ಬ್ರಹ್ಮಕಲಶೋತ್ಸವದ ಹಸಿರು ಹೊರೆ ಕಾಣಿಕೆ ಮೆರವಣಿಗೆ
ಕೈಕಂಬ: ಶ್ರೀ ರಾಘವೇಂದ್ರ ಮಠ ಅಜಿನಡ್ಕದಲ್ಲಿ ಏ.30ರಿಂದ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಏ.28ರಂದು ಭಾನುವಾರ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಕಲ್ಪನೆಯಿಂದ ಪ್ರಾರಂಭಗೊಂಡು ಅಜಿನಡ್ಕದ ಶ್ರೀ ರಾಘವೇಂದ್ರ ಮಠದ ವರೆಗೆ ಸಾಗಿದ್ದ ಹಸಿರು ಹೊರೆ ಕಾಣಿಕೆಯ ಮೆರವಣಿಗೆಯಲ್ಲಿ ಕುಣಿತ ಭಜನೆ, ಚೆಂಡೆ ವಾದನಗಳೊಂದಿಗೆ ಶೋಭಾಯಾತ್ರೆಯಲ್ಲಿ ಊರ ಪರವೂರ ಭಗವತ್ಭಕ್ತರು ಪಾಲ್ಗೊಂಡಿದ್ದರು.
ಶ್ರೀ ರಾಘವೇಂದ್ರ ಮಠದ ಶ್ರೀ ಶಂಕರ ಸ್ವಾಮೀಜಿ ಹಾಗೂ ಮಠದ ಭಕ್ತಾದಿಗಳು ಹಸಿರು ಹೊರೆಕಾಣಿಕೆ ಮೆರವಣಿಗೆಯನ್ನು ಬರಮಾಡಿಕೊಂಡರು.