ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಾಳೆಪುಣಿ ಒಕ್ಕೂಟದ ವಾರ್ಷಿಕೋತ್ಸವ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಾಳೆಪುಣಿ ಒಕ್ಕೂಟದ ವಾರ್ಷಿಕೋತ್ಸವವು ಕಣಂತೂರು ಧರ್ಮರಸು ಶ್ರೀ ತೋಡಕುಕ್ಕಿನಾರ್ ದೈವಸ್ಥಾನದ ವಠಾರದಲ್ಲಿ ನಡೆಯಿತು.

ಧರ್ಮರಸು ಕ್ಷೇತ್ರದ ಆಡಳಿತ ಮೋಕ್ತಸರರಾದ ಶ್ರೀದೇವಿ ಪ್ರಸಾದ್ ಪೊಯ್ಯತ್ತಾಯರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ನವೀನ್ ಚಂದ್ರ ಕಣಂತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾನಿರ್ದೇಶಕ, ಬಾಬು ನಾಯ್ಕ, ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಧರ್ಮರಸು ಶ್ರೀ ತೊಡಕುಕ್ಕಿನಾರ್ ದೈವಸ್ದಾನದಅನುವಂಶಿಕ ಆಡಳಿತ ಮೊಕ್ತೇಸರರಾದ ಮಂಜು ಭಂಡಾರಿ,ನಿಕಟ ಪೂರ್ವ ಅಧ್ಯಕ್ಷ ನವೀನ್ ಪಾದಲ್ಪಾಡಿ,ಬಾಲಕೃಷ್ಣ ಕಾರಂತ, ತಾಲೂಕಿನ ಎಲ್ಲಾ ವಲಯದ ಅಧ್ಯಕ್ಷರು,ವಲಯ ಮೇಲ್ವಿಚಾರಕರು ವಿಪತ್ತು ನಿರ್ವಹಣಾ ಅಧ್ಯಕ್ಷರು ಉಪಸ್ಥಿತರಿದ್ದರು.



