ಸಿದ್ದಕಟ್ಟೆ ಸಹಕಾರ ಸಂಘಕ್ಕೆ 5.70 ಕೋ.ಬೆಳೆ ವಿಮಾ ಪರಿಹಾರ ಮೊತ್ತ ಬಿಡುಗಡೆ :ಪ್ರಭಾಕರ ಪ್ರಭು
ಬಂಟ್ವಾಳ:ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ 2024-25 ನೇ ಸಾಲಿಗೆ ಸಂಬಂಧಿಸಿದಂತೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯ 1771 ರೈತರ 2037 ಎಕ್ರೆ ಅಡಿಕೆ ಬೆಳೆಗೆ ಅಂದಾಜು ಒಟ್ಟಿಗೆ 5.70 ಕೋ.ರೂ. ವಿಮಾ ಪರಿಹಾರ ಬಿಡುಗಡೆಗೊಂಡಿದ್ದು ಹಂತ ಹಂತವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2024- 25 ನೇ ಸಾಲಿನಲ್ಲಿ ಸಂಘದ ವ್ಯಾಪ್ತಿಯ ರೈತರು ಒಟ್ಟಿಗೆ 53 ಲಕ್ಷ ವಿಮಾ ಪ್ರಿಮಿಯಂ ಪಾವತಿಸಿದ್ದು ಗ್ರಾಮವಾರು ಬಿದ್ದ ಮಳೆಯ ಪ್ರಮಾಣ ಹಾಗೂ ಹವಾಮಾನ ವೈಫರಿತ್ಯದ ಆಧಾರದಲ್ಲಿ ಪರಿಹಾರ ಮೊತ್ತ ನಿಗದಿಯಾಗುತ್ತಿದ್ದು, ಸಿದ್ದಕಟ್ಟೆ ಸಂಫದ ವ್ಯಾಪ್ತಿಯಲ್ಲಿ 28 ಸಾವಿರ ದಿಂದ 30 ಸಾವಿರವರೆಗೂ ಪರಿಹಾರ ಬಿಡುಗಡೆ ಗೊಂಡಿರುತ್ತದೆ.
ಈ ಕುರಿತು ಪ್ರಿಮಿಯಂ ಪಾವತಿಸಿದ ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಪರೀಕ್ಷಿ ಸ ಬಹುದಾಗಿದೆ ಎಂದುಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.



