ಏ.೩೦ರಿಂದ ಮೇ.೬ರ ವರೆಗೆ ಅಜಿನಡ್ಕ ಬ್ರಹ್ಮಕಲಶೋತ್ಸವ
ಕೈಕಂಬ: ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ ಜ್ಞಾನ ದೇಗುಲದ ಬ್ರಹ್ಮಕಲಶೋತ್ಸವ, ಪುನರ್ ಪ್ರತಿಷ್ಠೆ ಮತ್ತು ವರ್ಷಾವಧಿ ಉತ್ಸವವು ಏ.೩೦ರಿಂದ ಮೇ.೬ರ ಸೋಮವಾರದ ವರೆಗೆ ನಡೆಯಲಿದೆ.

ಏ.೩೦ರಂದು ಮಂಗಳವಾರ ತೋರಣ ಮುಹೂರ್ತ, ಸಂಜೆ ೫:೦೦ರಿಂದ ಭಜನಾ ಕಾರ್ಯಕ್ರಮ, ಸುದರ್ಶನ ಹೋಮ ನಡೆಯಲಿದೆ.
ಮೇ.೧ರಂದು ಬುಧವಾರ ಗಣಹೋಮ, ನವಗ್ರಹಹೋಮ ಹಾಗೂ ಮಹಾಪೂಜೆ, ಆದಿವಾಸ ಪೂಜೆ ನಡೆಯಲಿದೆ.
ಮೇ.೨ರಂದು ಗುರುವಾರ ಬೆಳಗ್ಗೆ ೧೦:೧೪ಕ್ಕೆ ರಾಯರ ಬೃಂದಾವನ ಪ್ರತಿಷ್ಠೆ, ಆಂಜನೇಯ ಪ್ರತಿಷ್ಠೆ, ಜೀವಕಲಶಾಭಿಷೇಕ ನಡೆಯಲಿದೆ.
ಮೇ.೩ರಂದು ಶುಕ್ರವಾರ ಶಿವರೂಪಿಣಿ ಪ್ರತಿಷ್ಠೆ, ದೇವಿಯ ಉಯ್ಯಾಲೆ ಪ್ರತಿಷ್ಠೆ ನಡೆಯಲಿದೆ.
ಮೇ.೫ರಂದು ಭಾನುವಾರ ಕಲಶ ಜೋಡನೆ, ಕಲಶ ಪೂಜೆ, ಮೇ.೬ರಂದು ಸೋಮವಾರ ಗುರು ರಾಘವೇಂದ್ರ ಸ್ವಾಮಿಗೆ ಮತ್ತು ಪರಿವಾರ ದೇವರುಗಳಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಬಳಿಕ ರಾತ್ರಿ ೭:೩೦ಕ್ಕೆ ನಡೆಯಲಿರುವ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅಧ್ಯಕ್ಷತೆ ವಹಿಸಲಿದ್ದು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಹಾಗೂ ಮಾಣಿಲದ ಮೋಹನ್‌ದಾಸ್ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ರಮೇಶ್ ಬೆಂಜನಪದವು, ಜನಾರ್ಧನ ಶಾಂತಿ, ವಿಜಯ್ ಮಾದುಕೋಡಿ, ವಿಜಯ್ ಬೆಂಜನಪದವು, ರಘು ಎಲ್. ಶೆಟ್ಟಿ, ರೂಪಶ್ರೀ ನಾರಾಯಣ್ ನಾಯ್ಕ್, ಬಿಜೇಶ್ ಚೌಟ, ರಮಾನಾಥ ರೈ,ಪದ್ಮರಾಜ್ ಆರ್., ಪದ್ಮನಾಭ ಕೊಟ್ಟಾರಿ, ಹರಿಕೃಷ್ಣ ಬಂಟ್ವಾಳ, ಸತೀಶ್ ಕುಂಪಲ, ಚೆನ್ನಪ್ಪ ಕೋಟ್ಯಾನ್, ಭುವನೇಶ್ ಪಚ್ಚಿನಡ್ಕ, ಗಂಗಾಧರ ಪೂಜಾರಿ ಕೊಪ್ಪಳ, ತುಂಗಪ್ಪ ಬಂಗೇರ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸತ್ಯಜಿತ್ ಸುರತ್ಕಲ್, ಮುರಳಿ ಭಟ್ ಅನಂತಡ್ಕ, ಶರಣ್ ಪಂಪ್‌ವೆಲ್, ಭರತ್ ಕುಮ್ಡೇಲ್, ಗೋವಿಂದ ಪ್ರಭು, ನರಸಿಂಹ ಮಾಣಿ, ಸಂಜೀವ ಪೂಜಾರಿ ಬಿರ್ವ, ವೆಂಕಟೇಶ್ ನಾವಡ, ರಾಧಾಕೃಷ್ಣ ತಂತ್ರಿ, ಚಂದ್ರಹಾಸ ಪೂಜಾರಿ, ಪ್ರಕಾಶ್ ಆಳ್ವ, ಚಂದ್ರಹಾಸ ಪಲ್ಲಿಪಾಡಿ, ಕಿಶೋರ್ ಪಲ್ಲಿಪಾಡಿ, ಕಮಲಾಕ್ ಪೂಜಾರಿ, ಉಮೇಶ್ ಸಾಲ್ಯಾನ್, ರೋಶನ್ ಪುಂಚಮೆ ಮತ್ತು ನಿಶಾಂತ್ ಪೂಜಾರಿ ಆಗಮಿಸಲಿದ್ದಾರೆ.
ರಾತ್ರಿ ೧೦:೦೦ಗಂಟೆಗೆ ಕತ್ತಲೆ ಕಾಣದ ಗುಳಿಗನಿಗೆ ಕೋಲ ಸೇವೆ ನಡೆಯಲಿದೆ ಎಂದು ಶ್ರೀ ರಾಘವೇಂದ್ರ ಸ್ವಾಮಿ ಮಠದ ಬ್ರಹ್ಮಕಲಶ ಸೇವಾ ಸಮಿತಿಯ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.