Published On: Mon, Dec 8th, 2025

ಮುತ್ತೂರು ನಟ್ಟಿಲ ಪಂಜುರ್ಲಿ ಮತ್ತು ಪರಿವಾರ ದೈವಗಳ ನೂತನ ದೈವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ

ಬಂಟ್ವಾಳ: ಸುಮಾರು 400 ವರ್ಷಗಳ  ಇತಿಹಾಸವನ್ನು ಹೊಂದಿರುವ ಮುತ್ತೂರು ನಟ್ಟಿಲ ಪಂಜುರ್ಲಿ ಮತ್ತು ಪರಿವಾರ ದೈವಗಳ ನೂತನ ದೈವಸ್ಥಾನ ನಿರ್ಮಾಣಕ್ಕೆಪುರೋಹಿತರಾದ ಶ್ರೀ ವಿನಾಯಕ ಕಾರಂತ ಕಾವೂರು ಅವರ ಪೌರೋಹಿತ್ಯದಲ್ಲಿ ಭಾನುವಾರ ಶಿಲಾನ್ಯಾಸ   ನೆರವೇರಿಸಲಾಯಿತು.


ಸುಮಾರು 75  ಲಕ್ಷ ಅಂದಾಜು ವೆಚ್ಚದಲ್ಲಿ ನಟ್ಟಿಲ ಪಂಜುರ್ಲಿ ದೈವಸ್ಥಾನ, ರಕ್ತೇಶ್ವರಿ ದೈವಸ್ಥಾನ, ಕಲ್ಲುರ್ಟಿ ತೂಕತ್ತೇರಿ , ಗುಳಿಗನ ಕಟ್ಟೆ, ನಾಗಬನ ದ ಜೀರ್ಣೋದ್ಧಾರ, ಬಾವಿ ಹಾಗೂ ಆವರಣಗೋಡೆ ನಿರ್ಮಾಣ ಕಾರ್ಯವು ನಡೆಯಲಿದೆ.ಬಂಟ್ವಾಳ ಶಾಸಕರಾದ  ರಾಜೇಶ್ ನಾಯ್ಕ್  ಉಳಿಪಾಡಿಗುತ್ತು , ಸುಬ್ಬಯ್ಯ ಮಾರ್ಲ,  ಕೃಷ್ಣರಾಜ ಮಾರ್ಲ ಮತ್ತು ರಿತೇಶ್ ಮಾರ್ಲ ಅವರು  ಶಿಲಾನ್ಯಾಸವನ್ನು  ನೆರವೇರಿಸಿದರು.


ಈ ಸಂದರ್ಭದಲ್ಲಿ ಉಳಿಪಾಡಿಗುತ್ತು ಮುತ್ತೂರು ಮನೆಯ  ಶೈಲಾ ಮಲ್ಲಿ,  ಸಂಧ್ಯಾ ನಾಯ್ಕ್,  ಕೊಳವೂರುಗುತ್ತು ಸದಾನಂದ ಶೆಟ್ಟಿ , ಮೊಗರುಗುತ್ತು ವಿದ್ಯಾ ಚರಣ್ ಭಂಡಾರಿ, ದ.ಕ. ಕೆಎಂಎಫ್ ನಿರ್ದೇಶಕರಾದ ನಂದರಾಮ ರೈ ಅಂಬೋಡಿಮಾರ್ , ಗುರುಪುರ ಬಡಕೆರೆ ಗುತ್ತು ಸಚಿನ್ ಅಡಪ, ಜಪ್ಪುಗುಡ್ಡೆ ಗುತ್ತು ಸುಧೀರ್ ನಾಯ್ಕ್, ಸುಧೀರ್ ಶೆಟ್ಟಿ ಕೊಳವೂರು ಮೇಗಿನಮನೆ,  ಮೊಗರು ಪಾಕಬೆಟ್ಟು ಭಾಸ್ಕರ ಶೆಟ್ಟಿ, ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಕುಲಾಲ್,  ಜಿಲ್ಲಾ  ಧಾರ್ಮಿಕ  ಪರಿಷತ್ತಿನ ಸದಸ್ಯರಾದ ಹರಿಯಪ್ಪ ಮುತ್ತೂರು , ಮಾಜಿ ತಾ. ಪಂ. ಸದಸ್ಯರಾದ ನಾಗೇಶ್ ಶೆಟ್ಟಿ , ಕುಪ್ಪೆಪದವು ಗ್ರಾ. ಪಂ. ನ ಮಾಜಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಪಂಬದ ಸಮಾಜ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಪಂಬದ ಗೋಳಿಪಲ್ಕೆ , ದೈವನರ್ತಕರಾದ ಮುಖೇಶ ಪಂಬದ, ತುಳು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್ , ಬಾಲಕೃಷ್ಣ ಪಂಬದ ಪೆರಾರ, ಗ್ರಾ. ಪಂ. ಸದಸ್ಯರಾದ ತಾರನಾಥ ಕುಲಾಲ್ , ಅಮ್ಟಾಡಿ ಗ್ರಾ. ಪಂ. ಕಾರ್ಯದರ್ಶಿ ನಿತ್ಯಾನಂದ್ ಕೆ, ಪ್ರಮುಖರಾದ ದೀಪಕ್ ಪೂಜಾರಿ, ಕುಸುಮಾಕರ ಶೆಟ್ಟಿ, ಗಣೇಶ್ ರೈ ಮಾಣಿ, ಉಮೇಶ್ ಪೂಜಾರಿ, ದೀಪ್ತೇಶ್ ಪೂಜಾರಿ, ರವಿಕುಲಾಲ್, ಶೇಖರ್ ಕುಲಾಲ್ ಮಟ್ಟು, ಯಶೋಧರ ಕುಲಾಲ್, ಸೂರಜ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.


ದೈವಸ್ಥಾನದ ಇತಿಹಾಸ:
 ಮುತ್ತೂರು ನಟ್ಟಿಲ ಪಂಜುರ್ಲಿ ದೈವಸ್ಥಾನಕ್ಕೆ ಸುಮಾರು 400 ವರ್ಷಕ್ಕ ಅಧಿಕವಾದ ಇತಿಹಾಸವನ್ನು ಹೊಂದಿದ್ದು, ವಿದ ದೇವಾನು ಪಂಬದೆದಿಯ ಭಕ್ತಿಗೆ ಮೆಚ್ಚಿ ಮುತ್ತೂರ ಕಟ್ಟೆಗೆ ಬಂದು ಉಳಿಪಾಡಿಗುತ್ತಿನ ಆಗಿನ ಮುತ್ತೂರು ಮನೆಯಲ್ಲಿದ್ದ ಉಗ್ಗ ಕೊಟ್ರಿಯಾಲ್ ರವರಿಂದ ಆರಾಧನೆಗೊಂಡ ನಟ್ಟಿಲ ಪಂಜುರ್ಲಿ ದೈವಸ್ಥಾನವು ಅಜೀರ್ಣಾವಸ್ಥೆಗೆ ತಲುಪಿತ್ತು,
ಇದರ ಜೀಣೋದ್ಧಾರ ನೆಡೆಸುವ ಸಂಕಲ್ಪದಂತೆ ನಡೆಸಲಾದ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಇದೀಗ ನೂತನ ದೈವಸ್ಥಾನದ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು,ಈ   ಪ್ರಯುಕ್ತ  ಬಂಟ್ವಾಳ  ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ,  ಸುಬ್ಬಯ್ಯ ಮಾರ್ಲ, ಪ್ರಸನ್ನಶೆಟ್ಟಿ ಉಳಿಪಾಡಿಗುತ್ತು ಇವರ ಗೌರವಾಧ್ಯಕ್ಷತೆಯಲ್ಲಿ  ಹಾಗೂ  ಶ್ರೀ ಕೃಷ್ಣರಾಜ ಮಾರ್ಲ ಇವರ  ಅಧ್ಯಕ್ಷತೆಯಲ್ಲಿ ನಟ್ಟಿಲ ಪಂಜುರ್ಲಿ ದೈವಸ್ಥಾನಕ್ಕೆ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter