ದೇರಾಜೆ ಸೀತಾರಾಮಯ್ಯ ಜನ್ಮಶತಮಾನೋತ್ಸವ-28
ವಿಟ್ಲ:ದೇರಾಜೆ ಸೀತಾರಾಮಯ್ಯ ಜನ್ಮಶತಮಾನೋತ್ಸವ ಸಮಿತಿ ದೇರಾಜೆ ಸೀತಾರಾಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ, ಬೆಂಗಳೂರು ಇವರ ಸಹಯೋಗದಲ್ಲಿ ದೇರಾಜೆ ಸೀತಾರಾಮಯ್ಯ ಜನ್ಮಶತಮಾನೋತ್ಸವ-28.
ಅಕ್ಷಯ ವಸಂತ-ದೇರಾಜೆ ಸಂಸ್ಕರಣೆ- ತಾಳಮದ್ದಳೆ , ಅಕ್ಷಯ ವಸಂತ ಜಾದೂ ಮೂಲಕ ಜನಜಾಗೃತಿ -ಗಿಲಿಗಿಲಿ ನಮ್ಯಾಜಿಕ್ ಉಡುಪಿ ದೇರಾಜೆ ಸೀತಾರಾಮಯ್ಯ ಸಂಸ್ಮರಣೆ ಸಭಾ ಕಾರ್ಯಕ್ರಮವು ನ. 4ರಂದು ಬುಧವಾರ ಮುಡಿಪು ವಿಠಲ ವಿದ್ಯಾಸಂಘ,ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್ ಇಲ್ಲಿ ಜರಗಿತು.

ಅಧ್ಯಕ್ಷತೆಯನ್ನು ದೇರಾಜೆ ಶತಮಾನೋತ್ಸವ ಸಮಿತಿ ಗೌರವಾದ್ಯಕ್ಷ ಏರ್ಯ ಲಕ್ಷ್ಮೀನಾರಾಯಣಆಳ್ವ ವಹಿಸಿದ್ದರು.
ಪ್ರಸಿದ್ಧ ತಾಳಮದ್ದಳೆ ಅರ್ಥಧಾರಿ ಸಂಸ್ಮರಣಾ ಭಾಷಣವನ್ನು ಬೆಳ್ಳಾರೆ ರಾಮ ಜೋಯಿಸ ಮಾಡಿದರು. ವೇದಿಕೆಯಲ್ಲಿ ಆನೇಕಾರ ಗಣಪಯ್ಯ ಪ್ರೋ.ಶಂಕರ , ಮೂರ್ತಿ ದೇರಾಜೆ ಶ್ರೀಕರ ಭಟ್ ಮರಾಠೆ, ಸೂರ್ಯನಾರಾಯಣ ಪಂಜಾಜೆ, ನಾಗರಾಜ ಭಟ್ ಪೆದಮಲೆ, ಮುಗುಳಿ ತಿರುಮಲೇಶ್ವರ ಭಟ್, ಎಲ್ ಎನ್ ಕೂಡೂರು ಮತ್ತಿತರರು ಉಪಸ್ಥಿತರಿದ್ದರು. ನಂತರ ಉತ್ತರನ ಪೌರುಷ ತಾಳಮದ್ದಳೆ ನಡೆಯಿತು.




