ಕಟೀಲು ಶ್ರೀ ಭ್ರಾಮರಿಯ ಸನ್ನಿಧಾನದಲ್ಲಿ ದ್ವಜಾರೋಹಣ: ಜಾತ್ರಾ ಮಹೋತ್ಸವ ಪ್ರಾರಂಭ
ಕೈಕಂಬ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲಿನಲ್ಲಿ ಏ.೧೩ರಂದು ಶನಿವಾರ ದ್ವಜಾರೋಹಣಗೊಂಡು ಜಾತ್ರಾ ಮಹೋತ್ಸವ ಪ್ರಾರಂಭಗೊಂಡಿತು.
ಜಾತ್ರಾ ಮಹೋತ್ಸವವು ಏ.13ರಿಂದ ಏ.೨೦ರ ಶನಿವಾರದ ವರೆಗೆ ನಡೆಯಲಿದ್ದು, ಏ.17ರಂದು ಬುಧವಾರ ಬೆಳ್ಳಿರಥೋತ್ಸವ ಹಾಗೂ ಏ.19ರಂದು ಶುಕ್ರವಾರ ಬ್ರಹ್ಮರಥೋತ್ಸವ ನಡೆಯಲಿದೆ.
ಈ ಸಂದರ್ಭದಲ್ಲಿ ದೇವಳದ ಸರಸ್ವತಿ ಸದನದಲ್ಲಿ ಮಹೋತ್ಸವದ ಪ್ರತಿದಿನ ಸಂಜೆ 5:00ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.