ಮುಂಬಯಿ: ಉಪನಗರ ಜೋಗೇಶ್ವರಿ ಪರ‍್ವದ ಮಜಾಸ್‌ವಾಡಿಯ ಠಾಕೂರ್ ರಸ್ತೆಯಲ್ಲಿನ ಮಹಾರಾಜ ಭವನ ಪ್ರದೇಶದಲ್ಲಿ ಶಿವಕುಂಜ್ ಬಿಲ್ಡಿಂಗ್‌ನಿಂದ ಸಿಮೆಂಟ್ ಬ್ಲಾಕ್ ಬಿದ್ದು ತುಳು ಕನ್ನಡತಿ ೨೨ ಹರೆಯದ ಯುವತಿ ಕು| ಸಂಸ್ಕೃತಿ ಅಮಿನ್ ಸ್ಥಳದಲ್ಲೇ ವಿಧಿವಶರಾಗಿದ್ದಾರೆ.

ಮಂಗಳೂರು ತಾಲೂಕು ಕಿನ್ನಿಗೋಳಿ ಹಳೆಯಂಗಡಿ ರಸ್ತೆಯಲ್ಲಿನ ಪಕ್ಷಿಕೆರೆ ಅಲ್ಲಿನ ಪದ್ಮಾವತಿ ಲಾನ್ ಎಂಡ್ ಮಲ್ಟಿರ‍್ಪಸ್ ಹಾಲ್ ಮತ್ತು ಮುಂಬಯಿಯಲ್ಲಿನ ಕೋಟ್ಯನ ಕ್ಯಾಟರರ್‍ಸ್‌ನ ಮಾಲೀಕ ಅನಿಲ್ ಅವಿನ್ ಮತ್ತು ಪದ್ಮಾವತಿ ಅಮಿನ್ ದಂಪತಿಯ ಏಕೈಕ ಸುಪುತ್ರಿಯಾಗಿದ್ದ ಕು| ಸಂಸ್ಕೃತಿ ಅವಿನ್ ಕಳೆದ ಬುಧವಾರ ಬೆಳಿಗ್ಗೆ ಕಚೇರಿಗೆ ತೆರಳಲು ಬೆಳಿಗ್ಗೆ ಸುಮಾರು ೯:೩೦ರ ಸುಮಾರಿಗೆ ಮನೆಯಿಂದ ಹೊರಟು ಮನೆಯಿಂದ ಕೇವಲ ಕೆಲವು ಮೀಟರ್ ದೂರ ನಡೆಯುತ್ತಿದ್ದಂತೆಯೇ ಸನಿಹದ ದಾರಿಪಕ್ಕ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಸಿಮೆಂಟ್ ಬ್ಲಾಕ್ ಸಂಸ್ಕೃತಿ ಅಮೀನ್‌ಳ ತಲೆಗೆ ಬಿದ್ದು ತೀವ್ರ ಪೆಟ್ಟಾಗಿ ಕುಸಿದುಬಿದ್ದಿದ್ದರು.

ಗಾಯಗೊಂಡ ಸಂಸ್ಕೃತಿಯನ್ನು ಕಂಡ ಆಕೆಯ ತಂದೆ ತಕ್ಷಣವೇ ಧಾವಿಸಿ ಬಂದ ಅನಿಲ್ ಅಮಿನ್ ಹೆಚ್‌ಬಿಟಿ ಟ್ರಾಮಾ ಕೇರ್ ಆಸ್ಪತ್ರೆಗೆ ಕರೆದೊಯ್ದರೂ, ತಲುಪುವಷ್ಟರಲ್ಲಿ ಸಾವು ಸಂಭವಿಸಿದೆ ಎಂದು ಆಸ್ಪತ್ರೆಯ ಸಹಾಯಕ ಮೆಡಿಕಲ್ ವೈದ್ಯಾಧಿಕಾರಿ ಡಾ| ಉಜ್ಮಾ ಘೋಷಿಸಿದ್ದಾರೆ.

ಮೃತ ದರ‍್ದೈವಿ ಸಂಸ್ಕೃತಿ ಅನಿಲ್ ಅಮಿನ್ ಅವರು ಜೋಗೇಶ್ವರಿ ಪರ‍್ವದ ಮಜಸ್ ರಸ್ತೆಯ ಕಿರಣದೇವಿ ದೇವೇಂದ್ರಸಿಂಗ್ ಚಾಳ್‌ನಲ್ಲಿ ತಂದೆ-ತಾಯಿ ಹಾಗೂ ಅಜ್ಜಿಯವರೊಂದಿಗೆ ವಾಸಿಸುತ್ತಿದ್ದರು. ಹೋಟೆಲ್ ಮ್ಯಾನೇಜ್ಮೆಂಟ್ ಪದವಿ ಪೂರೈಸಿದ್ದು ಕಳೆದ ಸೆಪ್ಟೆಂಬರ್. ೨೯ರಂದು ಅಷ್ಟೇ ಗೋರೆಗಾಂವ್‌ನಲ್ಲಿರುವ ಆರ್‌ಬಿಎಲ್ ಬ್ಯಾಂಕ್‌ಗೆ ಸರ‍್ಪಡೆಗೊಂಡು ವೃತ್ತಿಜೀವನ ಆರಂಭಿಸಿದ್ದರು. ಮರಣೋತ್ತರ ಪರೀಕ್ಷೆ, ವಿಧಿವಿಧಾನಗಳ ನಂತರ ಇಂದಿಲ್ಲಿ ಗುರುವಾರ ಪರ‍್ವಾಹ್ನ ಜೋಗೇಶ್ವರಿ ಪರ‍್ವದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲ್ಪಟ್ಟಿತು.

ಬುಧವಾರ ಬೆಳಿಗ್ಗೆ ಎಂದಿನಂತೆ ಮನೆ ಬಿಟ್ಟು ಕಚೇರಿಗೆ ತೆರಳುತ್ತಿದ್ದ ಸಂಸ್ಕೃತಿ, ಮನೆಯಿಂದ ಕೇವಲ ಕೆಲವು ಮೀಟರ್ ದೂರ ನಡೆದಿದ್ದಂತೆಯೇ ಶ್ರದ್ಧಾ ಕನ್‌ಸ್ಟ್ರ‍್ರಕ್ಷನ್ ನರ‍್ಮಿಸುತ್ತಿದ್ದ ಕಟ್ಟಡದಿಂದ ಸಿಮೆಂಟ್ ಇಟ್ಟಿಗೆ ತಲೆಗೆ ಬಿದ್ದಿತು. ಆ ವೇಳೆಗೆ ಅವರ ತಂದೆ ಅನಿಲ್ ಅವಿನ್ ಮನೆಯಲ್ಲಿ ಉಪಹಾರ ಸೇವಿಸುತ್ತಿದ್ದರು. ಅಚಾನಕ್ ಹೊರಗಿನಿಂದ ಬಿದ್ದ ಕಿರುಚಾಟದ ಶಬ್ದ ಕೇಳಿ ಅವರು ಹೊರಗೆ ಓಡಿಬಂದಾಗ ಜನಸಮೂಹ ಸೇರುವುದನ್ನು ಕಂಡ ತಾವೂ ಸ್ಥಳಕ್ಕೆ ಧಾವಿಸಿದ್ದರು. ತಾಯಿ ಪದ್ಮಾವತಿ ಅವಿನ್ ಕೂಡಾ ಓಡೋಡಿ ಬಂದು ನೆಲದ ಮೇಲೆ ರಕ್ತಸಿಕ್ತಲಾಗಿ ಜೀವನ್ಮರಣದಲ್ಲಿ ಒದ್ದಾಡುತ್ತಿದ್ದ ಮಗಳನ್ನು ನೋಡಿ ಆಸ್ಪತ್ರೆಯತ್ತ ಧಾವಿಸಿದ್ದರು.

ಬಿಎಂಟಿಸಿ ವಿಪತ್ತು ನರ‍್ವಹಣಾ ಘಟಕದ ವರದಿಯ ಪ್ರಕಾರ, ಈ ಕಟ್ಟಡ ಪುರ‍್ವಿಕಾಸ ಹಂತದಲ್ಲಿದ್ದು, ಮಜಾಸ್ ಶ್ರದ್ಧಾ ಲೈಫ್ ಸಂಸ್ಥೆಯು ಕಾಮಗಾರಿ ನಡೆಸುತ್ತಿದೆ ಎನ್ನಲಾಗಿದೆ. ಸ್ಥಳಿಯ ಮೇಘವಾಡಿ ಪೊಲೀಸರು ಅನಿಲ್ ಅವರ ಹೇಳಿಕೆ ದಾಖಲಿಸಿ, ಮೃತಪಟ್ಟ ದಾರುಣ ಘಟನೆಗೆ ಸಂಬಂಧಿಸಿ ಶ್ರದ್ಧಾ ಕನ್‌ಸ್ಟ್ರ‍್ರಕ್ಷನ್‌ನ ನರ‍್ಮಾಪಕ, ಗುತ್ತಿಗೆದಾರ, ಎಂಜಿನಿಯರ್ ಮತ್ತು ಸೈಟ್ ಮೇಲ್ವಿಚಾರಕರ ವಿರುದ್ಧ ದೂರು ದಾಖಲಿಸಿರುವು ದಾಗಿ ತಿಳಿಸಿದ್ದಾರೆ. ನರ‍್ಲಕ್ಷ ಆರೋಪದ ಮೇರೆಗೆ ಕಟ್ಟಡದ ಕಂಟ್ರಾಕ್ಟರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅವಿನ್ ಮತ್ತು ಪದಾಧಿಕಾರಿಗಳನೇಕರು ಅಸೋಸಿಯೇಶನ್‌ನ ಜೊತೆ ಕೋಶಾಧಿಕಾರಿ ಹಾಗೂ ಸಾಮಾಜಿಕ ಮತ್ತು ಧರ‍್ಮಿಕ ಉಪ ಸಮಿತಿಯ ಗೌರವ ಕರ‍್ಯರ‍್ಶಿ ಸದಾಶಿವ ವೈ.ಕೋಟ್ಯಾನ್ ಪೊಸ್ರಲ್ ಸೇರಿದಂತೆ ಅಸೋಸಿಯೇಶನ್‌ನ ಜೋಗೇಶ್ವರಿ ಸ್ಥಳೀಯ ಕಛೇರಿಯ ಪದಾಧಿಕಾರಿಗಳು, ಸದಸ್ಯರನೇಕರು ಅಂತಿಮ ಕ್ರಿಯೆಯಲ್ಲಿ ಪಾಲ್ಗೊಂಡು ಶ್ರದ್ಧಾಂಜಲಿ ರ‍್ಪಿಸಿ ಮೃತರ ಕುಟುಂಬಕ್ಕೆ ಸಾಂತ್ವನವಿತ್ತರು.

ಜಸ್ಟೀಸ್ ಫಾರ್ ಸಂಸ್ಕೃತಿ ಅಮಿನ್:

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸದಸ್ಯರಾಗಿರುವ ಅನಿಲ್ ಅಮಿನ್ ಪರಿವಾರದ ಏಕೈಕ ಸುಪುತ್ರಿ ನಿಧನಕ್ಕೆ ಹಾಗೂ ಮೃತಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅವಿನ್ ಮುಂದಾಳುತ್ವದಲ್ಲಿ ಶೀಘ್ರದಲ್ಲೇ ಜೋಗೇಶ್ವರಿಯಲ್ಲಿ ಜಸ್ಟೀಸ್ ಫಾರ್ ಸಂಸ್ಕೃತಿ ಎಂದು ಪ್ರತಿಭಟನೆ ನಡೆಸುವ ಪರ‍್ವಸಿದ್ಧತಾ ಸಭೆ ಇಂದಿಲ್ಲಿ ನಡೆಸಲಾಗಿದೆ ಎಂದು ಅಸೋಸಿಯೇಶನ್ ಮೂಲವೊಂದು ತಿಳಿಸಿದೆ.

ವರದಿ: ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *