ಕೊಯಿಲದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ
ಬಂಟ್ವಾಳ:ತಾಲೂಕಿನ ಕೊಯಿಲ ಸರ್ಕಾರಿ ಪ್ರೌಢಶಾಲೆ ಯಲ್ಲಿ ತಾಲ್ಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಿತು.ಶಾಲಾಭಿವೃದ್ಧಿ ಸಮಿತಿ ಸದಸ್ಯ ಹರೀಶ್ ಸಪಲ್ಯ ಹಿರ್ಣಿ ಪಂದ್ಯಾಟ ಉದ್ಘಾಟಿಸಿದರು.

.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಕೆ. ರಮೇಶ್ ನಾಯಕ್ ರಾಯಿ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಚಿನ್ನಪ್ಪ, ನವೀನ್ ಕುಮಾರ್, ಸಿ ಆರ್ ಪಿ ಹೇಮಲತಾ ಶುಭ ಹಾರೈಸಿದರು.
ಇದೇ ವೇಳೆ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಬ್ಯಾಡ್ಮಿಂಟನ್ ಬಾಲ್ ಸೆಟ್ ಮತ್ತು ನೆಟ್ ಸಹಿತ ಬಹುಮಾನ ಗಳ ಕೊಡುಗೆ ಹಸ್ತಾಂತರಿಸಿದರು.
ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಲೊರೆಟ್ಟೋ ಹಿಲ್ಸ್, ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಮಾಜಿ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ, ದೈಹಿಕ ಶಿಕ್ಷಣ ಶಿಕ್ಷಕಿ ಸುಕನ್ಯಾ ರತ್ನ,ಗ್ರಾ. ಪಂ. ಸದಸ್ಯ ರವೀಂದ್ರ ಪೂಜಾರಿ ಬದನಡಿ, ಪ್ರಮುಖರಾದ ಲ್ಯಾನ್ಸಿ ಕುವೆಲ್ಲೋ, ಹರೀಶ್ ಆಚಾರ್ಯ ರಾಯಿ, ಕೆ. ಪರಮೇಶ್ವರ ಪೂಜಾರಿ ರಾಯಿ ಮತ್ತಿತರರು ಇದ್ದರು.
ಮುಖ್ಯಶಿಕ್ಷಕಿ ಸೌಜನ್ಯ ರಾವ್ ಸ್ವಾಗತಿಸಿ, ದೈಹಿಕ ಶಿಕ್ಷಣ ಪರಿವೀಕ್ಷಕಿ ಆಶಾ ನಾಯಕ್ ಪ್ರಾಸ್ತಾ ವಿಕ ಮಾತನಾಡಿದರು.
ದೈಹಿಕ ಶಿಕ್ಷಣ ಶಿಕ್ಷಕ ಜನಾರ್ಧನ್ ವಂದಿಸಿದರು.
ಶಿಕ್ಷಕಿ ಸೌಮ್ಯಾ ಕಾರ್ಯಕ್ರಮ ನಿರೂಪಿಸಿದರು.



