ಯುವ ಸಂಗಮ ಮೆಲ್ಕಾರ್ ವತಿಯಿಂದ ಶತಾಯುಷಿಗೆ ಸನ್ಮಾನ
ಬಂಟ್ವಾಳ: ೧೦೫ ವರುಷದ ಶತಾಯುಷಿ ಕಂಚಿಕರ ಪೇಟೆ ಕಲ್ಯಾಣಿ ಆಚರ‍್ತಿಯವರಿಗೆ ಮೆಲ್ಕಾರ್ ಯುವ ಸಂಗಮದ ವತಿಯಿಂದ ಸನ್ಮಾನಿಸಲಾಯಿತು.
ನರಹರಿ ಪರ್ವತದ ಆಡಳಿತ ಮೊಕ್ತೇಸರರಾದ ಡಾ ಪ್ರಶಾಂತ್ ಮಾರ್ಲರವರಿಂದ ಫಲಪುಷ್ಪ ನೀಡಿ ಸನ್ಮಾನಿಸಿದರು. ಈಸಂದರ್ಭ ನ್ಯಾಯವಾದಿ ಶೈಲಜಾ ರಾಜೇಶ್, ರಾಜೇಶ್.ಬಿ, ಪರಮೇಶ್ವರ ಹೆಗಡೆ, ಮೋಹನ್ ಬೋಳಂಗಡಿ, ಸಂಘದ ಅಧ್ಯಕ್ಷರಾದ ಸತೀಶ.ಪಿ.ಸಾಲಿಯಾನ್ ಕಾರ್ಯದರ್ಶಿ ಓಂ ಪ್ರಕಾಶ್ ಗೌರವಾಧ್ಯಕ್ಷರಾದ ಎಂ.ಎನ್.ಕುಮಾರ್, ಕೃಷ್ಣ ನಾಯ್ಕ ಉಪಸ್ಥಿತರಿದ್ದರು.