ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಸ್ವಚ್ಛ ಭಾರತ ದಿವಸ ಕಾರ‍್ಯಕ್ರಮ
ಬಂಟ್ವಾಳ: ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜನ್ಮ ದಿನಾಚರಣೆ ನಿಮಿತ್ತ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಸ್ವಚ್ಛ ಭಾರತ ದಿವಸ ಕಾರ‍್ಯಕ್ರಮವನ್ನು ನಡೆಯಿತು. ಶಿಕ್ಷಕಿಯರಾದ ಚೈತ್ರ ಅವರು ಲಾಲ್ ಬಹದ್ದೂರ್ ಶಾಸ್ತ್ರೀ ಮತ್ತು ಮೇಘಶ್ರೀ ಅವರು ಮಹಾತ್ಮಾ ಗಾಂಧೀಜಿಯವರ ಜೀವನ ಚರಿತ್ರೆಯ ಬಗ್ಗೆ ವಿವರಿಸಿದರು. ಮುಖ್ಯೋಪಾಧ್ಯಾಯರಾದ ಗೋಪಾಲ ಎಂ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಮಧುಶ್ರೀ ಸ್ವಾಗತಿಸಿದರು.ವಿನುತ ವಂದಿಸಿದರು.

ನಂತರ ಎಲ್ಲಾ ಅಧ್ಯಾಪಕರು ಪ್ರೌಢಶಾಲೆ ಪ್ರಾರಂಭವಾದ ಕಲ್ಲಡ್ಕ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದರು. ಹಿರಿಯ ಶಿಕ್ಷಕರಾದ ಜಿನ್ನಪ್ಪ ಶ್ರೀಮಾನ್ ಶಾಲೆ ಆರಂಭವಾದ ದಿನಗಳನ್ನು ನೆನಪಿಸಿದರು. ಅಲ್ಲಿಂದ ಕುಚ್ಚುಗುಡ್ಡೆಯಲ್ಲಿನ ಪ್ರೌಢಶಾಲೆಯ ಗ್ರಾಮವನಕ್ಕೆ ಭೇಟಿ ನೀಡಿ ಅಧ್ಯಾಪಕರು ಸ್ವಚ್ಛತಾ ಕಾರ್ಯ ಮಾಡಿದರು.
