Published On: Thu, Dec 21st, 2017

ಈ ವರ್ಷದ ‘ಮದರ್​ ತೆರೆಸಾ ಸ್ಮಾರಕ ಪ್ರಶಸ್ತಿ’ ಪಡೆದ ನಟಿ ಯಾರು ಗೊತ್ತೇ?

 

20000

ಸಿನೆಮಾ: ಸಾಮಾಜಿಕ ನ್ಯಾಯಕ್ಕಾಗಿ ನೀಡುವ ಈ ವರ್ಷದ ಮದರ್​ ತೆರೆಸಾ ಸ್ಮಾರಕ ಪ್ರಶಸ್ತಿಗೆ ಬಾಲಿವುಡ್​ನ ಖ್ಯಾತ ನಟಿ ಪ್ರಿಯಾಂಕ ಛೋಪ್ರಾ ಭಾಜನರಾಗಿದ್ದಾರೆ.

ಯುನಿಸೆಫ್​ ನ ಗುಡ್ ವಿಲ್ ಅಂಬಾಸಡರ್​ ಆಗಿಯೂ ನಟಿ ಸೇವೆ ಸಲ್ಲಿಸುತ್ತಿದ್ದು, ನಾನಾ ಜನ ಕಲ್ಯಾಣ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತಮ್ಮನ್ನು ತಾನು ತೊಡಗಿಸಿಕೊಂಡಿದ್ದಾರೆ.

ಸಮಾಜ ಸೇವೆಗೆ ಆಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡ ಗೌರವಿಸಲಾಗಿದ್ದು, ಈ ಪ್ರಶಸ್ತಿಯನ್ನು ಪ್ರಿಯಾಂಕ ಅನುಸ್ಥಿತಿಯಲ್ಲಿ ತಾಯಿ ಮಧು ಛೋಪ್ರಾ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಇತ್ತೀಚೆಗಷ್ಟೆ ಸಿರಿಯಾಗೆ ಭೇಟಿ ನೀಡಿ ಅಲ್ಲಿನ ನಿರಾಶ್ರಿತ ಮಕ್ಕಳ ಜತೆ ನಟಿ ಪ್ರಿಯಾಂಕ ಛೋಪ್ರಾ ಅವರು ಸಂವಾದ ನಡೆಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಈ ಹಿಂದೆ ಖ್ಯಾತನಾಮರಾದ ಕಿರಣ್ ಬೇಡಿ, ಅಣ್ಣಾ ಹಜಾರೆ, ಆಸ್ಕರ್​ ಫರ್ನಾಂಡಿಸ್, ಸುಧಾ ಮೂರ್ತಿ, ಮಲಾಲ ಯೂಸಫ್ಜಾಯ್, ಸುಷ್ಮಿತಾ ಸೇನ್, ಬಿಲ್ಕಿಸ್ ಬನೋ ಎಧಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter