ಮೂಡಬಿದ್ರೆಯ ತಾಲೂಕು ಕಚೇರಿಯಲ್ಲಿರುವ ಮೂಲ್ಕಿ-ಮೂಡಬಿದ್ರೆ ಶಾಸಕರ ಕಚೇರಿ `ಸೇವಕ’ದಲ್ಲಿ ಆ. ೧೧ರಂದು ಶಾಸಕ ಉಮಾನಾಥ ಕೋಟ್ಯಾನ್ ಅವರು ಕ್ಷೇತ್ರ ವ್ಯಾಪ್ತಿಯ ಹಲವು ಮಂದಿಯಿAದ ಅಹವಾಲು ಸ್ವೀಕರಿಸಿದರು.

ಈ ವೇಳೆ ಮೂಡಬಿದ್ರೆ ಶ್ರೀ ಗೋಪಾಲಕೃಷ್ಣ ದೇವಳದ ೧೧೦ನೇ ಮೊಸರು ಕುಡಿಕೆ ಉತ್ಸವ ಪೂರಕವಾಗಿ ಸೆಪ್ಟೆಂಬರ್ ೫ರಂದು ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಆಯೋಜಿಸಿರುವ ೪೦ನೇ ವರ್ಷದ `ಸಾಂಸ್ಕೃತಿಕ ಕಲಾಪಗಳು’ ಕಾರ್ಯಕ್ರಮ ಹಾಗೂ ಜನನೆರ್ ಬೆದ್ರ ಫೌಂಡೇಶನ್(ರಿ) ಅರ್ಪಿಸುವ `ಬೆದ್ರದ ಕೃಷ್ಣೋತ್ಸವ-೨೦೨೬’ ಇದರ ಆಮಂತ್ರಣ ಪತ್ರಿಕೆ ನೀಡಿದ ಸಂಸ್ಥೆಯ ಪದಾಧಿಕಾರಿಗಳು ಶಾಸಕರಿಗೆ ಆಹ್ವಾನವಿತ್ತರು.

