ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಅ.೩ರಿಂದ ಅ.೧೨ರವರೇಗೆ ನವರಾತ್ರಿ ಮಹೋತ್ಸವ
ಬಡಗಬೆಳ್ಳೂರು: ಶ್ರೀ ಆದಿಶಕ್ತಿ ದೇವಸ್ಥಾನದಲ್ಲಿ ಅ.೩ ಗುರುವಾರದಿಂದ ಅ.೧೨ ಶನಿವಾರದವರೇಗೆ ನವರಾತ್ರಿ ಮಹೋತ್ಸವ ನಡೆಯಲಿದೆ.
ಕಾರ್ಯಕ್ರಮಗಳು:
ಅ. ೩ರಂದು ಗುರುವಾರ ಬೆಳಗ್ಗೆ ೭ ಗಂಟೆಗೆ ತೆನೆಹಬ್ಬ , ಪ್ರಾರ್ಥನೆ,ಗಣಹೋಮ,ತೋರಣ ಮಹೂರ್ತ,ನವಕಲಶಾಭಿಷೇಕ, ಫ್ರಧಾನ ಹೋಮ,ಕಲಶ ಪ್ರತಿಷ್ಠೆ ನವರಾತ್ರಿ ಪೂಜಾರಂಭಪ್ರತಿನಿತ್ಯ ರಾತ್ರಿ ೮ರಿಂದ ಕಲ್ಪೋಕ್ತ ಪೂಜೆ.
ಅ.೪ರಂದುಶುಕ್ರವಾರ :ಸಾರ್ವಜನಿಕ ದುರ್ಗಾನಮಸ್ಕಾರ ಪೂಜೆ. ಅ.೫ರಂದು ಶನಿವಾರ ಸಾರ್ವಜನಿಕ ಶನಿಪೂಜೆ. ಅ೬ರಂದು ಭಾನುವಾರ :ಮಧ್ಯಾಹ್ನ ೧೨.೧೫ಕ್ಕೆ “ಚಂಡಿಕಾಹೋಮ” ಸಂಜೆ ಗಂಟೆ ೬ ರಿಂದ ಯಕ್ಷಕಲಾ ಸಂಘ ವರಕೋಡಿ ಯಕ್ಷಧಾಮ ಇದರ ಸಹಯೋಗದೊಂದಿಗೆ ದೇವದಾಸ್ ಅರ್ಕುಳ ನಿರ್ಧೇಶನದಲ್ಲಿ ಮಕ್ಕಳಿಂದ ಯಕ್ಷಗಾನ “ದಕ್ಷಾದ್ವರ- ಗಿರಿಜಾ ಕಲ್ಯಾಣ”
ಅ.೭ ರಂದು ಸೋಮವಾರ :ಮಧ್ಯಾಹ್ನ ಸಾರ್ವಜನಿಕ ಸತ್ಯನಾರಾಯಣ ಪೂಜೆ
ಅ.೮ ರಂದು ಮಂಗಳವಾರ ಸಾರ್ವಜನಿಕ ನಾಗತಂಬಿಲ. ಸಂಜೆ ೬ ರಿಂದ ಶ್ರೀ ಕಾವೇಶ್ವರ ಯಕ್ಷಗಾನ ಮಂಡಳಿ (ರಿ) ಬೆಳ್ಳೂರು ಇದರ ಯುವ ಕಲಾವಿದರಿಂದ ದೇವದಾಸ್ ಅರ್ಕುಳ ಇವರ ನಿರ್ಧೇಶನದಲ್ಲಿ ಪುಷ್ಪರಾಜ್ ಶೆಟ್ಟಿ ಇವರ ಸಾರಥ್ಯದಲ್ಲಿ ಅತಿನೂತನ ಯಕ್ಷಗಾನ.
ಅ. ೯ರಂದು ಬುಧವಾರ: ಶಾರದಾ ಪ್ರತಿಷ್ಟೆ ಶಾರದಾ ಪೂಜೆ, ಅಪ್ಪದ ಪೂಜೆ.
ಅ.೧೦ರಂದು ಗುರುವಾರ :ಮಹಾಪೂಜೆ ಶಾರದಾಪೂಜೆ
ಅ. ೧೧ ರಂದು ಶುಕ್ರವಾರ :ಬೆಳಗ್ಗೆ ಗಣ ಹೋಮ ಮಹಾಪೂಜೆ ಶಾರದಾ ಪೂಜೆ. ಸಂಜೆ ಸಾರ್ವಜನಿಕ ರಂಗಪೂಜೆ ಸಾರ್ವಜನಿಕ ಲಕ್ಷ ಕುಂಕುಮಾರ್ಚನೆ. ಅ. ೧೨ ರಂದು ಶನಿವಾರ :ಕಲಶ ವಿಸರ್ಝನೆ, ಮಹಾಪೂಜೆ,ಶಾರದಾ ಪೂಜೆ, ಅನ್ನ ಸಂತರ್ಪಣೆ ಸಂಜೆ ೫ರೀಂದ ವಿವಿಧ ವೇಷ ವಿನೋದಾವಳಿಗಳು . ಜೈ ವೀರ ಮಾರೂತಿ ವ್ಯಾಮ ಶಾಲೆ (ರಿ)ಬಡಗಬೆಳ್ಳೂರು ಇವರಿಂದ ತಾಲೀಮು ಪ್ರದರ್ಶನ ಶ್ರೀ ಆದಿಶಕ್ತಿ ಕುಣಿತ ಭಜನಾಮಂಡಳಿಯವರಿಂದ ಕುಣಿತ ಭಜನೆ ಹಾಗೂ ಕೇಪುಲಡ್ಕ ಫ್ರೆಂಡ್ಸ್ ಪ್ರಯೋಜಕತ್ವದಲ್ಲಿ “ಚೆಂಡೆ ಸಿಂಗಾರಿ ಮೇಳ” ಮತ್ತು ಶ್ರೀ ರಾಮ ಮಕ್ಕಳ ಕುಣಿತ ಭಜನಾ ಮಂಡಳಿ(ರಿ)ತೆಖ ಎಡಪದವು ಇವರಿಂದ ಕುಣಿತ ಭಜನೆ ನಂತರ ಶಾರದಾ ಮಾತೆಯ ಶೋಭಾಯಾತ್ರೆ ಶ್ರೀ ಆದಿಶಕ್ತಿ ದೇವಸ್ಥಾನದಿಂದ ಹೊರಟು,ಕೊಳತ್ತಮಜಲು ಎಕ್ಕುಂದ ಮಾರ್ಗವಾಗಿ ಸಾಗಿ ಪಲ್ಗೆಣಿ ನದಿಯಲ್ಲಿ ವಿಸರ್ಜನೆ ಮಡಲಾಗುವುದು ಎಂದು ಶ್ರೀ ಆದಿಶಕ್ತಿಚಾಮುಂಡೇಶ್ವರೀ ಸೇವಾ ಟ್ರಸ್ಟ್ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Super coverage
Thanks