ಬಂಟ್ವಾಳ: ದ. ಕ. ಜಿ. ಪಂ. ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಂಗಳೂರು ಉತ್ತರ ವಲಯ ಹಾಗೂ ಲೇಡಿ ಹಿಲ್ ವಿಕ್ಟೋರಿಯಾ ಪ್ರೌಢಶಾಲೆ ಉರ್ವ ಮಂಗಳೂರು ಇವರ ಸಹಯೋಗದಲ್ಲಿ 2025 –26 ನೆ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಮತ್ತು ಪ್ರೌಢ ಶಾಲಾ ಬಾಲಕ,ಬಾಲಕಿಯರ ಈಜು ಸ್ಪರ್ಧೆಯ 14 ರ ಒಳಗಿನ ಹುಡುಗಿಯರ 200 ಮೀಟರ್ ಫ್ರೀ ಸ್ಟೈಲ್ ನಲ್ಲಿ ಕಲ್ಲಡ್ಕ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ 7 ನೇ ಭಾಮತಿ ತರಗತಿಯ ಸಾನಿಕಾ ಆರ್ .ಕೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.

ಈಕೆ ಕಲ್ಲಡ್ಕ ಆರ್ ಕೆ ಸ್ಟುಡಿಯೋ ದ ರಾಜೇಶ್ ಕಿರಣ್ ಮತ್ತು ಪರಿಮಳ ದಂಪತಿ ಪುತ್ರಿಯಾಗಿದ್ದು,ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ ಪೆಕ್ಟರ್ ಬಿ.ಕೆ ನಾಯ್ಕ್ ಮತ್ತು ಸೀ ಸ್ವಿಮ್ಮರ್ ತಂಡದ ಸದಸ್ಯರಾದ ಅಶೋಕ್ ದೇವಾಡಿಗ ಇವರ ಶಿಷ್ಯೆಯಾಗಿದ್ದಾಳೆ.
