ಬಂಟ್ವಾಳ: ಆದಿದ್ರಾವಿಡ ಸಮಾಜ ಬಾಂಧವರ ಕ್ರೀಡಾಕೂಟ
ಬಂಟ್ವಾಳ: ಆದಿ ದ್ರಾವಿಡ ಸಮಾಜ ಸೇವಾ ಸಂಘ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್ ಜನ್ಮದಿನ, ಸಂಘದ ದಶಮಾನೋತ್ಸವದ ಅಂಗವಾಗಿ ಆದಿ ದ್ರಾವಿಡ ಸಮಾಜ ಬಾಂಧವರ ಕ್ರೀಡಾಕೂಟ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಬಂಟ್ವಾಳದ ಎಸ್ .ವಿ.ಎಸ್. ಪ್ರೌಢಶಾಲೆಯ ಮೈದಾನದಲ್ಲಿ ನಡೆಯಿತು.

ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಚಂಡ್ತಿಮಾರ್ ಅಧ್ಯಕ್ಷತೆ ವಹಿಸಿದ್ದರು. ಪಂದ್ಯಾಟದ ಮಹಿಳೆಯರ ವಿಭಾಗದ ಕೇರಂನಲ್ಲಿ ಮಲ್ಲಿಕಾ, ಸುಧಾ ಚಂಡ್ತಿಮಾರ್ ಪ್ರಥಮ, ಯಶೋಧಾ, ರಮಣಿ ದ್ವಿತೀಯ, ಶಟ್ಸ್ ಬ್ಯಾಡ್ಮಿಂಟನ್‌ನಲ್ಲಿ ಸುಪ್ರಿಯಾ ಎಸ್.ಪಿ., ಮೇಘನಾ ಚಂಡ್ತಿಮಾರ್
ಪ್ರಥಮ, ಸೌಮ್ಯ, ಆಕಾಂಕ್ಷ ದ್ವಿತೀಯ, ತ್ರೋಬಾಲ್‌ನಲ್ಲಿ ಶಿವಶಕ್ತಿ ಚಂಡ್ತಿಮಾರ್ ಪ್ರಥಮ, ಪವರ್ ಏಂಜಲ್ ವಾಮಂಜೂರು ದ್ವಿತೀಯ, ಹಗ್ಗಜಗ್ಗಾಟದಲ್ಲಿ ಶ್ರೀಕೃಷ್ಣ ಕೃಷ್ಣಾಪುರ ಪ್ರಥಮ, ಶಿವಶಕ್ತಿ ಚಂಡ್ತಿಮಾರ್ ದ್ವಿತೀಯ ಬಹುಮಾನ ಪಡೆಯಿತು.

ಪುರುಷರ ವಿಭಾಗದ ಕೇರಂನಲ್ಲಿ ಸಂಜೀವ, ಜಯ ಚಂಡ್ತಿಮಾರ್ ಪ್ರಥಮ, ಪ್ರಕಾಶ್, ವಿಷುಕುಮಾರ್ ದ್ವಿತೀಯ, ಶಟ್ಸ್ ಬ್ಯಾಡ್ಮಿಂಟನ್ ರಾಕೇಶ್, ಸುದೀಪ್ ಪ್ರಥಮ, ವಿಷುಕುಮಾರ್, ನಿಹಾಲ್ ದ್ವಿತೀಯ, ವಾಲಿಬಾಲ್‌ನಲ್ಲಿ ಟೀಂ ಮಂಗ ಳೂರು ಬಿ. ಪ್ರಥಮ, ಟೀಂಮಂಗಳೂರು ಎ. ದ್ವಿತೀಯ, ತಮ್ಮಣ್ಣ ಕೊಡಗು ಆಲ್‌ರೌಂಡರ್ ಪ್ರಶಸ್ತಿ, ಹಗ್ಗಜಗ್ಗಾಟ ಟೀಂ ಮಂಗಳೂರು ಪ್ರಥಮ ಹಾಗೂ ಯುನೈಟೆಡ್ ಕೃಷ್ಣಾಪುರ ದ್ವಿತೀಯ ಬಹುಮಾನ ಪಡೆಯಿತು.