ಯಜತ್ ಎನ್. ಕೋಟ್ಯಾನ್ ೪ ಚಿನ್ನದೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಗುರುಪುರ : ಮಂಗಳೂರು ತಾಲೂಕಿನ ಮೂಡುಶೆಡ್ಡೆಯ ಶಾರದಾ ಶುಭೋದಯ ವಿದ್ಯಾಲಯದ ೮ನೇ ತರಗತಿ ವಿದ್ಯಾರ್ಥಿ ಯಜತ್ ಎನ್. ಕೋಟ್ಯಾನ್ ಗುರುಪುರ ಅವರು ಬೆಂಗಳೂರಿನಲ್ಲಿ ನಡೆದ ಅಂಡರ್ ೧೪ ವಿಭಾಗದ ರಾಜ್ಯ ಹಾಗೂ ದಕ್ಷಿಣ ಮಧ್ಯ ವಲಯ ಶಾಟ್‌ಪುಟ್, ೨೦೦ ಮೀ. ರನ್ನಿಂಗ್, ೮೦ ಮೀ. ಹರ್ಡಲ್ಸ್ ಹಾಗೂ ೪*೧೦೦ ರಿಲೇಯಲ್ಲಿ ಪ್ರಥಮ ಸ್ಥಾನದೊಂದಿಗೆ ೪ ಚಿನ್ನದ ಪದಕ ಗಳಿಸಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅತ್ಲೆಟಿಕ್ಸ್ನಲ್ಲಿ ಉತ್ತಮ ಸಾಧನೆಗೈದ ಇವರು ಈತ ಜಿಲ್ಲೆ, ರಾಜ್ಯ ಮತ್ತು ವಲಯ ಮಟ್ಟದಲ್ಲಿ ಚಾಂಪಿಯನ್ ಆಗಿ ಮಿಂಚಿದ್ದಾರೆ. ಈ ಬಾರಿ ಮಂಗಳೂರು ದಸರಾ ಕ್ರೀಡೋತ್ಸವದಲ್ಲಿ ಮೂರು ಪದಕ ಗಳಿಸಿದ್ದು, ವಿದ್ಯಾಭಾರತಿ ಕರ್ನಾಟಕ ಪ್ರಾಯೋಜಿತ ರಾಜ್ಯ ಹಾಗೂ ವಲಯ ಮಟ್ಟದ ಕ್ರೀಡಾಕೂಟ ಬೆಂಗಳೂರಿನ ಚೆನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದಲ್ಲಿ ಅ. ೫ರಿಂದ ೬ರವರೆಗೆ ನಡೆದಿದೆ. ದಕ್ಷಿಣ ಮಧ್ಯ ವಲಯ ಮಟ್ಟದಲ್ಲಿ ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯದ ಸಿಬಿಎಸ್‌ಸಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಗುರುಪುರ ಮರಂಕರಿಯದ ನಿತಿನ್ ಕೋಟ್ಯಾನ್ ಮತ್ತು ತಾರಾ ಎನ್. ಕೋಟ್ಯಾನ್ ದಂಪತಿಯ ಪುತ್ರರಾದ ಯಜತ್‌ಗೆ ಶಾರದಾ ಶುಭೋದಯ ವಿದ್ಯಾಲಯದ ದೈಹಿಕ ಶಿಕ್ಷಕರಾದ ಪೂರ್ಣಿಮಾ ಆರ್., ಮತ್ತು ಲೋಹಿತ್ ಅವರು ತರಬೇತಿ ನೀಡುತ್ತಿದ್ದಾರೆ. ಶಾಲಾ ಆಡಳಿತ ಮಂಡಳಿಯು ಯಜತ್ ಕೋಟ್ಯಾನ್ ಸಾಧನೆಗೆ ಅಭಿನಂದನೆ ಸಲ್ಲಿಸಿದೆ. ಅಕ್ಟೋಬರ್ ೩೧ರಿಂದ ನವಂಬರ್ ೪ರವರೆಗೆ ಹಾಸನದ ಮ್ಯಾಂಗ್ಲೋರ್ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ರಾಷ್ಟç ಮಟ್ಟದ ಸ್ಪರ್ಧಾಕೂಟ ನಡೆಯಲಿದೆ.



