ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘ ; ದತ್ತಿನಿಧಿ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮಂಗಳೂರು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ (ರಿ.) ೨೦೨೩ನೇ ಸಾಲಿನ ಈ ಬಾರಿಯ ದತ್ತಿನಿಧಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
ಕನ್ನಡ ಪತ್ರಿಕಾ ರಂಗದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುವು ದು. ೮ ವಿಭಾಗಗಳಾಗಿಸಿ ಸಾಧನೆ ಮಾಡಿದ ಪತ್ರಕರ್ತರಿಗೆ ಪ್ರಶಸ್ತಿ ನೀಡಲಾಗುವುದು. ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಸ್ಮರಣಾರ್ಥ ಎಡನೀರು ಮಠ, ಅವ್ವ ಸೇವಾ ಟ್ರಸ್ಟ್ ಹುಬ್ಬಳ್ಳಿ ಸಂಸ್ಥಾಪಕ ಕರ್ನಾಟಕ ವಿಧಾನ ಪರಿಷತ್ತ್ನ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಡಾ| ಸಿ.ಸೋಮಶೇಖರ್ (ಐಎಎಸ್), ಹವ್ವಾ ಹಸನ್ ಫೌಂಡೇಶನ್ ಕುದುಕ್ಕೋಳಿ ಇದರ ಸಂಸ್ಥಾಪಕ ಅಬ್ದುಲ್ಲ ಮಾದುಮೂಲೆ, ಕೆ.ವಿ.ಆರ್ ಟ್ಯಾಗೋರ್ ಸ್ಮರಣಾರ್ಥ ಶ್ರೀ ಟಿ.ತಿಮ್ಮೆಗೌಡ ಮತ್ತು ಡಾ| ವೆಂಕಟೇಶ್ ತುಪ್ಪಿಲ್, ಮೊಗರೊಡಿ ಗೋಪಾಲಕೃಷ್ಣ ಮೇಲಾಂಟ ಸ್ಮರಣಾರ್ಥ ಶ್ರೀ ಹರ್ಷ ಮೇಲಾಂಟ, ಪ್ರಜೋದಯ ಜೆ.ಆರ್ ಕೆಂಚೇ ಗೌಡ ಹಾಸನ ಹಾಗೂ ಶ್ರೀ ಪ್ರಭಾಕರ ಕಲ್ಲುರಾಯ ಬನದಗದ್ದೆ ಪ್ರಾಯೋಜಕತ್ವದಲ್ಲಿ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
ಕಳೆದ ೨೦೨೨ರ ಸಾಲಿನಲ್ಲಿ ಹಿರಿಯ ಪತ್ರಕರ್ತ ಡಾ| ಸದಾನಂದ ಪೆರ್ಲ, ಮೊಹಮ್ಮದ್ ಆರಿಫ್ ಪಡುಬಿದ್ರಿ, ಎಸ್.ಜಗದೀಶ್ಚಂದ್ರ ಅಂಚನ್, ಜಯಪ್ರಕಾಶ್ ಶೆಟ್ಟಿ ಉಪ್ಪಳ, ಕೆ.ರಾಧಾಕೃಷ್ಣ ಉಳಿಯತ್ತಡ್ಕ, ಡಾ| ವಾಣಿ ಉಚ್ಚಿಲ್ಕರ್ ಮುಂಬಯಿ ಹಾಗೂ ಸವಿತಾ ರೈ ಅವರಿಗೆ ನೀಡಲಾಗಿತ್ತು.
ಆಸಕ್ತ ಪತ್ರಕರ್ತರು ಅಥವಾ ಪತ್ರಕರ್ತ ಹಿತೈಷಿಗಳು ಅರ್ಜಿಯನ್ನು ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಬಿ.ಕೆ.ಟವರ್, ಸುಬ್ಬಯ್ಯಕಟ್ಟೆ, ಅಂಚೆ : ಕುಡಾಲ್‌ಮೆರ್ಕಳ, ಮಂಗಲ್ಪಾಡಿ, ಕಾಸರಗೋಡು-೬೭೧೩೨೪ ಈ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ: ೯೦೭೪೧೦೦೩೧೪ ಈ ಸಂಖ್ಯೆಗೆ ಕರೆ ಮಾಡಬಹುದು ಎಂದು ಸಂಘಟಕರು ತಿಳಿಸಿದ್ದಾರೆ.