ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ “ಲಕ್ಷ ಕುಂಕುಮಾರ್ಚನೆ”
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ನ.೨೬ರಂದು ಭಾನುವಾರ ಬೆಳಗ್ಗೆ ಗಂಟೆ ೮:೦೦ರಿಂದ ೧೧:೦೦ರ ತನಕ ಲೋಕಕಲ್ಯಾಣಾರ್ಥವಾಗಿ ಕೂಟ ಮಹಾ ಜಗತ್ತು, ಪೊಳಲಿ ಅಂಗ ಸಂಸ್ಥೆ ವತಿಯಿಂದ ಸೇವಾರ್ಥವಾಗಿ “ಲಕ್ಷ ಕುಂಕುಮಾರ್ಚನೆ” ಸೇವೆ ನಡೆಯಲಿರುವುದು.
ಭಕ್ತಾದಿಗಳು ಸೇವೆಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕೂಟ ಮಹಾ ಜಗತ್ತು, ಪೊಳಲಿ ಅಂಗಸಂಸ್ಥೆಯ ಆಡಳಿತ ಮಂಡಳಿ, ಕಾರ್ಯನಿರ್ವಹಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.