ಕೈಕಂಬ: ಕಂದಾವರ ಶ್ರೀ ಮಹಮ್ಮಾಯಿ ಪರಿವಾರ ಶಕ್ತಿಗಳ ಕ್ಷೇತ್ರ ಬಾಳಿಕೆಬೆಟ್ಟು ಇದರ ಪುನರ್ ಪ್ರತಿಷ್ಠೆ ಕಲಶಾಭಿಷೇಕದ ಆಮಂತ್ರಣ ಪತ್ರ ಬಿಡುಗಡೆಯು ಕಂದಾವರ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾ ಭವನದಲ್ಲಿ ನ.8ರಂದು ಭಾನುವಾರ ನಡೆಯಿತು.

ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿದ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ ವೈ ಭರತ್ ಶೆಟ್ಟಿ ಮಾತನಾಡಿ ಇಂತಹ ಧಾರ್ಮಿಕ ಕ್ಷೇತ್ರ ಗಳ ಅಭಿವೃದ್ಧಿ ಯಿಂದ ಹಿಂದೂ ಸಮಾಜ ಸಧ್ರಡ ಗೊಳ್ಳುತ್ತದೆ ಈ ಕ್ಷೇತ್ರ ಕ್ಕೆ ನನ್ನಿಂದಾದ ಸಹಕಾರ ವನ್ನು ನೀಡುತ್ತಾಬಂದಿದ್ದೇನೆ ಇನ್ನೂ ಮುಂದೆಯೂ ನೀಡುತ್ತೇನೆ ಎಂದರು.

ಶ್ರೀ ನೀಲಕಂಠ ದೇವಸ್ಥಾನ ದ ಆಡಳಿತ ಮೊಕ್ತೇಸರರಾದ ಶ್ರೀ ಲಕ್ಷ್ಮಿ ನಾರಾಯಣ ಉಡುಪ ಮಾತಾನಾಡಿ ಸರ್ವ ಭಕ್ತರ ಒಗ್ಗಟ್ಟು ಸಮರ್ಪಣಾ ಮನೋಭಾವ ಹಾಗೂ ಭಕ್ತಿ ಶ್ರದ್ದೆಯಿಂದ ಮುಖ್ಯವಾಗಿ ಭಗವಂತನ ಕೃಪೆಯಿಂದ ಈ ಕ್ಷೇತ್ರದ ಪುನರ್ ಪ್ರತಿಷ್ಠೆ ವಿಜೃಂಭಣೆ ಯಿಂದ ನಡೆಯಲಿ ಎಂದರು.
ಬೈಲು ಏತ ಮೊಗರುಗುತ್ತು ರಮಾನಾಥ್ ಅತ್ತಾರ್. ಸಚಿತ್ ರೈ ಬಡಿಲ ಗುತ್ತು. ಕಿರಣ್ ಪಕ್ಕಳ ಪೆರ್ಮಂಕಿಗುತ್ತು, ಗಜಾನನ ಭಟ್ ಸುಕೇಶ್ ಮಾನೈ ತಲಕಲ, ಜಯರಾಮ್ ಕೋಟ್ಯಾನ್. ಶುಭ ಹಾರೈಸಿದರು. ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಮಾರ್ಲ ಕಂದಾವರ ಬಾಳಿಕೆ ಅಧ್ಯಕ್ಷತೆ ವಹಿಸಿದ್ದರು.

ಗಡಿಕಾರರಾದ ಯತಿರಾಜ್ ಆಳ್ವ ಕಾರಮೊಗರುಗುತ್ತು. ಬಾಲ ಕೃಷ್ಣ ರೈ ಕೊಳಂಬೆಗುತ್ತು. ಸುಜಿತ್ ಆಳ್ವ ಏತ ಮೊಗರುಗುತ್ತು, .ಶಿವ ಪ್ರಸಾದ್ ಹೆಗ್ಡೆ ಮಿಜಾರು, ಜೀವನ್ ಮಲ್ಲಿ ಅದ್ಯಪಾಡಿ ಗುತ್ತು. ದರೇಂದ್ರ ಪಕ್ಕಳ ಕೌಡೂರು, ಪುರು ಷೋತ್ತಮ ಪೂಜಾರಿ ಪೂಜಾರಿ ಮನೆ., ಪ್ರಭಾಕರ ಆಚಾರ್ಯ ಕಂದಾವರ, ಹಂಸ ರಾಜ ಚೌಟ. ಬಾಳಿಕೆ, ಸೋಹನ್ ಅತಿಕಾರಿ, ಚಂದ್ರಹಾಸ ಶೆಟ್ಟಿ ನಾರಳ, ತಮ್ಮಯ್ಯ ಪೂಜಾರಿ ಗಂಜಿ ಮಠ, ಸೇಸಪ್ಪ ರಾಣ್ಯ, ಮಹಾಮ್ಮಾಯಿ ಸಮಿತಿ ಅಧ್ಯಕ್ಷರಾದ ದೊಂಬಯ್ಯ ಬಾಳಿಕೆ ಬೆಟ್ಟು, ಪ್ರಧಾನ ಕಾರ್ಯದರ್ಶಿ ಸೀತಾರಾಮ ರಾಣ್ಯ, ಊರಿನ ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ವಿವಿಧ ಸಮಿತಿಯವರು ಉಪಸ್ಥಿತರಿದ್ದರು. ವಿಶ್ವನಾಥ ಕೋಟ್ಯಾನ್ ಪ್ರಾರ್ಥಿಸಿದರು ಪ್ರತಿಷ್ಠಾ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಸತೀಶ್ ಶೆಟ್ಟಿ ಕಂದಾವರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
