ಕೈಕಂಬ : ದಿ. ಮೋಹಿನಿ ಅಪ್ಪಾಜಿ ನಾÊಕ್ ಅವರು ಮಗುವಿನಂತೆ ನೋಡಿಕೊಂಡಿದ್ದ ಸಂಸ್ಥೆ ಇದು. ಅವರ ಸ್ಮರಣಾರ್ಥ ಪುತ್ಥಳಿ ಅನಾವರಣ ಮಾಡಲು ಸಂತೋಷವಾಗುತ್ತದೆ. ಇಲ್ಲಿ ಸಾಮಾನ್ಯ ಮಕ್ಕಳೊಂದಿಗೆ ದಿವ್ಯಾಂಗ ಮಕ್ಕಳು ಕಲಿಯುತ್ತಿದ್ದಾರೆ ಎಂಬುದು ಹೆಮ್ಮೆಯ ವಿಚಾರ. ದಿವ್ಯಾಂಗ ಮಕ್ಕಳಿಗೆ ತಂದೆ-ತಾಯಿಯರ ಹತ್ತಿರದ ಪ್ರೀತಿ ಅಗತ್ಯವಿದೆ. ಹಾಗಾಗಿ ಇಲ್ಲಿ ವಸತಿಗೃಹ ನಿರ್ಮಿಸಿಲ್ಲ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿರುವ ಇಲ್ಲಿನ ಮಕ್ಕಳಿಗೆ ಪಾಠ ಮತ್ತು ಪ್ರೀತಿ ಸಿಗುತ್ತಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಇನ್ನಷ್ಟು ಶ್ರಮ ವಹಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ನ. ೨೯ರಂದು ವಾಮಂಜೂರಿನ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ರಜತ ಮಹೋತ್ಸವ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕಿ ದಿ. ಮೋಹಿನಿ ಅಪ್ಪಾಜಿ ನಾÊಕ್ ಅವರ ಪುತ್ಥಳಿ ಅನಾವರಣ ಹಾಗೂ ರಜತ ಸಂಭ್ರಮ ಉದ್ಘಾಟಿಸಿದ ಬಳಿಕ ಬಳಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಮಾತನಾಡಿದರು.

ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ದಿ. ಮೋಹಿನಿ ಅಪ್ಪಾಜಿ ನಾÊಕ್ ಮತ್ತು ಡಾ. ವೀರೇಂದ್ರ ಹೆಗ್ಗಡೆ ಅವರು ಸಮಾಜಕ್ಕೆ ಆದರ್ಶಪ್ರಾಯವಾಗಿದ್ದಾರೆ. ೨೫ ವರ್ಷಗಳ ಹಿಂದೆ ದಿ. ನಾÊಕ್ ಅವರ ವೈಯಕ್ತಿಕ ನಿವೇದನೆಯ ಫಲವಾಗಿ ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟಿದ್ದ ಈ ಸಂಸ್ಥೆ ಇಂದು ಸರ್ವಾಂಗೀಣ ಪ್ರಗತಿ ಕಂಡಿದೆ. ಇದರ ಹಿಂದೆ `ಮಾನವೀಯ ಮಿಡಿತ’ ಕೆಲಸ ಮಾಡಿದೆ. ದಿವ್ಯಾಂಗರು ಮತ್ತು ಸಾಮಾನ್ಯ ಮಕ್ಕಳು ಒಂದೇ ಸೂರಿನಡಿ ಕಲಿಯುತ್ತಿರುವ ಸಂಸ್ಥೆ ಜಗತ್ತಿನ ಬೇರೆಲ್ಲೂ ಇಲ್ಲ ಎಂದರು.

ಕರ್ಣಾಟಕ ಬ್ಯಾಂಕ್ ಮಂಗಳೂರು ಇದರ ಪ್ರಧಾನ ಕಚೇರಿಯ ಆಡಳಿತ ನಿರ್ದೇಶಕ ಹಾಗೂ ಸಿಇಒ ರಾಘವೇಂದ್ರ ಎಸ್. ಭಟ್ ಮತ್ತು ಮಾಜಿ ಮೇಯರ್ ಭಾಸ್ಕರ್ ಕೆ. ಅವರು ಸಂಸ್ಥೆಗೆ ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಆಧುನಿಕ ಸಮಾಜದಲ್ಲಿ ಇನ್ನೂ ಮನುಷ್ಯತ್ವ ಸತ್ತಿಲ್ಲ ಎಂಬುದಕ್ಕೆ ಈ ಶಾಲೆ ಜ್ವಲಂತ ಸಾಕ್ಷಿö್ಯಯಾಗಿದೆ. ದಿವ್ಯಾಂಗ ಮಕ್ಕಳ ಏಳಿಗೆ ಬಯಸಿ ಇಂತಹದೊಂದು ಶಾಲೆ ಹುಟ್ಟು ಹಾಕಿರುವ ದಿ. ನಾÊಕ್ ಅವರ ಕೆಲಸ ಸ್ಮರಣೀಯ. ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳಲ್ಲೇ ಇದು `ಟಾಪ್ ಮೋಸ್ಟ್’ ಸಂಸ್ಥೆ ಎಂಬ ಭಾವನೆ ನನ್ನದು. ಶಾಲಾಭಿವೃದ್ಧಿಯ ಹಿಂದೆ ದಾನಿಗಳ ನೆರವು ಮರೆಯುವಂತಿಲ್ಲ ಎಂದರು.

ಡಾ. ಹೆಗ್ಗಡೆ, ದಿ. ಮೋಹಿನಿ ಅಪ್ಪಾಜಿ ನಾÊಕ್ ಅವರ ಪುತ್ರಿ ಸುಜಾತಾ ಆರ್. ಶೆಟ್ಟಿ ಮತ್ತು ಪುತ್ರ ಸಂದೇಶ್ ಶೆಟ್ಟಿ, ಸಂಸ್ಥೆಯ ಖಜಾಂಚಿ ಡಾ. ಕೆ. ದೇವರಾಜ್, ಅಂಗವಿಕಲರ ಕಲ್ಯಾಣ ಸಂಸ್ಥೆಯ(ರಿ) ಮಂಗಳೂರು ಇದರ ಕಾರ್ಯದರ್ಶಿ ಪ್ರೊ. ರಾಜೇಂದ್ರ ಶೆಟ್ಟಿ, ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಕರ್ಣಾಟಕ ಬ್ಯಾಂಕ್ ಆಡಳಿತಾಧಿಕಾರಿ ರಾಘವೇಂದ್ರ ಎಸ್. ಭಟ್, ಶಾಲಾ ಹಳೆ ವಿದ್ಯಾರ್ಥಿನಿ ದೇವಿಕಾ ವಿ., ನಿವೃತ್ತಿ ಹಂತದಲ್ಲಿರುವ ಮುಖ್ಯ ಶಿಕ್ಷಕ ರಮೇಶ್ ಆಚಾರ್ಯ ಕೆ., ಸಹ ಶಿಕ್ಷಕಿ ಸುಖಲತಾ, ಕಚೇರಿ ಸಹಾಯಕಿ ನಿರ್ಮಲಾ ಅವರನ್ನು ಸನ್ಮಾನಿಸಲಾಯಿತು. ದಿ. ನಾÊಕ್ ಅವರ ಪುತ್ಥಳಿ ರಚಿಸಿದ ಕಲಾವಿದ ಜಯಪ್ರಸಾದ್ ಆಚಾರ್ಯ ಕೋಟೆಕಾರ್ ಅವರನ್ನು ಗೌರವಿಸಲಾಯಿತು. ರಜತ ಮಹೋತ್ಸವ ಶಾಲಾ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ಶಾಲಾ ಆಡಳಿತಾಧಿಕಾರಿ ನರೇಶ್ ಮಲ್ಲಿಗೆಮಾಡು ಸ್ವಾಗತಿಸಿ ಪ್ರಸ್ತಾವಿಸಿದರು. ವಿದ್ಯಾರ್ಥಿ ನಾಯಕಿ ಕು. ಮಧೂ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುಚೇತಾ, ಉದ್ಯಮಿ ಉದಯ ಕುಮಾರ್ ಕುಡುಪು, ಶಿಕ್ಷಕ ವಿಠಲ ವಾಗ್ಮೋರೆ, ಶಿಕ್ಷಕಿ ಹರಿಣಾಕ್ಷಿ, ಶಾಲಾ ಶಿಕ್ಷಕ-ಶಿಕ್ಷಕೇತರ ವರ್ಗ, ಹಳೆ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕ-ಶಿಕ್ಷಕೇತರರು, ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ಶಾಲಾ ಹಿತೈಷಿಗಳು ಇದ್ದರು. ಶಿಕ್ಷಕಿ ರಮ್ಯಾ ಮತ್ತು ಶಿಕ್ಷಕ ಗಂಗಾಧರ ನಿರೂಪಿಸಿದರೆ, ಶಾಲಾ ಮುಖ್ಯ ಶಿಕ್ಷಕ ರಮೇಶ್ ಆಚಾರ್ಯ ಕೆ., ವಂದಿಸಿದರು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *