Published On: Sat, Mar 2nd, 2024

ಮಾ.3 ರಿಂದ ಮಾ.12 ರವರೆಗೆ ಪಾಣೆಮಂಗಳೂರು ಶ್ರೀ ಭಯಂಕರೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶ,ಜಾತ್ರಾ ಮಹೋತ್ಸವ

ಬಂಟ್ವಾಳ: ನರಿಕೊಂಬು  ಗ್ರಾ.ಪಂ.ವ್ಯಾಪ್ತಿಯ  ಪಾಣೆಮಂಗಳೂರು ಹಳೇ ಸೇತುವೆ ಸಮೀಪ ಪಶ್ಚಿಮಾಭಿಮುಖವಾಗಿ ನಿರ್ಮಾಣಗೊಂಡಿರುವ ಇತಿಹಾಸ ಪ್ರಸಿದ್ದ ಶ್ರೀ ಭಯಂಕರೇಶ್ವರ ಸದಾಶಿವ ದೇವಸ್ಥಾನದಲ್ಲಿ ಶ್ರೀ ಗಣಪತಿ ಮತ್ತು ಶ್ರೀ ದುರ್ಗಾ ಸಾನಿಧ್ಯ ಗಳ ಪುನ: ಪ್ರತಿಷ್ಠೆ ಹಾಗೂ ಸದಾಶಿವ ದೇವರಿಗೆ ಸಹಿತ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ಜಾತ್ರಾಮಹೋತ್ಸವವು ಮಾ.3 ರಿಂದ ಮಾ.12 ರವರೆಗೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಬಿ.ರಘನಾಥ ಸೋಮಯಾಜಿ ತಿಳಿಸಿದ್ದಾರೆ.


ಶನಿವಾರ ದೇವಸ್ಥಾನದ ವಠಾರದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಾ. 3 ರಿಂದ 8 ರವರೆಗೆ ಬ್ರಹ್ಮಕಲಶೋತ್ಸವ ಹಾಗೂ ಮಾ. 8 ರಿಂದ 12 ರವರೆಗೆ ಜಾತ್ರಮಹೋತ್ಸವ ನಡೆಯಲಿದೆ ಎಂದರು.


ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷ ಡಾ.ಮೋಹನ್ ಆಳ್ವ,ಅಧ್ಯಕ್ಷರಾದ ಜಗನ್ನಾಥ ಬಂಗೇರ,ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗಿಡ್ಡೆ ಅವರ ನೇತೃತ್ವದ ವಿವಿಧ ಸಮಿತಿಗಳು ಬ್ರಹ್ಮಕಲಶ ಹಾಗು ಜಾತ್ರಾಮಹೋತ್ಸವದ ಯಶಸ್ಸಿಗೆ ಶ್ರಮಿಸುತ್ತಿದೆ.ಈ ಸಂದರ್ಭಗಳಲ್ಲಿ‌ ಪ್ರತಿ ನಿತ್ಯ ಬೆಳಗ್ಗೆ ವಿವಿಧ ವೈಧಿಕ ವಿಧಿ ವಿಧಾನಗಳು,ಸಂಜೆ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಸ್ವಾಮೀಜಿಗಳು,ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯಲಿದೆ ಎಂದು ವಿವರಿಸಿದರು.


ಮಾ.5 ರಂದು ಹೊರೆಕಾಣಿಕೆ:
ಮಾ.5 ರಂದು ದೊಂಪದ ಬಳಿಯ ನಾಲ್ಕೈತ್ತಾಯ ದೈವಸ್ಥಾನದಿಂದ ಭಯಂಕರೇಶ್ವರ ದೇವಸ್ಥಾನಕ್ಕೆ ಅದ್ದೂರಿಯ ಹೊರೆಕಾಣಿಕೆ ಮೆರವಣಿಗೆಯು ನಡೆಯಲಿದೆ.

ಮಾ.7 ರಂದು ಶ್ರೀಗಣಪತಿ ಮತ್ತು ದುರ್ಗಾ ಸಾನಿಧ್ಯದ ಬಿಂಬ ಪ್ರತಿಷ್ಠೆಅಷ್ಟಬಂಧ ಲೇಪನ,ಮಾ. 8 ರಂದುಶ್ರೀ ಭಯಂಕರೇಶ್ವರ ಸದಾಶಿವ ದೇವರಿಗೆ ಅಷ್ಠಬಂಧ ಲೇಪನ,ಪರಿಕಲಶಾಭಿಷೇಕದೊಂದಿಗೆ ಬ್ರಹ್ಮಕಲಾಶಾಭಿಷೇಕ ಸಂಪನ್ನಗೊಳ್ಳಲಿದೆ.

ಇದೇ ವೇಳೆ ಹೊರಾಂಗಣದಲ್ಲಿ ನೃತ್ಯ ಭಜನಾ ಸಂಕೀರ್ತನೆ ನಡೆಯಲಿದೆ ಎಂದ ಅವರು ಅಂದು ರಾತ್ರಿ ಜಾತ್ರಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು,ಮಾ.12 ರಂದು ಧ್ವಜಾವರೋಹಣದೊಂದಿಗೆ ಜಾತ್ರಮಹೋತ್ಸವ ಪೂರ್ಣಗೊಳ್ಳಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ,ಸಮಿತಿ ಪದಾಧಿಕಾರಿಗಳಾದ ಪ್ರಕಾಶ್ ಕಾರಂತ್ ಕೆ.,ನರಿಕೊಂಬು,  ರಘು ಸಪಲ್ಯ,ಲೋಕೇಶ್ ಕೆ.,ಪದ್ಮನಾಭ ಮಯ್ಯ ಏಲಬೆ,ಭುವನೇಶ್ ಮೊಗರ್ನಾಡು,ಪ್ರೇಮನಾಥ ಶೆಟ್ಟಿ ಅಂತರ,ರಾಮಚಂದ್ರ ರಾವ್,ಚಂದ್ರಾವತಿ ರತ್ನಾಕರ ನಾಯ್ಕ್,ಪುರುಷೋತ್ತಮ ಸಾಲಿಯಾನ್,ಗೋವಿಂದ ಪೈ ಮೊದಲಾದವರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter