ಶಾಲೆ ಅಥವಾ ಕಾಲೇಜು ವಿದ್ಯಾರ್ಥಿಗಳಿಗೆ ಮನೆಯಂತಿರಬೇಕು: ರೇI ಫಾI ಅರುಣ್ ವಿಲ್ಸನ್ ಲೋಬೋ
ಬಂಟ್ವಾಳ: ಶಾಲೆ ಅಥವಾ ಕಾಲೇಜು ಎನ್ನುವುದು ವಿದ್ಯಾರ್ಥಿಗಳಿಗೆ ಮನೆಯಂತಿರಬೇಕು. ಹಾಗಾದಾಗ ವಿದ್ಯಾರ್ಥಿಗಳು ಉತ್ಸುಕತೆಯಿಂದ ಆತಂಕವಿಲ್ಲದೆ ಕಲಿಯುತ್ತಾರೆ, ಬೆಳೆಯುತ್ತಾರೆ. ಇಂತಹ ಮನೆಯ ವಾತಾವರಣವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತುಂಬೆಯ ಬಿ.ಎ ಸಂಸ್ಥೆಯು ಒದಗಿಸಿಕೊಟ್ಟಿದೆ ಎಂದು ಮಂಗಳೂರು ಪದುವಾ ಕಾಲೇಜಿನ ಪ್ರಾಂಶುಪಾಲ ರೇI ಫಾI ಅರುಣ್ ವಿಲ್ಸನ್ ಲೋಬೋ ಅವರು ಹೇಳಿದರು.

ತುಂಬೆಯ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ನ ಪ್ರಾರ್ಥಮಿಕ, ಪ್ರೌಢ ಮತ್ತು ಕಾಲೇಜು ವಿದ್ಯಾರ್ಥಿಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಣಚ್ಚೂರು ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಆಯಿಷಾ ಕಾಸಿಮ್ ಮಾತನಾಡುತ್ತಾ ತಾನು ಕಲಿತ ತುಂಬೆ ಕಾಲೇಜಿನ ದಿನಗಳನ್ನು ನೆನಪಿಸಿದರಲ್ಲದೆ ಅದು ತನ್ನ ಜೀವನದ ಟರ್ನಿಂಗ್ ಪಾಯಿಂಟ್ ಆಗಿತ್ತು. ಜೀವನದಲ್ಲಿ ಯಾವುದೇ ಸಾಧನೆಯನ್ನು ಮಾಡಬೇಕಿದ್ದರೆ ಶ್ರಮಪಟ್ಟು ಸಾಧನೆ ಮಾಡುವುದು ಹಾಗೂ ಪುಸ್ತಕದ ಅಗಾಧವಾದ ಓದು ಅಗತ್ಯ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಎಂ.ಇ.ಟಿ.ಯ ಅಧ್ಯಕ್ಷರಾದ ಬಿ. ಅಬ್ದುಲ್ ಸಲಾಂ ಮಾತನಾಡಿ, ವಾರ್ಷಿಕೋತ್ಸವ ಎಂದರೆ ಅದೊಂದು ವಿಶೇಷ ದಿನ. ಯಶಸ್ಸು ಎಂದರೆ ಗುರಿ ಮಾತ್ರವಲ್ಲ ಅದೊಂದು ಪಯಣ.ಆ ಪ್ರಯಾಣದಲ್ಲಿ ನಾವು ಸರಿಯಾದ ಹೆಜ್ಜೆ ಇಡಬೇಕಾದದ್ದು ಅತೀ ಅಗತ್ಯ ಎಂದರು.
ಈ ಸಂದರ್ಭ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ ಹಾಗು ರಾಜ್ಯಮಟ್ಟದ ಕ್ರೀಡಾಪಟುಗಳಾಗಿ ಗುರುತಿಸಿದ ವಿದ್ಯಾರ್ಥಿಗಳಾದ ವಾಸಕಿ ಅಭಯ ಶರ್ಮ ಮತ್ತು ಮೊಹಮ್ಮದ್ ಅಯಾನ್ ಅವರನ್ನು ಸನ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಹಮ್ಮದ್ ಸಿನಾನ್, ನಮೃತಾ ಹಾಗೂ ಮೆಹರುನ್ನೀಸಾ ಇವರನ್ನು ಪುರಸ್ಕರಿಸಲಾಯಿತು. ಸಾಯಿರಾಮ್ ನಾಯಕ್ ಕೆ. ಸನ್ಮಾನಿತರು ಹಾಗೂ ಪುರಸ್ಕೃತರನ್ನು ಪರಿಚಯಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.
ಪಿಟಿಎ ಅಧ್ಯಕ್ಷ ನಿಸಾರ್ ಅಹಮದ್ ವಳವೂರು, ಉಪಾಧ್ಯಕ್ಷೆ ಮೋಹಿನಿ ಸುವರ್ಣ, ಸದಸ್ಯರಾದ ಮ್ಯಾಕ್ಸಿಂ ಕುವೆಲ್ಲೋ, ಮೊಹಮ್ಮದ್ ಶಾಫಿ ಅಮ್ಮೆಮಾರ್ , ಚಂಚಲಾಕ್ಷಿ , ಶರೀಫ್ ವಿಯೆಟ್ನಾಮ್, ತುಂಬೆ ಗ್ರಾಮ ಪಂಚಾಯಿತ್ ನ ಉಪಾಧ್ಯಕ್ಷ ಗಣೇಶ್ ಸಾಲಿಯನ್ , ಮುಖ್ಯ ಶಿಕ್ಷಕಿ ವಿದ್ಯಾ ಕೆ,ಕಚೇರಿ ಅಧೀಕ್ಷಕ ಬಿ.ಅಬ್ದುಲ್ ಕಬೀರ್, ವಿದ್ಯಾರ್ಥಿ ನಾಯಕರಾದ ಮಹಮದ್ ಮಿಶಾಲ್ , ಆಝ್ಮೀ ಸನೋಬರ್, ಮೊಹಮ್ಮದ್ ಇಸ್ಮಾಯಿಲ್ ಅನಾಸ್, ನೌರಿನ್, ಕೆ. ಕೆ ಪೂಂಜಾ, ತುಂಬೆ ಪ್ರಕಾಶ್ ಶೆಟ್ಟಿ, ಬಿ. ಎ.ಐಟಿಐ ಯ ಪ್ರಾಂಶುಪಾಲ ನವೀನ್ ಕುಮಾರ್ ಮೊದಲಾದವರಿದ್ದರು. ಉಪನ್ಯಾಸಕ ದಿನೇಶ್ ಶೆಟ್ಟಿ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ವಿ.ಎಸ್. ಭಟ್ ವರದಿ ವಾಚಿಸಿದರು. ಶಿಕ್ಷಕ ಶಿಕ್ಷಕಿಯರಾದ ಅಮೃತಾ ವಿ, ವೀರಪ್ಪ ಗೌಡ , ಶೃತಿ, ನೀತಾಶ್ರೀ , ಚೇತನ್ ಕುಮಾರ್ ವಿಜೇತರನ್ನು ಸಹಕರಿಸಿದರು ಮುಖ್ಯೋಪಾಧ್ಯಾಯಿನಿ ಮಲ್ಲಿಕಾ ಶೆಟ್ಟಿ ವಂದಿಸಿದರು, ಆಧ್ಯಾಪಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮೂರೂ ವಿಭಾಗಗಳ ವಿದ್ಯಾರ್ಥಿ , ವಿದ್ಯಾರ್ಥಿನಿಯರಿಂದ ಮನೋರಂಜನಾ ವೈವಿಧ್ಯ ನಡೆಯಿತು.



