ಮುಂಬಯಿ: ಪಡು ತೋನ್ಸೆ ಗುಜ್ಜರ ಬಿಟ್ಟು ಕಾಂತ ಪೂಜಾರಿ ಮನೆ ದಿವಂಗತ ಸಂಕಿ ಪೂಜಾರ್ತಿ ಯವರ ವೈಕುಂಠ ಸಮಾರಾಧನೆಯ ಸಲುವಾಗಿ ಜರಗಿದ ಶ್ರದ್ದಾಂಜಲಿ ಸಭೆಯಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಶ್ರೀ ಜನಾರ್ಧನ ತೋನ್ಸೆ ಯವರು ಸಂಕಿ ಪೂಜಾರ್ತಿ ಯವರು ಬಾಳಿ ಬದುಕಿದ ರೀತಿ ಎಲ್ಲರಿಗೂ ಆದರ್ಶಪ್ರಾಯವಾಗಿದ್ದು ಅಗಲಿದ ದಿವ್ಯ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ನುಡಿ ನಮನ ಗೈದರು.

ಕಾಂತು ಪೂಜಾರಿ ಮನೆಯ ಶ್ರೀ ಧರ್ಮ ಜಾರಂದಾಯ ದೈವದ ಕುಟುಂಬದ ಪ್ರಮುಖರಾದ ಪ್ರಭಾಕರ್ ಪಾಲನ್ ರವರು ಕುಟುಂಬದ ಪರವಾಗಿ ಶ್ರದ್ದಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಯವರಾದ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ , ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಿ. ಎನ್. ಶಂಕರ್ ಪೂಜಾರಿ ಹಾಗೂ ಕೇಶವ ಕುಂದರ್, ನಗರಸಭಾ ಮಾಜಿ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ ಮತ್ತು ಕಿರಣ್ ಕುಮಾರ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಮುಲ್ಕಿ ಇದರ ಮಹಿಳಾ ಘಟಕದ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಉಡುಪಿ ಗ್ಯಾರಂಟಿ ಯೋಜನೆ ತಾಲೂಕು ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಬಿಜೆಪಿ ಮುಖಂಡರಾದ ಉದಯಕುಮಾರ್ ಶೆಟ್ಟಿ ಮತ್ತು ಸುಪ್ರಸಾದ್ ಶೆಟ್ಟಿ , ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಇದರ ಪ್ರಧಾನ ಕಾರ್ಯದರ್ಶಿ ಹರೀಶ್ ಎಂ. ಕೆ. ಕಲ್ಮಾಡಿ, ದೇವಾಡಿಗರ ಸಮಾಜದ ಪ್ರಮುಖರಾದ ಧರ್ಮಪಾಲ ದೇವಾಡಿಗ, ಖ್ಯಾತ ಪತ್ರಕರ್ತ ರೋನ್ಸ್ ಬಂಟ್ವಾಳ್, ಸದಾನಂದ ನಾಯಕ್, ತೋನ್ಸೆ ಗರೋಡಿ ಅಧ್ಯಕ್ಷ ಹರೀಶ್ ಕುಮಾರ್, ಜೀರ್ನೋದ್ದಾರ ಸಮಿತಿಯ ಅಧ್ಯಕ್ಷ ದಿನೇಶ್ ಜತ್ತನ್, ಗರೋಡಿಯ ದರ್ಶನ ಪಾತ್ರಿಗಳು, ಅರ್ಚಕ ವರ್ಗ, ಗುರಿಕಾರರು, ಪಕ್ಕಿಬೆಟ್ಟು ಗರಡಿಯ ವಿಠಲ್ ಪೂಜಾರಿ, ಕಾಂತು ಪೂಜಾರಿ ಮನೆ ಕುಟುಂಬಸ್ಥರು, ಬಂಧು ಬಳಗದವರು ಉಪಸ್ಥಿತರಿದ್ದರು.

ಶಿಕ್ಷಕ ಸತೀಶ್ ಶೆಟ್ಟಿ ಅವರು ನಿರೂಪಿಸಿ ಸಂಜೀವ ಪೂಜಾರಿ ತೋನ್ಸೆ ಹಾಗೂ ಶೇಕರ್ ಗುಜ್ಜರ್ ಬೆಟ್ಟು ವಂದಿಸಿದರು

By Suddi9