ಪ್ರತಿಯೊಬ್ಬರಲ್ಲೂ ದೇವರನ್ನು ಕಾಣುವ ದೃಷ್ಟಿಯೇ ನಾರಾಯಣಗುರುಗಳ ಧ್ಯೇಯ : ಮಲ್ಲಿಕಾ ಜ್ಯೋತಿಗುಡ್ಡೆ
ಬಂಟ್ಚಾಳ : ಪ್ರತಿಯೊಬ್ಬ ಮಾನವನಲ್ಲೂ ದೇವರ ಅಂಶವಿದೆ ಎಂಬ ಅರಿವನ್ನು ಸಮಾಜಕ್ಕೆ ನೀಡಿದ ಮಹಾನ್ ಚಿಂತಕರೇ ಬ್ರಹ್ಮಶ್ರೀ ನಾರಾಯಣಗುರುಗಳು ಜಾತಿ–ಮತ–ಭೇದಗಳನ್ನು ಮೀರಿ ಮಾನವನನ್ನು ಮಾನವನಾಗಿ ಕಾಣಬೇಕು, ಪ್ರೀತಿಸಬೇಕು ಹಾಗೂ ಗೌರವಿಸಬೇಕು ಎಂಬುದೇ ನಾರಾಯಣಗುರುಗಳ ಮೂಲ ಧ್ಯೇಯವಾಗಿತ್ತು ಎಂದು ವಿದೂಷಿ ಭರತ್ಯನಾಟ್ಯ ಶಿಕ್ಷಕಿ ಮಲ್ಲಿಕಾ ಜ್ಯೋತಿಗುಡ್ಡೆ ಅವರು ಹೇಳಿದ್ದಾರೆ.

ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಅಮ್ಟಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯಕುಮಾರ್ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 64 ರಲ್ಲಿ ಅವರು ಗುರುಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ನಾಗೇಶ್ ಪೂಜಾರಿ ನೈಬೇಲು ಉಪಾಧ್ಯಕ್ಷರಾದ ಕಿರಣ್ ರಾಜ್ ಪೂoಜರೆಕೋಡಿ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಯಶೋಧರ ಕಡಂಬಳಿಕೆ, ಸದಸ್ಯರಾದ ಆನಂದ ಪೂಜಾರಿ ಅಜ್ಜಿಬೆಟ್ಟು ಪ್ರಶಾಂತ್ ಅಮೀನ್ ಏರಮಲೆ, ನಯನ ಜಯ ಪಚ್ಚಿನಡ್ಕ , ಮಲ್ಲಿಕಾ ಪಚ್ಚಿನಡ್ಕ ಯತೀಶ್ ಬೊಳ್ಳಾಯಿ ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕೆ, ಅರುಣ್ ಕುಮಾರ್, ಶಿವಾನಂದ ಎಂ, ರಾಜೇಶ್ ಸುವರ್ಣ , ದಿನೇಶ್ ಸುವರ್ಣ ರಾಯಿ , ನಾಗೇಶ್ ಪೊನ್ನೋಡಿ , ಮತ್ತಿತರರು ಉಪಸ್ಥಿತರಿದ್ದರು .
ಸಂಗೀತದಲ್ಲಿ ರಾಜೇಶ್ ಅಮ್ಟೂರು, ಕಾರ್ತಿಕ್ ದೇರಾಜೆ. ವಿನಯ ಆಚಾರ್ಯ ಸಹಕರಿಸಿದರು
ಯುವವಾಹಿನಿ ಬಂಟ್ವಾಳ ಘಟಕದ ಸಮಾಜ ಸೇವಾ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿದರು, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ವಂದಿಸಿದರು



