6.5 ಕೆ.ಜಿ ಗಾಂಜಾ ವಶ: ಮಾರಾಟಗಾರನ ಬಂಧನ
ಬಂಟ್ವಾಳ : ಬಿ.ಸಿ.ರೋಡಿನ ರೈಲ್ವೇ ಹಳಿ ಸಮೀಪ ಬಂಟ್ವಾಳ ವಲಯದ ಅಬಕಾರಿ ನಿರೀಕ್ಷಕರು ಮತ್ತವರ ತಂಡ ಗಾಂಜಾ ಹೊಂದಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಸಂತೋಷ್ ಸೋಂಕರ್(28) ಬಂಧಿತ ಆರೋಪಿಯಾಗಿದ್ದು,ಈತನಲ್ಲಿದ್ದ 1173 ಪ್ಲಾಸ್ಟಿಕ್ ಸಾಚೆಟ್‍ಗಳಲ್ಲಿ ಗಾಂಜಾ ಅಮಲು ಪದಾರ್ಥವನ್ನು ಹೊಂದಿದ್ದು, ಸುಮಾರು 6.590 ಕೆ.ಜಿ ಗಾಂಜಾ ಉಂಡೆಗಳನ್ನು ವಶಪಡಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.ಬಂಧಿತ ಆರೋಒಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದಂತೆ ಹಾಗೂ ಅಬಕಾರಿ ಉಪ ಆಯುಕ್ತರ ಮತ್ತು ಬಂಟ್ವಾಳ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಂತೆ ಬಂಟ್ವಾಳ ವಲಯದ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಶಿವಣಗಿ ಕಾರ್ಯಾಚರಣೆ ನಡೆಸಿದ್ದು, ಸಿಬ್ಬಂದಿಗಳಾದ ಪ್ರಕಾಶ್, ಬಸವರಾಜ, ಶ್ರೀನಿವಾಸ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.



