ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಬೆಳ್ಳೂರು ಬಂಟರ ಸಂಘದ ವತಿಯಿಂದ ಆರ್ಥಿಕ ನೆರವು
ಬಂಟ್ವಾಳ: ಬೆಳ್ಳೂರು ವಲಯ ಬಂಟರ ಸಂಘದ ವ್ಯಾಪ್ತಿಯಲ್ಲಿ ಬರುವ ಬಡಗಬೆಳ್ಳೂರು ಗ್ರಾಮದ ಮಜ್ಜಿಬೈಲು ನಿವಾಸಿಯಾದ ಮಂಜುಳಾ ಶೆಟ್ಟಿ ಎಂಬವರ ಮಗ ದಿವೇಶ್ ಶೆಟ್ಟಿ (39) ಎಂಬವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಮಂಗಳೂರಿನ ಜ್ಯೋತಿ KMC ಆಸ್ಪತ್ರೆಯಲ್ಲಿ ಡಯಾಲಿಸಿಸ್ ನಡೆಸಲಾಗುತ್ತಿದ್ದು ಇವರಿಗೆ kidney transplant ನಡೆಸಲು ಸುಮಾರು 20 ಲಕ್ಷ ಆಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈಮೊತ್ತವನ್ನು ಭರಿಸಲು ಸಾಧ್ಯವಾಗದೆ ಇರುವುದರಿಂದ .

ಬೆಳ್ಳೂರು ವಲಯ ಬಂಟರ ಸಂಘದ ವತಿಯಿಂದ 25,000 ರೂಪಾಯಿ ಹಾಗೂ ಬಂಟ್ವಾಳ ಬಂಟರ ಸಂಘದ ವತಿಯಿಂದ ೧೫೦೦೦ ರೂಪಾಯಿ ನೀಡಲಾಯಿತು. ಇವರಿಗೆ ಇನ್ನೂ ಹೆಚ್ಚಿನ ಹಣದ ಅಗತ್ಯವಿದ್ದು ದಾನಿಗಳಾದ ತಾವು ಈ ಕುಟುಂಬದೊಂದಿಗೆ ಕೈ ಜೋಡಿಸಬೇಕಾಗಿ ವಿನಂತಿ GPA phone pay number +919972639637



