Published On: Sun, Oct 19th, 2025

ಹಲಸಂಗಿ ಗೆಳೆಯರ ಸಾಹಿತ್ಯಿಕ ಚಟುವಟಿಕೆಗಳು ಸದಾ ಸ್ಮರಣೀಯ‌: ಪ್ರೊ. ರಾಜಶೇಖರ ಹಳೆಮನೆ

ಬಂಟ್ವಾಳ:  ಹಲಸಂಗಿ ಗೆಳೆಯರ ಸಾಹಿತ್ಯಿಕ ಚಟುವಟಿಕೆಗಳು ಸದಾ ಸ್ಮರಣೀಯ‌, ಅವರು ಆ ಕಾಲದಲ್ಲಿ ಜಾನಪದ ಸಾಹಿತ್ಯಕ್ಕೆ  ಹೊಸ ಭಾಷ್ಯ ಬರೆದರು ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ  ಪ್ರೊ. ರಾಜಶೇಖರ ಹಳೆಮನೆ ಹೇಳಿದರು.

ಹಲಸಂಗಿ ಗೆಳೆಯರ ಪ್ರತಿಷ್ಠಾನ ವಿಜಯಪುರ ಇದರ ವತಿಯಿಂದ  ಶನಿವಾರ ಬಂಟ್ವಾಳ ತಾಲೂಕಿನ ವಾಮದಪದವಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ  ನಡೆದ ಒಂದು ದಿನದ ರಾಜ್ಯ ಮಟ್ಟದ ಉಪನ್ಯಾಸ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.


ಸಾಂಸ್ಕೃತಿಕ ವಿನಿಮಯದ ನಿಜವಾದ ಅರ್ಥ ಈ ಕಾರ್ಯಕ್ರಮದ ಮೂಲಕ ಈಡೇರಿದೆ‌. ಮಧುರಚೆನ್ನರ ಸಾಹಿತ್ಯಿಕ  ಆಶಯಗಳು ವರ್ತಮಾನವನ್ನು ಬಹಳ ಪ್ರಭಾವಿಸುತ್ತಿವೆ. ಅವರ ಕೃತಿಗಳು ಈ ಸಂಗತಿಯನ್ನು ಸ್ಪಷ್ಟಪಡಿಸುತ್ತವೆ ಎಂದರು.


ಪ್ರಸ್ತಾವನೆಗೈದ ಡಾ.ರಮೇಶ್.ಎಸ್ ಕತ್ತಿ  ‘ಕನ್ನಡ ನವೋದಯ ಕೇಂದ್ರವಾಗಿ ಹಲಸಂಗಿ ಗೆಳೆಯರ ಬಳಗ ವಿಜಾಪುರವನ್ನು ಕೇಂದ್ರವಾಗಿಸಿ ನವೋದಯನ್ನು ಬೆಳೆಸಿದ ಬಗೆ ಅನನ್ಯವಾಗಿದೆ ಎಂದರು.


ಹಲಸಂಗಿ ಗೆಳೆಯರ ಹಾಡು,ಪಾಡು ಕುರಿತು ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಡಾ. ಶಂಕರ ಬೈಚಬಾಳ ನುಡಿ ಪ್ರಜ್ಞೆಯ ಸಾರ್ಥಕ ರೂಪಕವಾಗಿ ಹಲಸಂಗಿ ಗೆಳೆಯರ ಜಾನಪದೀಯ ಕೃತಿಗಳು ಮೂಡಿ ಬಂದಿವೆ ಸಾಂಸ್ಕೃತಿಕ ಅಧ್ಯಯನದ ಹೊಸ ಸಾಧ್ಯತೆಗಳನ್ನು ಅವು ತೆರೆದಿಟ್ಟಿವೆ ಎಂದರು.ಕಾಲೇಜಿನ ಪ್ರಾಂಶುಪಾಲರಾದ
ಪ್ರೊ.ಜಯರಾಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಾಹಿತ್ಯದ ಮೂಲಕ ಮನುಷ್ಯ ಹೊಸ ಜ್ಞಾನ ಜಗತ್ತಿನ ಅನ್ವೇಷಣೆ ತೊಡಗಬೇಕು ಎಂದರು.


ಕಾಲೇಜಿನ  ಐಕ್ಯೂಎಸಿ ಸಂಚಾಲಕರಾದ ಡಾ ವಿಶಾಲ್ ಪಿಂಟೋ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಲೋಹಿತ್ ಅವರು ವಂದಿಸಿದರು.ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ‌. ಪುಟ್ಟಲಕ್ಷ್ಮಮ್ಮ  ಉಪಸ್ಥಿತರಿದ್ದರು‌.


ಬಳಿಕ ನೀಲಕಂಠೇಶ್ವರ ಕಲಾತಂಡದ ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತಲ್ಲದೆ  ಕುವೆಂಪು ಅವರ ರಾಮಾಯಣ ದರ್ಶನಂ ಕಾವ್ಯದ ರೂಪಕ ಕಲಾವನ್ನು ಅಭಿಜೀತ ತಂಡದ ಸದಸ್ಯರು ಪ್ರದರ್ಶಿಸಿದರು
ಗೋಡೆ ಪತ್ರಿಕೆ ಬಿಡುಗಡೆ: ಇದೇ ವೇಳೆ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸಿದ್ಧಪಡಿಸಿದ ‘ನಿಚ್ಚಂ ಪೊಸತು’ ಮಾಸಿಕ ಗೋಡೆ ಪತ್ರಿಕೆಯನ್ನು ಹಲಸಂಗಿ ಗೆಳೆಯರ ಬಳಗದ ಸದಸ್ಯ ಸಂಚಾಲಕ ಡಾ.ರಮೇಶ ಕತ್ತಿ ಬಿಡುಗೊಡೆಗೊಳಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter