*ಮಲೆನಾಡ ಕೋಗಿಲೆ ತಂಡದಿಂದ ಮೂಡಿಬರಲಿದೆ “ಓ ಮೇಘವೇ” ಕನ್ನಡ ಆಲ್ಬ0 ಸಾಂಗ್*
ಕರ್ನಾಟಕದಾದ್ಯಂತ ಮಲೆನಾಡ ಕೋಗಿಲೆ ಎನ್ನುವ ಸಂಗೀತ ಸ್ಪರ್ಧೆಯನ್ನು ಆಯೋಜಿಸಿ ಸಂಗೀತ ರಸಿಕರ ಮನ ಗೆದ್ದಿರುವ ತಂಡವೊಂದು ಹೊಸ ಪ್ರಯತ್ನದೊಂದಿಗೆ ಜನತೆಯನ್ನು ರಂಜಿಸಲು ಹೊರಟಿದೆ.
ಹಳೆಯ ಚಲನಚಿತ್ರಗಳಿಗೆ ಹೊಸರೂಪಕೊಟ್ಟು ಯುವಜನತೆಗೆ ಇಷ್ಟವಾಗುವಂತೆ ಹೊಸತಾಣಗಳಲ್ಲಿ ವಿಭಿನ್ನವಾಗಿ ಚಿತ್ರೀಕರಣವನ್ನು ಮಾಡಿರುವ ಮಲೆನಾಡ ಕೋಗಿಲೆ ತಂಡದ ಓ ಮೇಘವೇ ಆಲ್ಬಂ ಸಾಂಗ್ ಹಂಸಿನಿ ಮ್ಯೂಸಿಕ್ &ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದೆ.
ಈ ವಿಡಿಯೋ ಆಲ್ಬಂ ಸಾಂಗ್ ನ ಚಿತ್ರೀಕರಣ ಮುಗಿದಿದ್ದು ನ್ಯೂ ವರ್ಲ್ಡ್ ಕ್ರಿಯೇಷನ್ಸ್ ಇವರು ಚಿಕ್ಕಮಗಳೂರಿನ ನೈಸರ್ಗಿಕ ತಾಣಗಳಲ್ಲಿ ಚಿತ್ರೀಕರಿಸಿದ್ದಾರೆ.
ರಾಘವೇಂದ್ರ ಡಿಜಿ ಹೆಬ್ರಿ, ಅನನ್ಯ ಜೆ. ಗೌಡ ರಂಜದಕಟ್ಟೆ, ಅಶ್ವಿನಿ ದೇವಾಡಿಗ ಉಡುಪಿ ಇವರು ಸಾಂಗ್ ಹಾಡಿದ್ದು, ನೇಹಾ ಗೌಡ ಶಾಂತವೇರಿ, ರಾಘವೇಂದ್ರ ಡಿಜಿ ಹೆಬ್ರಿ ಇವರು ವಿಡಿಯೋ ಸಾಂಗ್ ನಲ್ಲಿ ನಟಿಸಿದ್ದಾರೆ.
ಮಲೆನಾಡ ಕೋಗಿಲೆ ತಂಡದ ಉತ್ತಮ ಉದ್ದೇಶದ ಈ ಆಲ್ಬಂ ಸಾಂಗ್ ಯುವ ಜನರನ್ನು ಆಕರ್ಷಿಸುವುದರಲ್ಲಿ ಒಂದು ಮಾತಿಲ್ಲ.
* *ದೀಪಕ್ ಕಾಮತ್ ಎಳ್ಳಾರೆ*