ಸರಪಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಟ್ಯೂಷನ್ ಕ್ಲಾಸ್ ಉದ್ಘಾಟನೆ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿಯೋಜನೆ ಬಿ.ಸಿ ಟ್ರಸ್ಟ್, ಬಂಟ್ವಾಳ ತಾಲೂಕು . ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಸರಪಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಟ್ಯೂಷನ್ ಕ್ಲಾಸ್ ಉದ್ಘಾಟನೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ಭಾಸ್ಕರ್ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ವಲಯದ ಜನಜಾಗೃತಿ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ್ ರವರು ಶುಭ ಹಾರೈಸಿದರು. ಶಾಲೆಯ ಮುಖ್ಯ ಶಿಕ್ಷಕರಾದ ವಿನೋಲ ಸಿಲಿಯ ಪಿಂಟೋ, ಶಾಲಾಭಿವೃದ್ಧಿ ಸದಸ್ಯರಾದ ಧನಂಜಯ ಶೆಟ್ಟಿ ,ಗಿರಿದರ್ ನಾಯಕ್, ಒಕ್ಕೂಟ ಅಧ್ಯಕ್ಷರಾದ ಗಿರೀಶ್, ಶಿಕ್ಷಕರಾದ ಆದಮ‌್ ,ಜಾನವಿಕಾಸ ಸಮನ್ವಯಧಿಕಾರಿ ಸವಿತ,ಸೇವಾಪ್ರತಿನಿಧಿ ಮೋಹಿನಿ,ಶುಭ, ಟ್ಯೂಷನ್ ಶಿಕ್ಷಕಿ ಅಶ್ವಿತ, ಶಾಲೆಯ ಶಿಕ್ಷಕರು. ಒಕ್ಕೂಟ ಸದಸ್ಯರು ಮಕ್ಕಳು ಉಪಸ್ಥಿತರಿದ್ದರು



