ಬಡಗಬೆಳ್ಳೂರು:ಸುಮಾರು 22ವರ್ಷಗಳಿಂದ ಯಕ್ಷಕಲಾ ಸಂಘವು ಹಲಾವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ. ಇಂತಹ ಸಂಸ್ಥೆಯನ್ನು ಕಟ್ಟಲು ಸಂಘದ ಸದಸ್ಯರ ಶ್ರಮ ಬಹಳಷ್ಠಿದೆ. ಸಮಾಜದಲ್ಲಿ ಯುವಕರು ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜಮುಖಿಯಾದ ಚಿಂತನೆಯನ್ನು ಮೂಡಿಸಿ ಕಾರ್ಯಪ್ರವೃತಿಯಾಗಬೇಕು ಎಂದು ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ ಮುಖ್ಯೋಪಾಧ್ಯಾಯ ಸಂಕಪ್ಪ ಶೆಟ್ಟಿ ಹೇಳಿದರು. ಅವರು ಭಾನುವಾರ ಯಕ್ಷಕಲಾ ಸಂಘ ಯಕ್ಷಧಾಮ ವರಕೋಡಿ ಇದರ ಆಶ್ರಯದಲ್ಲಿ ದಿ.ವಿಶ್ವಂಭರ ಭಂಡಾರಿ ವೇದಿಕೆಯಲ್ಲಿ ಕೆಸರ್ ಡೊಂಜಿ ದಿನ ಕೆಸರುಗದ್ದೆ ಕ್ರೀಡಾ ಕೂಟದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕೆಸರಿನಲ್ಲಿ ಒಂದು ದಿನ ಆಗದೇ ದಿನನಿತ್ಯ ಕೆಸರಿನಲ್ಲಿ ತೊಡಗಿಸಿಕೊಂಡು ಕೃಷಿ ಚಟುವಟಿಕೆಯು ನಿರಂತರವಾಗಲಿ ಹಡೀಲು ಬಿದ್ದ ಭೂಮಿಯನ್ನು ಇಂತಹ ಸಂಘ ಸಂಸ್ಥೆಗಳು ಕೃಷಿಯನ್ನು ಮಾಡುವ ಮೂಲಕ ರೈತರನ್ನು ಪ್ರೋತ್ಸಹಿಸಿ ಎಂದರು.

ದೇರಳಕಟ್ಟೆ ಯೆನೆಪೋಯ ಆಯುರ್ವೇದ ಕಾಲೇಜು ಸಹಪ್ರಾಧ್ಯಾಪಕ ಡಾ.ಬಾಲಕೃಷ್ಣ ಕುಮಾರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಹಿಂದೂ ಜಾಗರಣಾ ವೇದಿಕೆ ಮಂಗಳೂರು ಜಿಲ್ಲಾಸಹಸಂಯೋಜಕ ಪುಷ್ಪರಾಜ್ ಕಮ್ಮಾಜೆ ,ವಿಶ್ವಹಿಂದೂ ಪರಿಷತ್ ಭಜರಂಗದಳ ಬಂಟ್ವಾಳ ಪ್ರಖಂಡ ಮಾತೃಸಂಯೋಜಕಿ ಸೌಮ್ಯರಾಣಿ ಬೆಂಜನಪದವು,ಜಿಲ್ಲಾ ಪ್ರಶಸ್ತಿ ವಿಜೇತ ನಿರಂಜನ ಸೇಮಿತ ಕುಂದಬೆಟ್ಟು, ನಾಯಕ್ ಎಲೆಕ್ಟ್ರಿಕಲ್ಸ್ ಮಾಲಕ ನಾರಾಯಣ ನಾಯಕ್, ನಾಗಶ್ರೀ ಮಿತೃವೃಂದದ ಅಧ್ಯಕ್ಷ ಹರೀಶ್ ಮುಡಯಿಕೋಡಿ,ಯಕ್ಷಕಲಾ ಸಂಘದ ಅಧ್ಯಕ್ಷ ಲೋಕೇಶ್ ಜೋಗಿ ಮತ್ತಿತರರು ಇದ್ದರು.

ಕಾರ್ಯಕ್ರಮವನ್ನು ದಿನೇಶ್ ವರಕೋಡಿ ಹಾಗೂ ಕಿಶೋರು ಪಲ್ಲಿಪಾಡಿ ನಿರೂಪಿಸಿದರು. ಮಹೇಶ್ ವರಕೋಡಿ ಸ್ವಾಗತಿಸಿ ವಂದಿಸಿದರು. ಬಳಿಕ ಬಾಲಕ ಬಾಲಕಿಯರಿಗೆ ಕೆಸರುಗದ್ದೆ ಓಟ,ಮಹಿಳೆಯರಿಗೆ ತ್ರೋಬಾಲ್,ಪಂದ್ಯಾಟ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.

