕರ್ನಾಟಕ ಮೇಳದಲ್ಲಿ ಕೋಟಿ-ಚೆನ್ನಯ,ಕಾಡಮಲ್ಲಿಗೆ ಮೊದಲಾದ ತುಳು- ಕನ್ನಡ ಪ್ರಸಂಗಗಳಲ್ಲಿ ಅವರ ಹಾಡುಗಾರಿಕೆ ಕಲಾವಿದರನ್ನು ಮಾತ್ರವಲ್ಲ ಇಡೀ ಪ್ರೇಕ್ಷಕ ವರ್ಗವನ್ನು ಮಂತ್ರಮುಗ್ದರನ್ನಾಗಿಸುತಿತ್ತುಎಂದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ್ ಚೌಟ ಬದಿಗುಡ್ಡೆ ಮಾಣಿ,ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷರಾದ
ಚಂದ್ರಹಾಸ್ ಶೆಟ್ಟಿ ರಂಗೋಲಿ,ಶ್ರೀ ಚಂಡಿಕೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದಲ. ಲೋಕನಾಥ್ ಶೆಟ್ಟಿ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ಬೂಡಾ ಮಾಜಿಅಧ್ಯಕ್ಷ ದೇವದಾಸ ಶೆಟ್ಟಿ ಬಂಟ್ವಾಳ ಅವರು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.



