Published On: Fri, Nov 7th, 2025

 ರಾ.ಸ್ವ.ಸೇ.ಸಂಘದ ವಿರುದ್ಧ ಅಪಪ್ರಚಾರ ಕಾನೂನು ಕ್ರಮಕ್ಕೆ ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ರಾಜ್ಯಪಾಲರಿಗೆ ಮನವಿ

ಬಂಟ್ವಾಳ: ಕಳೆದ ಶತಮಾನಗಳಿಂದ ರಾಷ್ಟ್ರದ ಸಂಕಷ್ಟದ ಸಂದರ್ಭಗಳಲ್ಲಿ ನಿರಾಪೇಕ್ಷ ಸೇವೆ ಸಲ್ಲಿಸುವ ರಾ.ಸ್ವ.ಸೇ.ಸಂಘದ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಸಹಿತ ವಿವಿಧ ಬೇಡಿಕೆಯನ್ನು‌ ಈಡೇರಿಸುವಂತೆ ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ನಿಯೋಗ ಬಂಟ್ವಾಳ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.


ಸಂದರ್ಭದಲ್ಲಿ ಬಿ.ಸಿ.ರೋಡಿನ ನ್ಯಾಯವಾದಿ,ವಿ.ಹಿಂ.ಪ.ಬಂಟ್ವಾಳ ಪ್ರಖಂಡದ‌ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಅವರ ನೇತೃತ್ವದ ನಿಯೋಗ ತಹಶೀಲ್ದಾರ್ ಅವರ ಅನುಪಸ್ಥಿತಿಯಲ್ಲಿ ಉಪತಹಶೀಲ್ದಾರ್ ನರೇಂದ್ರನಾತರ ಮಿತ್ತೂರು ಅವರಿಗೆ ಮನವಿ ಸಲ್ಲಿಸಿದೆ


ರಾ.ಸ್ವ.ಸೇ.ಸಂಘ ಕೋಮುವಾದ ದ್ವೇಷ ಅಥವಾ ಸಂವಿಧಾನ ಬಾಹಿರ ಕ್ರಿಯೆಗಳಲ್ಲಿ ತೊಡಗಿದೆ ಎಂಬ  ರಾಜಕೀಯ ಉದ್ದೇಶಕ್ಕಾಗಿ ಮಾಡಲಾಗುತ್ತಿರುವ ಆರೋಪ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ದಂಡನೀಯ ಅಪರಾಧವಾಗಿದೆ.   ಸಂಘವು ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವಾ ಸಂಸ್ಥೆಯಾಗಿದ್ದು, ಕೇಂದ್ರ ಸರಕಾರದ ಆಜ್ಞೆ ಪ್ರಕಾರ ಸರ್ಕಾರಿ ನೌಕರರು ಸಾಮಾಜಿಕ ಸಂಸ್ಥೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿಲ್ಲ.

ಹೀಗಿರುವಾಗ ಸರಕಾರಿ ನೌಕರರು ಸಂಘದ ಪಥಸಂಚಲನದಲ್ಲಿ ಭಾಗವಹಿಸಿದ ಕಾರಣಕ್ಕೆ ಅವರನ್ನು ಅಮಾನತು ಮಾಡಿರುವುದು ಅಧಿಕಾರದ ದುರ್ಬಳಕೆ ಹಾಗೂ ಸಂವಿಧಾನ ಬಾಹಿರ ಕ್ರಮವಾಗಿದ್ದು,  ಅಮಾನತು ಆದೇಶವನ್ನು ತಕ್ಷಣ ರದ್ದುಪಡಿಸಲು ಸಂಬಂಧಿಸಿದ ಅಧಿಕಾರಿಗಿಗೆ ಸೂಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಹಿಂದೂ ಧರ್ಮದ ಪರವಾಗಿ ಸಮಾಜ ಪರಿವರ್ತನೆ ಕಾರ್ಯ ತೊಡಗಿರುವ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರಿಗೆ  ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆ ಪ್ರವೇಶ ನಿಷೇದಿರಿಸುವುದು  ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆಯಾಗಿದ್ದು, ಧಾರ್ಮಿಕ ಸಹಿಷ್ಣುತೆಗೂ ಧಕ್ಕೆಯಾಗಿದೆ. ರಾಜ್ಯಪಾಲರು ಮಧ್ಯಪ್ರವೇಶಿಸಿ,  ಸೂಕ್ತ ತನಿಖೆ ನಡೆಸುವ ಮೂಲಕ ಸತವಾಮೀಜಿಯವರಿಗೆ ವಿಧಿಸಲಾದ ನಿಷೇಧವನ್ನು ತಕ್ಷಣ ರದ್ದುಪಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆಯು ಮನವಿಯಲ್ಲಿ ಒತ್ತಾಯಿಸಲಾಗಿದೆ.


ಸಮಿತಿಯ ಪ್ರಮುಖರಾದಕೇಶವ ದೈಪಲ, ಮಹೇಶ್ ಕುಪ್ಪಿಲ, ಮಿಥುನ್ ಪೂಜಾರಿ ಕಲ್ಲಡ್ಕ, ತಿರುಲೇಶ್ ಬೆಳ್ಳೂರು, ರಾಮಚಂದ್ರ ಕುದನೆ, ನವೀನ್ ಅಂಚನ್ ಶಾಂತಿನಗರ, ಪುನೀತ್ ಕಲ್ಲಡ್ಕ, ರಾಘವೇಂದ್ರ ಕುಪ್ಪಿಲ, ದಿವಾನ್ ಶೆಟ್ಟಿ ಸಜೀಪ, ಪ್ರಜ್ವಲ್ ಗೋಳ್ತಮಜಲು, ದೇವರಾಜ ನಾವುರ್, ರಕ್ಷಿತ್, ರಾಧಾಕೃಷ್ಣ ಬಂಟ್ವಾಳ, ಕಿರಣ್ ಹಾಗೂ ನಾರಾಯಣ ಬಂಟ್ವಾಳ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter