ಹೊಸನಾಡು ಕೊಡ್ಯಡ್ಕ ದೇವಳದ ಸ್ಥಾಪಕ ಜಯರಾಮ ಹೆಗ್ಡೆ ನಿಧನ
ಮೂಡುಬಿದಿರೆ: ಅನಿವಾಸಿ ಉದ್ಯಮಿ, ಹೊಸನಾಡು, ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸ್ಥಾಪಕ ಕೊಡ್ಯಡ್ಕ ಜಯರಾಮ ಹೆಗ್ಡೆ (73)ಅನಾರೋಗ್ಯದಿಂದ ಬುಧವಾರ ಮೂಡುಬಿದಿರೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.
ಅವರು ತನ್ನ 23ನೇ ವಯಸ್ಸಿನಲ್ಲಿ ಮಸ್ಕತ್ನಲ್ಲಿ ಎಲೆಕ್ಟ್ರಿಕಲ್ ಹಾರ್ಡ್ ವೇರ್ ಶೋರೂಮ್ ಆರಂಭಿಸಿದ್ದರು. ನಂತರ ಹೋಟೇಲ್ ಉದ್ಯಮಕ್ಕೆ ಕಾಲಿರಿಸಿ ಯಶಸ್ವಿ ಉದ್ಯಮಿಯಾಗಿದ್ದಾರೆ. 1996ರಲ್ಲಿ ಕೊಡ್ಯಡ್ಕದಲ್ಲಿ ಅನ್ನಪೂರ್ಣೇಶ್ವರಿ ದೇವಸ್ಥಾನವನ್ನು ಕಟ್ಟಿಸಿದರು. ಕೆಲವು ವರ್ಷಗಳ ಹಿಙದೆ ಮೂಡುಬಿದಿರೆ ಅಶ್ವತ್ಥಪುರದಲ್ಲಿ ದಿ ಎಸ್ಟೇಟ್ ರೆಸಾರ್ಟ್ ಉದ್ಯಮವನ್ನು ಆರಂಭಿಸಿದ್ದಾರೆ
Very sad to receive the news of the demise of our dear friend Jayram. Our heartfelt Condolences to the bereaved family. We pray that the departed soul to rest In Heavenly Eternal peace, and give strength, courage and peace to bear this irreparable loss???
Stanley T H Fernandes
Muscat – Oman