ಲಲಿತಾ ಸಹಸ್ರನಾಮ ಹೋಮ ಹಾಗೂ ಏಕಾಹ ಭಜನೋತ್ಸವ
ಕೈಕಂಬ: ಮಂಡಾಡಿಯ ಶ್ರೀ ದುರ್ಗಾಂಬಾ ಮಂದಿರದಲ್ಲಿ ೧೨ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಏ.೨೬ ಶುಕ್ರವಾರದಿಂದ ಏ.೨೯ರ ಸೋಮವಾರದವರೆಗೆ ಲಲಿತಾ ಸಹಸ್ರನಾಮ ಹೋಮ ಮತ್ತು ಏಕಾಹ ಭಜನೋತ್ಸವ ನಡೆಯಲಿದೆ.

ಏ.೨೭ರಂದು ಶನಿವಾರ ಲಲಿತಾ ಸಹಸ್ರನಾಮ ಹೋಮ ನಡೆಯಲಿದ್ದು, ಮಧ್ಯಾಹ್ನ ೧೨:೦೦ಗಂಟೆಗೆ ಮೂಡುಬಿದ್ರ ಶ್ರೀ ಕರಿಂಜ ಕ್ಷೇತ್ರದ ಶಕ್ತಿ ಗುರು ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶಿರ್ವಚನ ನೀಡಲಿದ್ದಾರೆ.
ಸಂಜೆ ೬:೦೦ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೮:೩೦ಕ್ಕೆ ವೈಷ್ಣವಿ ಕಲಾವಿದೆರ್ ಕೊಯಿಲ ಇವರಿಂದ ಕುಸಲ್ದ ಗೌಜಿ ನಾಟಕ ಪ್ರದರ್ಶನ ನಡೆಯಲಿದೆ.
ಏ.೨೮ರಂದು ಭಾನುವಾರ ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ ಏಕಾಹ ಭಜನೋತ್ಸವ ಹಾಗೂ ಭಜನಾ ಮಂಗಳೋತ್ಸವ ನಡೆಯಲಿದೆ.