ಮೂಡಬಿದ್ರೆ: ಶ್ರುತ ಪಂಚಮಿಯ ಪ್ರಯುಕ್ತ ಕಳೆದ ಶುಕ್ರರವಾರ ದವಳತ್ರಯ ಟ್ರಸ್ಟ್ ಹಾಗೂ ಶ್ರೀ ಜೈನ್ ಮಠ ಮತ್ತು ಸ್ವಸ್ತಿ ಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜು ಮೂಡಬಿದ್ರಿ ಇದರ ಸಹಭಾಗಿತ್ವದಲ್ಲಿ ಒಂದು ದಿನದ ಪ್ರಾಕೃತ ಕಲಿಕಾ ಶಿಬಿರವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಇವರು ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ವನ್ನು ನೀಡಿ ಪ್ರಾಕೃತ ಭಾಷೆ ಪ್ರಕೃತಿ ಯ ಭಾಷೆ ಉತ್ತರ ಭಾರತ ದ ಹೆಚ್ಚಿನ ಭಾಷೆ ಗಳಿಗೆ ಪ್ರಾಕೃತ ವೇ ಮೂಲ ಪ್ರಾಕೃತ ಸಂಸ್ಕೃತ ಭಾರತ ಮೂಲದ ಸಮೃದ್ಧ ಪದ ಗಳಿರುವ ದೇವ ಭಾಷೆ ಭಾರತೀಯ ವಿವಿಧ ಬಾಷೆ ನಾವು ಕಲಿತು ಅರಿತು ಕೊಂಡಾಗ ಅಜ್ಞಾನ ದೂರ ಎಂದರು.

ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಶ್ರೀ ಉಮನಾಥ್ ಶೇ ಣೈ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಗೊಮ್ಮಟ ಸ್ತುತಿ ಹಾಡಿ ಸುಂದರ ವಿವರ ನೀಡಿ ದರು ಕಾರ್ಯಕ್ರಮದಲ್ಲಿ ದೀಪ ಬೆಳಗಿ ಉದ್ಘಾಟನೆ ಮಾಡಿದ ಉದ್ಯಮಿ ಕಲಾ ಪೋಷಕ ಶ್ರೀ ಶೈಲೇಂದ್ರ ಕುಮಾರ್ ಮಾತನಾಡಿ ಪ್ರಾಕೃತ ಭಾಷೆಯ ಮಹತ್ವ ಹಾಗೂ ಬೇರೆ ಬೇರೆ ಪ್ರದೇಶಗಳಲ್ಲಿ ಪ್ರಾಕೃತ ಭಾಷೆಯನ್ನು ಯಾವ ರೀತಿ ಜನರು ತಮ್ಮ ಮಾತೃ ಭಾಷೆ ಯಾಗಿ ಮಾತ ನಾಡು ತ್ತಿದ್ದರು ಎಂಬುದನ್ನ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಜಗದೀಶ್ ಅಧಿಕಾರಿ ಮೂಡು ಬಿದಿರೆ ಹಾಗೂ ಶ್ರೀ ಮಠದ ವ್ಯವಸ್ಥಾಪಕರಾದ ಶ್ರೀ ಸಂಜಯಂತ್ ಕುಮಾರ್ ಶೆಟ್ಟಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕರಾದ ಹಿತೇಶ್ ರಾವ್ ಇವರು ನಿರೂಪಿಸಿದರು. ಉಪನ್ಯಾಸಕರಾದ ಸುಜಾತ ಬಳ್ಳಾಲ್ ಇವರು ಧನ್ಯವಾದವಿತ್ತ ರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಶ್ರೀ ಸ್ವಾಗತಿಸಿ ದರು ಉಪನ್ಯಾಸಕ ವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಳಿಕ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ )ವತಿಯಿಂದ ಸ್ವಾಮೀಜಿ ಭಾ ಗವಹಿಸಿದವರಿಗೆ ಪ್ರಮಾಣ ಪತ್ರ ನೀಡಿದರು
