ಮೂಡುಬಿದಿರೆ: ಗೀತಾ ಜಯಂತಿ ಮಹೋತ್ಸವ ಆಚರಣೆ
ಮೂಡುಬಿದಿರೆ: ಪ್ರಜಾಪಿತ ಬ್ರಹ್ಮಾಕುಮಾರೀ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗೀತಾ ಜಯಂತಿ ಮಹೋತ್ಸವ ಸಪ್ತಾಹವನ್ನು ಭಾನುವಾರ ಆಚರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ ಮುಖ್ಯ ಅತಿಥಿಯಾಗಿ ಮಾತನಾಡಿ, ತನ್ನ ಸಂಸ್ಕೃತಿಯಿAದಾಗಿ ನಮ್ಮ ದೇಶಕ್ಕೆ ವಿಶ್ವದಲ್ಲಿ ಒಳ್ಳೆಯ ಸ್ಥಾನವಿದ್ದು, ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರುವ ಭಾರತವನ್ನು ರಷ್ಯಾ ಉಕ್ರೇನ್ ಯುದ್ಧದ ಮಧ್ಯಸ್ತಿಕೆ ವಹಿಸಲು ಆಹ್ವಾನಿಸಿರುವುದೇ ಇದಕ್ಕೆ ಸಾಕ್ಷಿ ಎಂದರು.
ಧವಲಾ ಕಾಲೇನಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಅಜಿತ್ ಪ್ರಸಾದ್, ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕ ವೆಂಕಟರಮಣ ಕೆರೆಗದ್ದೆ ಅವರು ಶಾಲೆ ಆಧ್ಯಾತ್ಮಿಕತೆ ಮತ್ತು ಅಹಿಂಸೆಯ ವಿಚಾರದ ಕುರಿತು ಮಾತನಾಡಿದರು.
ಕಾಸರಗೋಡು ಶಾಖೆಯ ಮುಖ್ಯ ಸಂಚಾಲಕಿ ವಿಜಯಲಕ್ಷ್ಮಿ ಭಗವದ್ಗೀತೆಯ ಸಾರವನ್ನು ವಿವರಿಸಿದರು.
ಜಯರಾಜ್ ಸ್ವಾಗತಿಸಿದರು. ಗೀತಾ ಸಂಸ್ಥೆಯನ್ನು ಪರಿಚಯಿಸಿದರು. ವಿನೋದಾ ನಿರೂಪಿಸಿದರು. ಸದಾನಂದ ವಂದಿಸಿದರು.