ನೆತ್ತರಕೆರೆ :ಶ್ರೀ ರಾಮ ನಾಮ ತಾರಕ ಜಪ ಯಜ್ಞ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
ಬಂಟ್ವಾಳ: ಪುದು,ಕೊಡ್ಮಾಣ್,ಕಳ್ಳಿಗೆ, ತುಂದೆ, ಅರ್ಕುಳ ಮತ್ತು ಮೇರಮಜಲು ಗ್ರಾಮಗಳನ್ನು ಕೇಂದ್ರವಾಗಿಟ್ಟುಕೊಂಡು ಡಿ 21ರಂದು ನಡೆಯುವ ಶ್ರೀ ರಾಮ ನಾಮ ತಾರಕ ಜಪ ಯಜ್ಞದ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಶುಕ್ರವಾರ ಸಂಜೆ ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನದ ವಠಾರದಲ್ಲಿ ಚಾಲನೆ ನೀಡಲಾಯಿತು.

ದೇವಳದ ವೇದಮೂರ್ತಿ ಮುರಳೀ ಭಟ್ ಕಲ್ಲತಡಮೆ ಅವರು ಪ್ರಾರ್ಥಿಸಿದರು, ಬಳಿಕ ರಾಧಾ ಸುರಭಿ ಗೋ ಮಂದಿರದ ಭಕ್ತಿಭೂಷಣ್ ಪ್ರಭುಜೀ ಅವರು ಕಾಯಿ ಹೊಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಚೆಂಡೆ,ವಾದ್ಯಗೋಷ್ಠಿ, ಕುಣಿತ ಭಜನೆ ಹೊರೆಕಾಣಿಕೆ ಮೆರವಣಿಗೆಗೆ ಮೆರಗು ನೀಡಿತು,ಶ್ರೀ ರಾಮ ನಾಮ ತಾರಕ ಜಪ ಯಜ್ಞದ ಮಾರ್ಗದರ್ಶಕರಾದ ಪ್ರಕಾಶ್ಚಂದ್ರ ರೈ ದೇವಸ್ಯ ಅವರು ದೀಪ ಪ್ರಜ್ವಲನೆಗೈದು
ಉಗ್ರಾಣ ಮುಹೂರ್ತವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಗಾಂಭೀರ ಫರಂಗಿಪೇಟೆ,ದೇವಸ್ಯ, ರವೀಂದ್ರ ಕಂಬಳಿ ಸುಜೀರು,ಉಮೇಶ್ ಶೆಟ್ಟಿ ಬರ್ಕೆ, ಜ್ಯೋತಿಂದ್ರ ಶೆಟ್ಟಿ ಮುಂಡಾಜೆ ಗುತ್ತು, ಸತೀಶ್ ನಾಯ್ಗ ಕೊಡ್ಮಾಣ್, ಅನಿಲ್ ಪಂಡಿತ್,ಸುರೇಶ ಭಂಡಾರಿ ಅರ್ಬಿ, ಪದ್ಮನಾಭ ಶೆಟ್ಟಿ ಕೊಟ್ಟಿಂಜ, ಪದ್ಮನಾಭ ಶೆಟ್ಟಿ ಪುಂಚಮೆ, ಗಣೇಶ್ ಸುವರ್ಣ, ಪುರುಷೋತ್ತಮ್ ಕೊಟ್ಟಾರಿ ಮಾಡಂಗೆ, ಜಗದೀಶ್ ಎನ್, ಜಗದೀಶ ಪೂಜಾರಿ ಕುಮ್ಡೇಲ್, ಜಗದೀಶ ಕಡೆಗೋಳಿ, ರಾಘವ ಪೆರ್ಲಬೈಲು, ಗಿರೀಶ್ ಶೆಟ್ಟಿ ಕುಂಪನ ಮಜಲು, ಸುಬ್ರಮಣ್ಯ ರಾವ್, ಜಗದೀಶ ಬಂಗೇರ ಹೊಳ್ಳರ ಬೈಲು, ನವೀನ್ ಚಾಪೆ, ಸದಾನಂದ ನೆತ್ತರಕೆರೆ, ಭಾಸ್ಕರ ನೆತ್ತರಕೆರೆ, ಮೋಹನ್ ಆಚಾರ್ಯ, ಜಯರಾಮ ಶೆಟ್ಟಿ ಅಬ್ಬೆಟ್ಟು, ಹರೀಶ್ ಕಲ್ಲಜಾಲ್, ವಿಜಯ ಕಜೆಕಂಡ, ಮನೋಹರ ಕಂಜತ್ತೂರು, ರಾಮಚಂದ್ರ ಬಂಗೇರ ಮಾರಿಪಲ್ಲ, ರಮಾನಂದ ಶೆಟ್ಟಿ ಬೆಂಜನಪದವು,ಪ್ರತಾಪ್ ಆಳ್ವ ಸುಜೀರು ಗುತ್ತು, ಸಂದೇಶ್ ದರಿಬಾಗಿಲು, ಜಯಶ್ರೀ ಕರ್ಕೇರ ಮೇರಮಜಲು, ಶೈಲಜಾ ಪಿ ಶೆಟ್ಟಿ, ಸುಲೋಚನಾ ಶೆಟ್ಟಿ ಬೆಂಜನ ಪದವು, ಹರಿನಾಕ್ಷಿ ಸದಾನಂದ, ಮಾಲತಿ ಚಂದ್ರಹಾಸ, ಸುಶೀಲ ಶೇಖರ, ಅಮಿತಾ ವಿ ಪಚ್ಚಿನಡ್ಕ, ಶ್ರೀ ರಾಮ ತಾರಕ ಜಪ ಯಜ್ಞ ಸಮಿತಿಯ ಅಧ್ಯಕ್ಷ ದೇವದಾಸ್ ಕೆ ಆರ್ ಕೊಡ್ಮಾಣ್ ,ಸಂಯೋಜಕರಾದ ತೇವು ತಾರಾನಾಥ ಕೊಟ್ಟಾರಿ,ದಾಮೋದರ ನೆತ್ತರಕೆರೆ, ಕಾರ್ಯದರ್ಶಿ ಬಿನುತ್ ಕುಮಾರ್ ಕೋಶಾಧಿಕಾರಿ ಕಿಶೋರ್ ಕುಮಾರ್ ,ಹೊರೆ ಕಾಣಿಕೆ ಸಮಿತಿಯ ಪ್ರಮುಖರಾದ ಸಂತೋಷ ಕುಮಾರ್, ಯೋಗಿಶ್ ಕುಮ್ಡೇಲ್, ಸಂತೋಷ್ ಕೊಡ್ಮಾಣ್ ಮತ್ತಿತರರಿದ್ದರು.



