ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಗೇಟ್ ನಿರ್ಮಾಣವಾದಾಗ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆಡಳಿತದಲ್ಲಿತ್ತು.ಆಗ ಟೋಲ್ ಗೇಟ್ ವಿಚಾರದಲ್ಲಿ ಚಕಾರವೆತ್ತದ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರು, ಟೋಲ್ ಗೇಟ್ ತೆರವಾಗುವ ಅಂತಿಮಹಂತದ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಟೋಲ್ ಗೇಟ್ ತೆರವಿಗಾಗಿ ಧರಣಿ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಬಂಟ್ವಾಳ ಮಂಡಲ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಎಂದು ಟೀಕಿಸಿದ್ದಾರೆ.


ಮಂಗಳವಾರ ಕಳ್ಳಿಗೆ ಬಿಜೆಪಿ ವತಿಯಿಂದ ಕಳ್ಳಿಗೆ ಗ್ರಾಮ ಪಂಚಾಯತಿ ಕಚೇರಿ ಮುಂದೆ”ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ” ಅಭಿಯಾನದಡಿ ನಡೆದ ” ಪ್ರತಿಭಟನಾ ಸಭೆಯಲ್ಲಿ  ಮಾತನಾಡಿದ ಅವರು ಮಾತನಾಡಿದರು.ಅಭಿವೃದ್ಧಿ ಕಾರ್ಯ,ಸರಕಾರಿ ನೌಕರರ ವೇತನ ,ವಿಧವಾ ವೇತನ, ವೃದ್ಧಾಪ್ಯ ವೇತನ, ಬೆಳೆವಿಮೆ, ಕಿಸಾನ್ ಸಮ್ಮಾನ್ ಮೊದಲಾದ ಯೋಜನೆಗಳಿಗೆ ರಾಜ್ಯ ಸರ್ಕಾರದ ಬಳಿ ನೀಡಲು ಹಣವಿಲ್ಲ ಎಂದು  ಸುದರ್ಶನ್ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ ಎಂದರು.ಬಿಜೆಪಿ ಬಂಟ್ವಾಳ ಮಂಡಲ ಕಾರ್ಯದರ್ಶಿ ಹರೀಶ್ ಪಡು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಬಿಜೆಪಿ ಬಂಟ್ವಾಳ ಮಂಡಲ ಮಾಧ್ಯಮ ಪ್ರಮುಖ್ ಪುರುಷೋತ್ತಮ ಶೆಟ್ಟಿ ವಾಮದಪದವು, ಮಂಡಲ ಯುವಮೋರ್ಚಾ ಕಾರ್ಯದರ್ಶಿ ಹರಿಪ್ರಸಾದ್ ಭಂಡಾರಿಬೆಟ್ಟು, ಕಳ್ಳಿಗೆ ಗ್ರಾ.ಪಂ ಮಾಜಿ ಅಧ್ಯಕ್ಷರುಗಳಾದ ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಯಶೋದಾ ಜಾರಂದಗುಡ್ಡೆ, ಮಾಜಿ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ, ಗ್ರಾಪಂ ಮಾಜಿ ಸದಸ್ಯರುಗಳಾದ ಪುಷ್ಪಾ ಬಂಜನ್ ದರಿಬಾಗಿಲು, ದಯಾನಂದ ಜಾರಂದಗುಡ್ಡೆ, ಮನೋಜ್ ವಳವೂರು, ವಾರಿಜ ಚಂದ್ರಿಗೆ, ರೇವತಿ ಮಾಡಂಗೆ, ಕಳ್ಳಿಗೆ ಬಿಜೆಪಿ ಶಕ್ತಿಕೇಂದ್ರ ಪ್ರಮುಖ್ ಶ್ರೀಕಾಂತ್ ದರಿಬಾಗಿಲು, ಪ್ರಮುಖರಾದ ಭೋಜ ದರಿಬಾಗಿಲು, ಸಂಜೀವ ಪೂಜಾರಿ ಬೆದ್ರಾಡಿ, ಯೋಗೀಶ್ ದರಿಬಾಗಿಲು, ಯೋಗೀಶ್ ವಿ.ಕೆ., ಸತೀಶ್ ಬ್ರಹ್ಮರಕೂಟ್ಲು, ಸಂದೇಶ್ ದರಿಬಾಗಿಲು, ಪ್ರಶಾಂತ್ ನೆತ್ತರಕೆರೆ, ರಾಹುಲ್ ರೈ ಪಚ್ಚಿನಡ್ಕ, ಉಮೇಶ್ ಬೆದ್ರಾಡಿ, ಶಿವರಾಮ ಬೀಡು, ದಿನಕರ ಚಂದ್ರಿಗೆ, ಜಯಪ್ರಕಾಶ್ ಚಂದ್ರಿಗೆ, ಸಿಬಿನ್ ಜಾರಂದಗುಡ್ಡೆ, ದಿವಾಕರ ದೇರ್ಲಕ್ಕೆ, ಪ್ರಶಾಂತ್ ಮಾಡಂಗೆ, ಸಂತೋಷ್ ಬ್ರಹ್ಮರಕೂಟ್ಲು, ವಸಂತ ನೆತ್ತರಕೆರೆ, ಹೇಮಂತ್ ದರಿಬಾಗಿಲು, ರಂಜಿತ್ ಹೊಳ್ಳರಬೈಲು, ಮನೋಜ್ ದರಿಬಾಗಿಲು, ಶ್ರೀನಾಥ್ ಬೆದ್ರಾಡಿ, ಮಾಧವ ಬ್ರಹ್ಮರಕೂಟ್ಲು, ಪ್ರಸಾದ್ ವಳವೂರು, ಕಿಶೋರ್ ಜಾರಂದಗುಡ್ಡೆ, ಗಿರೀಶ್ ಜಾರಂದಗುಡ್ಡೆ, ರಮೇಶ್ ಚಂದ್ರಿಗೆ, ಗಿರೀಶ್ ದೇವಂದಬೆಟ್ಟು, ಮನೀಷ್ ಬೀಡು, ಕಿಶನ್ ಜಾರಂದಗುಡ್ಡೆ, ಜನಾರ್ಧನ ಜಾರಂದಗುಡ್ಡೆ, ಶಶಿಧರ ಜಾರಂದಗುಡ್ಡೆ, ‌ಕಲ್ಯಾಣಿ ದರಿಬಾಗಿಲು, ವನಿತಾ ದರಿಬಾಗಿಲು, ರಾಧಾ ಚಂದ್ರಿಗೆ, ದೇವಕಿ ಚಂದ್ರಿಗೆ, ಭವಾನಿ ಚಂದ್ರಿಗೆ, ಸುಮತಿ ಪಲ್ಕೆ, ಪ್ರಮೀಳಾ ಪೆರಿಯೋಡಿಬೀಡು, ಮಾಲತಿ ಪೆರಿಯೋಡಿಬೀಡು, ಭಾಗೀರಥಿ ಜಾರಂದಗುಡ್ಡೆ, ರುಕ್ಮಿಣಿ ಜಾರಂದಗುಡ್ಡೆ, ದೀಕ್ಷಿತಾ ಬೆದ್ರಾಡಿ ಮತ್ತಿತರರಿದ್ದರು.ಬಳಿಕ ಕಳ್ಳಿಗೆ ಗ್ರಾ.ಪಂ ಕಚೇರಿಗೆ ತೆರಳಿ ಪಿಡಿಒ ಚಂದ್ರಾವತಿ ಅವರ ಮೂಲಕ ಮನವಿ ಸಲ್ಲಿಸಲಾಯಿತು.

By Suddi9