Published On: Thu, Aug 7th, 2025

ಕರ್ನಾಟಕದ ಜಾತಿವಾರು ಜನಸಂಖ್ಯಾಗಣತಿ ನಮೂನೆಯಲ್ಲಿ ದೇವಾಡಿಗರು ಜಾತಿ ಕಲಂನಲ್ಲಿ “ದೇವಾಡಿಗ” ಎಂದೇ ನಮೂದಿಸಲು ವಿಶ್ವ ದೇವಾಡಿಗ ಮಹಾ ಮಂಡಳ ಕರೆ

ಮುಂಬಯಿ: ಕರ್ನಾಟಕದ ಜಾತಿವಾರು ಜನಸಂಖ್ಯಾಗಣತಿ ನಮೂನೆಯಲ್ಲಿ ದೇವಾಡಿಗರು ಜಾತಿ ಕಲಂನಲ್ಲಿ  “ದೇವಾಡಿಗ” ಎಂದೇ ನಮೂದಿಸಲು ವಿಶ್ವ  ದೇವಾಡಿಗ  ಮಹಾ  ಮಂಡಳ ಸಮೂದಾಯದ ಜನತೆಗೆ ಕರೆ ನೀಡಿದೆ. ಕರ್ನಾಟಕ  ರಾಜ್ಯ ಸರಕಾರವು  ಈಗಾಗಲೇ  ಜಾತಿವಾರು ಜನಸಂಖ್ಯಾಗಣತಿ ಇದೇ 2025ನೇ ಸೆಪ್ಟೆಂಬರ್-07ರಿಂದ ಪ್ರಾರಂಭಿಸಲಿದೆ. ಆದುದರಿಂದ ದೇವಾಡಿಗ ಸಮಾಜವು ಹಿಂದುಳಿದ ಸಮಾಜವೆಂದು  ಪರಿಗಣಿಸಿದ್ದ ರೂ  ಸರಕಾರದಿಂದ ಸಿಗಬೇಕಾದ  ಮೀಸಲಾತಿಯ  ಸವಲತ್ತುಗಳು  ಸಿಗದೇ  ಇರುವುದು ವಿಷಾದನೀಯ. ನಮ್ಮ ಸಮುದಾಯದ ಜನಸಂಖ್ಯೆ ವಿವರ ಬಹಳಷ್ಟು ತಪ್ಪಾಗಿ ವರ್ಗೀಕರಿಸಿದ್ದು, ಕೆಲವೊಂದು  ಉಪಜಾತಿಗಳನ್ನು ದೇವಾಡಿಗ ಜಾತಿಗೆ  ಸೇರಿಸಲ್ಪಟ್ಟು ಅನ್ಯಾಯವಾಗಿದೆ ಆದ್ದರಿಂದ ದೇವಾಡಿಗರು ಜಾತಿ ಕಲಂನಲ್ಲಿ “ದೇವಾಡಿಗ” ಎಂದೇ ನಮೂದಿಸಲು ಡಿಎಂಎಂ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ತಿಳಿಸಿದ್ದಾರೆ.

ಈ  ಬಾರಿಯ ಕರ್ನಾಟಕ ರಾಜ್ಯಾದ್ಯಂತ ಮರುಸರ್ವೆ ಮಾಡುವಾಗ ನಾವು ದೇವಾಡಿಗರೆಲ್ಲರೂ ಗಣತಿ  ನಮೂನೆಯಲ್ಲಿ  ಜಾತಿ ಕಲಂನಲ್ಲಿ  ಖಂಡಿತವಾಗಿಯೂ “ದೇವಾಡಿಗ” ಎಂದೇ ನಮೂದಿಸಬೇಕು ಉಪಜಾತಿ (ಸೇರಿಗಾರ, ಶೇರಿಗಾರ, ಮೊಯಿಲಿ) ಅಲ್ಲದೆ ಉಪನಾಮ (ಬಲಿ / ಗೋತ್ರ / ಊರು ಆಧಾರಿತ) ಈ ರೀತಿ   ನಮೂದಿಸಬಾರದು ಎಂದು ಉಪಾಧ್ಯಕ್ಷರುಗಳಾದ ಡಾ| ದೇವರಾಜ್.ಕೆ, ಅಣ್ಣಯ್ಯ ಬಿ.ಶೇರಿಗಾರ್, ನಾಗರಾಜ ಬಿ. ಪಡುಕೋಣೆ  ತಿಳಿಸಿದ್ದಾರೆ.

ಈ ಹಿಂದಿನ ಜನಗಣತಿಯಲ್ಲಿನ ತಪ್ಪುಗಳನ್ನು ಸರಿಪಡಿಸುವ ಸುವರ್ಣಾವಕಾಶವನ್ನು ಸದುಪಯೋಗಿಸ ಬೇಕಾಗಿದೆ .ದೇವಾಡಿಗ  ಸಮಾಜದ  ನಿಖರವಾದ ಜನಸಂಖ್ಯೆಯನ್ನು ಸೂಕ್ತವಾಗಿ ಗುರುತಿಸಿ  ಸರಕಾರದಿಂದ  ಸಂವಿಧಾನತ್ಮಾಕವಾಗಿ ಸಿಗಬಹುದಾದ  ಮೀಸಲಾತಿ / ಅವಕಾಶಗಳನ್ನು ಸಮಾಜದ ಆಥಿಕ, ಶೈಕ್ಷಣಿಕ, ಸಾಮಾಜಿಕ  ಹಾಗೂ  ರಾಜಕೀಯ ಪ್ರಗತಿಗಾಗಿ  ಪಡೆಯಬೇಕು. ಸಮಾಜದ  ಎಲ್ಲಾ  ಸಂಘ  ಸಂಸ್ಥೆಗಳು  ಅತಿ ಗಂಭೀರವಾಗಿ ಸರ್ವೇ ಸಮಯದಲ್ಲಿ ಜಾತಿ ಭಾಂಧವರು ಜಾಗೃತರಾಗಿರುವಂತೆ ಗೌರವ  ಕೋಶಾಧಿಕಾರಿ ಡಾ| ಸುಂದರ ಮೊಯಿಲಿ ತಿಳಿಸಿದ್ದಾರೆ.

ಜನಗಣತಿಯ ಸ್ಪಷ್ಟತೆ ಅಥವಾ ಯಾವುದೇ ಮಾಹಿತಿಗಾಗಿ ಧರ್ಮಪಾಲ್ ದೇವಾಡಿಗ (9322506941), ಡಾ| ದೇವರಾಜ್.ಕೆ (9448494789), ಅಣ್ಣಯ್ಯ ಬಿ.ಶೇರಿಗಾರ್ (9371020723), ನಾಗರಾಜ ಬಿ. ಪಡುಕೋಣೆ (9820212271), ಹಿರಿಯಡ್ಕ ಮೋಹನದಾಸ್ (9821111896), ಗಣೇಶ್  ದೇವಾಡಿಗ  ಅಂಬಲ್ಪಾಡಿ (97418 84025), ಡಾ| ಸುಂದರ ಮೊಯಿಲಿ (9844913977) ಇವರನ್ನು ಸಂಪರ್ಕಿಸಬಹುದು ಎಂದು ಗೌರವ  ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ್ ಮತ್ತು  ಗೌರವ  ಕಾರ್ಯದರ್ಶಿ ಗಣೇಶ್  ದೇವಾಡಿಗ  ಅಂಬಲ್ಪಾಡಿ  ಈ ಮೂಲಕ ವಿನಂತಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter