ಅನ್ನಪ್ಪಾಡಿ ಕ್ಷೇತ್ರದಲ್ಲಿ ಶ್ರೀ ಬಾಲ ಗಣಪತಿ ಮೂಲ ಮಂತ್ರ ಲಕ್ಷಜಪ,ಸಮಾಲೋಚನಾ ಸಭೆ
ಬಂಟ್ವಾಳ: ಸಜೀಪಮೂಡ ಗ್ರಾಮದ ಅನ್ನಪ್ಪಾಡಿಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಡಿ. 28 ರಂದು ಶ್ರೀ ಬಾಲ ಗಣಪತಿ ಮೂಲ ಮಂತ್ರ ಲಕ್ಷಜಪ ಧೂರ್ವ ಹೋಮ ಬ್ರಹ್ಮಶ್ರೀ ನೀಲೇಶ್ವರ ಕೆ.ಉಚ್ಚಿಲತ್ತಾಯ ಪದ್ಮನಾಭತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು,ಇದರ ಪೂರ್ವ ಸಿದ್ಧತಾ ಸಭೆದೇವಳದ ವಠಾರದಲ್ಲಿ ನಡೆಯಿತು.

ಯಾಗ ಸಮಿತಿ ಅಧ್ಯಕ್ಷ ಎಸ್ .ಶ್ರೀಕಾಂತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು,, ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಅವರು ಧಾರ್ಮಿಕ ಕಾರ್ಯಕ್ರಮದ ರೂಪುರೇಷೆಯ ಮಾಹಿತಿ ನೀಡಿದರು. ಆಡಳಿತ ಸಮಿತಿ ಅಧ್ಯಕ್ಷ ಯಶವಂತ. ದೇರಾಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಹಾಗೂ ಹೊರೆ ಕಾಣಿಕೆಯ ಮಾಹಿತಿ ತಿಳಿಸಿದರು
ಸ್ಥಳೀಯ ಪಂಚಾಯಿತಿನ ಮಾಜಿ ಅಧ್ಯಕ್ಷ ವಿಶ್ವನಾಥ ಬೆಳ್ಚಡ, ಸಮಿತಿಪದಾಧಿಕಾರಿಗಳಾದ ನಿತಿನ್ ಅರಸ ,ಚಂದ್ರಶೇಖರ್ ,ಹರೀಶ್ ಬಂಗೇರ ,ಗಿರೀಶ್ ಕುಮಾರ್ ,ರಮೇಶ ಅನ್ನ ಪಾಡಿ,ಅಶೋಕಗಟ್ಟಿ ನಂದಾವರ,ಸುರೇಶ್ ಬಂಗೇರ,ಲಿಂಗಪ್ಪ ದೋಟ,ಭಾಸ್ಕರ ಮೊದಲಾದವರು ಸಲಹೆ ಸೂಚನೆ ನೀಡಿದರು



