ಜ್ಯೋತಿಗುಡ್ಡೆ: ನವರಾತ್ರಿ ಉತ್ಸವಕ್ಕೆ ಚಾಲನೆ,ಮುಖ್ಯಮಂತ್ರಿ ಪದಕ ಪುರಸ್ಕೃತರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ
ಬಂಟ್ವಾಳ :ತಾಲೂಕಿನ ತುಂಬೆ ಗ್ರಾಮದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ದಲ್ಲಿ ನವರಾತ್ರಿ ಉತ್ಸವಕ್ಕೆ ಸೋಮವಾರ ಚಾಲನೆ ನೀಡಲಾಗಿದ್ದು,ಈಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ 2024ನೇ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಸುಧೀರ್ ಕುಮಾರ್ ಜಾರಂದಗುಡ್ಡೆ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಸಭೆಯಅಧ್ಯಕ್ಷತೆಯನ್ನು ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿಯ ಸಂಚಾಲಕ ನಾರಾಯಣ ನಾಯ್ಕ್ ಅವರು ವಹಿಸಿದ್ದರು.ಅದೇರೀತಿ ಸ್ಥಳೀಯ ಸರಕಾರಿ ಶಾಲೆಗಳಲ್ಲಿ 2024-25ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೈದ 6 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.
ತಾ.ಪಂ.ನ ಗ್ರಾಮೀಣ ಉದ್ಯೋಗ ಸಹಾಯಜ ನಿರ್ದೇಶಕ ವಿಶ್ವನಾಥ ಬೈಲಮೂಲೆ,ಡಾ| ನಂದೀಶ ಶೆಟ್ಟಿ ಕದ್ರಿ ಕಂಬಳ ಮಂಗಳೂರು,ಅಮ್ಮಾಡಿ ವ್ಯ. ಸೇ. ಸ. ಸಂಘ ನಿ.ದ ಮಾಜಿ ನಿರ್ದೇಶಕ ಬಿ. ಸುರೇಶ್ ಭಂಡಾರಿ ಅರ್ಬಿ,ಉದ್ಯಮಿಗಳಾದ ಕಿರಣ್ ಕುಮಾರ್,ರೇವತಿ ಪಿ.,ಅತಿಥಿಗಳಾಗಿ ಭಾಗವಹಿಸಿದ್ದರು.
ಟ್ರಸ್ಟ್ ನ ತಾರನಾಥ ಕೊಟ್ಟಾರಿ ತೇವು ಪ್ರಸ್ತಾವನೆಗೈದರು. ಸೇವಾ ಸಮಿತಿಯ ಅಧ್ಯಕ್ಷ ಯಶವಂತ ಮುಂಡಾಜೆ ಸ್ವಾಗತಿಸಿ, ಉಮೇಶ್ ರೆಂಜೋಡಿ ವಂದಿಸಿದರು.ಪ್ರ ಕಾರ್ಯದರ್ಶಿ ಉದಯಕುಮಾರ್ ಜ್ಯೋತಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.
ಸೆ. 30ರ ವರೆಗೆ ನವರಾತ್ರಿ ಪ್ರಯುಕ್ತ ಪ್ರತಿದಿನ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆಯೊಂದಿಗೆ ನಡೆಯಲಿದೆ



