ಅರ್ಥಶಾಸ್ತ್ರ ಉಪನ್ಯಾಸಕಿ ಸವಿತಾರಿಗೆ ಡಾಕ್ಟರೇಟ್ ಪದವಿ
ಗುರುಪುರ : ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಅರಬಿ ಯು. ಅವರ ಮಾರ್ಗದರ್ಶನದಲ್ಲಿ ಸವಿತಾ ಅವರು ಬರೆದು ಮಂಡಿಸಿರುವ `ದಿ ಇಪ್ಯಾಂಕ್ಟ್ ಆಫ್ ಸ್ಮಾಲ್ ಆ್ಯಂಡ್ ಮೀಡಿಯಂ ಎಂಟರ್‌ಪ್ರೈ ಸೆಸ್(ಎಂ ಎಸ್‌ಇ) ಆನ್ ಟೂರಿಸಂ ಡೆವಲಪ್ಮೆಂಟ್ ಇನ್ ಕರ್ನಾಟಕ’ ಎಂಬ ಪ್ರೌಢ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ನೀಡಿದೆ.

ಪ್ರಸ್ತುತ ಕೆನರಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ದಿ. ಸುಧಾಕರ ಸುವರ್ಣ ಬಿಜೈ ಮತ್ತು ಶೆಡ್ಡೆಗುತ್ತು ಸುಧಾ ಎಸ್. ಸುವರ್ಣ ಅವರ ಪುತ್ರಿ ಹಾಗೂ ದಯಾನಂದ ಪೂಜಾರಿ ಕೌದೋಡಿಯವರ ಪತ್ನಿಯಾಗಿದ್ದಾರೆ



